ಬೆಂಗಳೂರು: ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಝೀ ಕನ್ನಡ ವಾಹಿನಿ ಸದಾ ಮುಂದಿರುತ್ತದೆ. ಅದೇ ನಿಟ್ಟಿನಲ್ಲಿ ಕೆಲ ತಿಂಗಳುಗಳಿಂದ ಸುದ್ದಿಯಾಗುತ್ತಿರುವ ಸೀತಾರಾಮ ʼ ಧಾರಾವಾಹಿ ಬಗ್ಗೆ ವೀಕ್ಷಕರಲ್ಲಿ ಬಾರಿ ಕೂತುಹಲ ಮೂಡಿಸಿತ್ತು. ಆದರೆ ಕೆಲವು ಕಾರಣಗಳಿಂದ ಈ ಧಾರವಾಹಿ ಪ್ರಸರವಾಗಲಿಲ್ಲ.


COMMERCIAL BREAK
SCROLL TO CONTINUE READING

ಇದೀಗ ಈ ಸೀರಿಯಲ್‌ನ ಪ್ರೋಮೋ ಒಂದು ಹೊರ ಬಿದ್ದಿದೆ. ಕನ್ನಡಿಗರ ಬಹುನಿರೀಕ್ಷಿತ ಧಾರಾವಾಹಿ ಸೀತಾರಾಮ ಈಗ ಮತ್ತೆ ಸುದ್ದಿಯಲ್ಲಿದೆ. ಝೀ ಕನ್ನಡದ ಫೇಸ್ ಬುಕ್ ಪೇಜ್ ತೆಗೆದರೆ ಕನ್ನಡಿಗರು ಕೇಳುತ್ತಿದ್ದ ಒಂದೇ ಒಂದು ಪ್ರಶ್ನೆ ಅಂದರೆ ಸೀತಾರಾಮ ಯಾವಾಗ? ಪ್ರತಿ ಬಾರಿ ಪ್ರೋಮೋ ಬಿಟ್ಟು ಕನ್ನಡಿಗರಲ್ಲಿ ಕುತೂಹಲ ಮೂಡಿಸುತ್ತಾ ಬಂದಿರುವ ಸೀತಾರಾಮ ಧಾರಾವಾಹಿ ಈ ಬಾರಿ ಕನ್ನಡಿಗರು ಬಹುದಿನದಿಂದ ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಕೊಡಲು ಹೊಸ ವೇದಿಕೆಯೊಂದನ್ನ ಸಿದ್ದಮಾಡಿಕೊಂಡಿದೆ.


ಇದನ್ನೂ ಓದಿ: D Boss: Darshan: 14 ವರ್ಷದಿಂದ ದರ್ಶನ್‌ ಭೇಟಿಗೆ ಕಾಯುತ್ತಿದ್ದ ಸುದೀಪ್‌.. ಕೊನೆಗೂ ಕೂಡಿಬಂತು ಆ ಸುದಿನ!


ಕನ್ನಡಿಗರನ್ನ ಕಟ್ಟಿಹಾಕಿರುವ ಝೀ ಕನ್ನಡ ವಾಹಿನಿಯ ಹೆಮ್ಮೆಯ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-7 ವೇದಿಕೆಯಲ್ಲಿ ತನ್ನ ಬಹುನಿರೀಕ್ಷಿತ ಧಾರಾವಾಹಿಯ ಬಗ್ಗೆ ಸಿಹಿ ಸುದ್ದಿಯೊಂದನ್ನ ನೀಡೋಕೆ ತಯಾರಾಗಿದೆ.


ಇದನ್ನೂ ಓದಿ: Hit Songs: ಇಲ್ಲಿವೆ ನೋಡಿ ಮಳೆಗಾಲದಲ್ಲಿ ಮನಸ್ಸಿಗೆ ಮುದ ನೀಡುವ ಹಾಡುಗಳು; ಆಲಿಸಿ .. ಆನಂದಿಸಿ..!


ಏಳು ತಿಂಗಳುಗಳ ಕಾಲ ಸೀತಾರಾಮ ಧಾರಾವಾಹಿಗಾಗಿ ಕಾದಿದ್ದ ಕನ್ನಡಿಗರಿಗೆ ಈ ವಾರದ ಡಿಕೆಡಿ ಸೀಸನ್-೭ ಸಂಚಿಕೆಯಲ್ಲಿ ಧಾರಾವಾಹಿಯ ಪ್ರಸಾರದ ದಿನಾಂಕ ಸೇರಿದಂತೆ ಎಲ್ಲಾ ಪ್ರಶ್ನೆಗಳಿಗು ಉತ್ತರ ಸಿಗಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.