Naga Chaitanya - Samantha Ruth Prabhu : ನಾಗ ಚೈತನ್ಯ ಇತ್ತೀಚಿಗೆ ತಮ್ಮ ವೈಯುಕ್ತಿಕ ಜೀವನದಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ನಾಗ ಚೈತನ್ಯ ಮತ್ತು ಅವರ ಮಾಜಿ ಪತ್ನಿ ಸಮಂತಾ ರುತ್ ಪ್ರಭು ಅವರು 2021 ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದರು. ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಈ ಜೋಡಿಯು ವಿಚ್ಛೇದನ ಪಡೆದರು. ನಾಗ ಚೈತನ್ಯ ಪ್ರಸ್ತುತ ಪೊನ್ನಿಯಿನ್ ಸೆಲ್ವನ್ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಈಗ ಅವರ ಮುಂಬರುವ ಚಿತ್ರ ಕಸ್ಟಡಿ ಬಿಡುಗಡೆಗೆ ಮುಂಚಿತವಾಗಿ, ನಾಗ ಚೈತನ್ಯ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಐಶ್ವರ್ಯಾ ರೈ ಮೇಲೆ ಸಲ್ಮಾನ್ ಖಾನ್ ಹಲ್ಲೆ ಆರೋಪ.. ಏನಂದ್ರು ಗೊತ್ತಾ ಭಾಯ್‌ಜಾನ್‌?


ಯೂಟ್ಯೂಬರ್ ಇರ್ಫಾನ್ ಜೊತೆ ಸಂದರ್ಶನದ ಸಂದರ್ಭದಲ್ಲಿ ಟ್ರುಥ್‌ ಆಂಡ್‌ ಡೇರ್‌ ಆಡುತ್ತ ಎಷ್ಟು ಜನರಿಗೆ ಚುಂಬಿಸಿದ್ದಾರೆ ಎಂದು ಹೇಳಿದ್ದಾರೆ. ಅದನ್ನು ಹೇಳುತ್ತ ನಾಗ ಚೈತನ್ಯ ನಾಚಿಕೆ ಪಡುತ್ತಾರೆ ಮತ್ತು "ನನಗೆ ಗೊತ್ತಿಲ್ಲ. ನಾನು ಎಣಿಕೆ ಇಟ್ಟಿಲ್ಲ" ಎಂದು ಹೇಳಿದರು. "ಸಿನಿಮಾಗಳಲ್ಲಿಯೇ ಅನೇಕ ಚುಂಬನದ ದೃಶ್ಯಗಳಿವೆಯಂತೆ. ಹಾಗಾದರೆ ನಾನು ಹೇಗೆ ಎಣಿಸಬಹುದು? ಇದು ಇಲ್ಲಿ ಹೆಚ್ಚು ರಹಸ್ಯವಾಗಿಲ್ಲ" ಎಂದರು. ಇದೇ ವೇಳೆ ಈ ವಿಡಿಯೋ ಹೊರಬಂದ ನಂತರ ನಾನು ತೊಂದರೆಗೆ ಸಿಲುಕುತ್ತೇನೆ ಎಂದು ಕೂಡ ಹೇಳುತ್ತ ನಕ್ಕಿದ್ದಾರೆ.


ಇದನ್ನೂ ಓದಿ: ಪ್ರಿಯಾಂಕಾ ಧರಿಸಿದ ಈ ನೆಕ್‌ಲೇಸ್‌ ಬೆಲೆಗೆ 'ಮನ್ನತ್' ನಂತಹ 2 ಬಂಗಲೆ ಖರೀದಿಸಬಹುದು


ಅದೇ ಸಂದರ್ಶನದಲ್ಲಿ ನಾಗ ಚೈತನ್ಯ ಅವರ ದೊಡ್ಡ ವಿಷಾದದ ಬಗ್ಗೆ ಕೇಳಲಾಯಿತು. ಅವರು ಹೇಳಿದರು, "ನನ್ನ ಜೀವನದಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ. ಎಲ್ಲವೂ ಕಲಿಯುವ ಪಾಠ ಮಾತ್ರ." ಎಂದಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅಕ್ಟೋಬರ್ 2021 ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದರು. ಲಂಡನ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಶೋಭಿತಾ - ನಾಗ ಚೈತನ್ಯ ಅವರ ವೈರಲ್ ಫೋಟೋ ವೈರಲ್‌ ಆಗಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.