Met Gala 2023: ಪ್ರಿಯಾಂಕಾ ಧರಿಸಿದ ಈ ನೆಕ್‌ಲೇಸ್‌ ಬೆಲೆಗೆ 'ಮನ್ನತ್' ನಂತಹ 2 ಬಂಗಲೆ ಖರೀದಿಸಬಹುದು

Met Gala 2023 Looks: ಮೆಟ್ ಗಾಲಾ 2023 ಈವೆಂಟ್ ಪ್ರಾರಂಭವಾಗಿದೆ. ಪ್ರಪಂಚದಾದ್ಯಂತದ ತಾರೆಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ವಿಭಿನ್ನ ಶೈಲಿಯಲ್ಲಿ ವೇಷಭೂಷಣ ತೊಟ್ಟು ಕಾಣಿಸಿಕೊಂಡಿದ್ದಾರೆ. ತಮ್ಮ ಗ್ಲಾಮರ್‌ ಮೂಲಕ ಜನರ ಮನಗೆಲ್ಲುತ್ತಿದ್ದಾರೆ.   

Written by - Chetana Devarmani | Last Updated : May 2, 2023, 07:38 PM IST
  • ಮೆಟ್ ಗಾಲಾ 2023 ಈವೆಂಟ್ ಪ್ರಾರಂಭ
  • ಎಲ್ಲರ ಗಮನಸೆಳೆದ ಪ್ರಿಯಾಂಕಾ ನೆಕ್‌ಲೇಸ್‌
  • ಈ ನೆಕ್‌ಲೇಸ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ
Met Gala 2023: ಪ್ರಿಯಾಂಕಾ ಧರಿಸಿದ ಈ ನೆಕ್‌ಲೇಸ್‌ ಬೆಲೆಗೆ 'ಮನ್ನತ್' ನಂತಹ 2 ಬಂಗಲೆ ಖರೀದಿಸಬಹುದು title=
Priyanka Chopra

Met Gala 2023 Looks: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋಗಳೆ ಹೆಚ್ಚು ಚರ್ಚೆಯಾಗುತ್ತಿವೆ. ಭಾರತೀಯ ಸುಂದರಿಯರಾದ ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಮೆಟ್ ಗಾಲಾಗೆ ಎಂಟ್ರಿ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಆಲಿಯಾ ಭಟ್‌ ಮೆಟಾ ಗಾಲಾಗೆ ಎಂಟ್ರಿಪಡೆದಿದ್ದಾರೆ. ಪ್ರಿಯಾಂಕಾ ಚೋಪ್ರಾ ಈಗಾಗಲೇ ಈ ಕಾರ್ಯಕ್ರಮದ ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಉಡುಪಿನೊಂದಿಗೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಆಕೆಯ ಉಡುಪಿಗಿಂತ ಆಕೆಯ ನೆಕ್ಲೇಸ್ ಹೆಚ್ಚು ಗಮನ ಸೆಳೆದಿದೆ.

ಇದನ್ನೂ ಓದಿ: ಪ್ರಭಾಸ್‌ನ ನಿಕ್ ನೇಮ್‌ನಿಂದ ಕರೆದ ಅನುಷ್ಕಾ ಶೆಟ್ಟಿ.. ಕ್ಯೂಟಾಗಿ ಈ ಸ್ವೀಟಿ ಇಟ್ಟ ಹೆಸರೇನು ಗೊತ್ತಾ?

ಬೆಲೆಬಾಳುವ ಹಾರ ಧರಿಸಿದ ಪ್ರಿಯಾಂಕಾ ಚೋಪ್ರಾ : 

ಪ್ರಿಯಾಂಕಾ ಚೋಪ್ರಾ ಕಾರ್ಯಕ್ರಮಕ್ಕೆ ಆಗಮಿಸಿದಾಗ, ಅವರು ಕಪ್ಪು ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ವ್ಯಾಲೆಂಟಿನೋ ಅವರ ಡಿಸೈನರ್ ಉಡುಪನ್ನು ಧರಿಸಿ, ಪ್ರಿಯಾಂಕಾ ಪತಿ ನಿಕ್ ಜೋನಾಸ್ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಿಳಿ ಕೈಗವಸು, ಎತ್ತರದ ಬನ್, ಬಲೂನ್ ಜಾಕೆಟ್ ಧರಿಸಿದ್ದ ಪ್ರಿಯಾಂಕಾ ತುಂಬಾ ರಾಯಲ್ ಆಗಿ ಕಾಣುತ್ತಿದ್ದರೂ ಅಷ್ಟರಲ್ಲಿ ಅವರ ನೆಕ್ಲೇಸ್ ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ: ಪಾಲಕ್ ತಿವಾರಿಗೆ ಕಿಸ್‌ ಮಾಡುವಾಗ ಫ್ಯಾನ್ಸ್‌ ಕೈಗೆ ಸಿಕ್ಕಿಬಿದ್ದ ಸೈಫ್ ಅಲಿ ಖಾನ್ ಪುತ್ರ!

ಬಲ್ಗೇರಿಯ ವಜ್ರದ ನೆಕ್ಲೇಸ್ :

ಪ್ರಿಯಾಂಕಾ ಚೋಪ್ರಾ ಈ ಡ್ರೆಸ್‌ನೊಂದಿಗೆ ಭಾರವಾದ ನೆಕ್ಲೇಸ್ ಅನ್ನು ಧರಿಸಿದ್ದು, ಅದರ ವೆಚ್ಚವು ಸದ್ಯಕ್ಕೆ ಎಲ್ಲರ ಮನಸೂರೆಗೊಳ್ಳುತ್ತಿದೆ. ಇದು ಬಲ್ಗೇರಿಯ ವಜ್ರದ ನೆಕ್ಲೇಸ್ ಆಗಿದ್ದು, ಇದರ ಬೆಲೆ 25 ಮಿಲಿಯನ್ ಯುಎಸ್ ಡಾಲರ್ ಅಂದರೆ 204 ಕೋಟಿ ಎಂದು ಹೇಳಲಾಗಿದೆ. ಹೀಗಿರುವಾಗ ಈ ಹಾರದ ಬಗ್ಗೆ ಕೇಳುವವರು ಬೆಚ್ಚಿ ಬೀಳುತ್ತಿದ್ದಾರೆ. ಅಂದಹಾಗೆ, ಈ ಕಾರ್ಯಕ್ರಮದ ನಂತರ ಈ ಹಾರವನ್ನು ಹರಾಜು ಮಾಡಲಾಗುವುದು ಎಂದು ಹೇಳಲಾಗುತ್ತಿದೆ.

ನಿಕ್ ಜೋನಾಸ್ ಜೊತೆ ಪ್ರಿಯಾಂಕಾ ಎಂಟ್ರಿ :

ಪ್ರಿಯಾಂಕಾ ಮೆಟ್ ಗಾಲಾ ಈವೆಂಟ್‌ನಲ್ಲಿ ಈ ಹಿಂದೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ ಮತ್ತು ಅವರ ನೋಟವು ಇನ್ನೂ ಜನರ ಕಣ್ಣುಗಳಲ್ಲಿ ಸೆರೆಹಿಡಿಯಲ್ಪಟ್ಟಿದೆ, ಆದರೆ ಈ ಬಾರಿ ಅವರ ನೋಟವು ಅತ್ಯಂತ ಅಮೂಲ್ಯವಾಗಿದೆ. ನಿಕ್ ಜೊನಾಸ್ ಜೊತೆಗಿನ ಅವಳ ಗ್ರ್ಯಾಂಡ್ ಎಂಟ್ರಿ ಎಲ್ಲರ ಮನಗೆದ್ದಿದೆ. 

ಇದನ್ನೂ ಓದಿ: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ನಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News