Trends in celebrity hairstyles and expenses: ಹೇರ್ ಸ್ಟೈಲ್ ನಲ್ಲಿ ಹಲವರು ಸೆಲೆಬ್ರಿಟಿಗಳನ್ನು ಫಾಲೋ ಮಾಡುತ್ತಾರೆ. ಎಂದರೇ ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು, ಅಥ್ಲೀಟ್ ಗಳ ಹೇರ್ ಸ್ಟೈಲ್ ಗಳನ್ನು ಅನುಸರಿಸುತ್ತಾರೆ.. ಆದರೆ ಈ ಸೆಲೆಬ್ರಿಟಿಗಳು ಎಲ್ಲಿ ಹೇರ್‌ ಕಟ್‌ ಮಾಡಿಸುತ್ತಾರೆ.. ಅದಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಎಂಬ ಕುತೂಹಲವೂ ಅನೇಕರಲ್ಲಿದೆ. ಬಹುತೇಕ ಕ್ರಿಕೆಟಿಗರು, ಸೆಲೆಬ್ರಿಟಿಗಳು ಸೆಲೆಬ್ರಿಟಿ ಹೇರ್ ಡಿಸೈನರ್ ಆಗಿರುವ ಅಲೀಮ್ ಹಕೀಮ್ ಅವರಿಂದ ಕೇಶವಿನ್ಯಾಸ ಮಾಡಿಸಿಕೊಳ್ಳುತ್ತಾರೆ... 


COMMERCIAL BREAK
SCROLL TO CONTINUE READING

ಬಾಲಿವುಡ್ ಸೇರಿದಂತೆ ದಕ್ಷಿಣ ಸಿನಿ ಇಂಡಸ್ಟ್ರಿಯ ಬಹುತೇಕ ಎಲ್ಲ ಖ್ಯಾತನಾಮರಿಗೆ ಅಲಿಮ್ ಹೇರ್ ಡಿಸೈನಿಂಗ್ ಮಾಡುತ್ತಾರೆ. ವಾರ್‌ ಸಿನಿಮಾದಲ್ಲಿ ಹೃತಿಕ್ ರೋಷನ್, ಕಬೀರ್ ಸಿಂಗ್‌ನಲ್ಲಿ ಶಾಹಿದ್ ಕಪೂರ್, ಬಾಹುಬಲಿಯಲ್ಲಿ ಪ್ರಭಾಸ್, ಅನಿಮಲ್‌ನಲ್ಲಿ ರಣವೀರ್ ಮತ್ತು ಬಾಬಿ ಡಿಯೋಲ್, ಜೈಲರ್‌ನಲ್ಲಿ ರಜನಿಕಾಂತ್‌ಗೆ ಆಲಿಮ್ ಅವರೇ ಹೇರ್‌ ಸ್ಟೈಲ್ ಮಾಡಿದ್ದು.. 


ಇದನ್ನೂ ಓದಿ-ಮದುವೆಗೂ ಮುನ್ನ ಐಶ್ವರ್ಯಾ ರೈ ಆಸೆ ʼಅದನ್ನುʼ ಮಾಡೋದಾಗಿತ್ತು! ಸದ್ಯ ಬಚ್ಚನ್ ಕುಟುಂಬದೊಂದಿಗಿನ ಸಂಬಂಧ ಹದಗೆಡಲು ಇದೇ ಕಾರಣವೇ?


ಇದಲ್ಲದೆ, ಅಜಯ್ ದೇವಗನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಮಹೇಂದ್ರ ಸಿಂಗ್ ಧೋನಿ, ಮಹೇಶ್ ಬಾಬು, ರಣಬೀರ್ ಸಿಂಗ್, ರೋಹಿತ್ ಶರ್ಮಾ, ಆನಂದ್ ಪಿರಾಮಲ್, ಅರ್ಜುನ್ ಕಪೂರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಆಲಿಮ್‌ನ ಗ್ರಾಹಕರಾಗಿದ್ದಾರೆ. 


ಇದನ್ನೂ ಓದಿ-ಗಗನಸಖಿಯಾಗಿದ್ದ ಪ್ರಿಯಾ ಸುದೀಪ್ ಗೆ ಸಿಕ್ಕಿದ್ದೇಗೆ ಗೊತ್ತಾ? ಕಿಚ್ಚ- ಪ್ರಿಯಾ ಲವ್ ಸ್ಟೋರಿ ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲ!!


28 ಮಾರ್ಚ್ 1984 ರಂದು, ಅಲೀಮ್ ಅವರ ತಂದೆ ಹಕೀಮ್ ಕೈರಾನ್ವಿ ನಿಧನರಾದರು. ಆ ಸಮಯದಲ್ಲಿ ಅಲಿಮ್ ಅವರಿಗೆ 9 ವರ್ಷ. ಹಕೀಮ್ ಕೈರಾನ್ವಿ 1960 ರಿಂದ 80 ರ ದಶಕದ ಅತ್ಯುತ್ತಮ ಕೇಶ ವಿನ್ಯಾಸಕರಾಗಿದ್ದರು. ನಂತರ ಅಲಿಮ್ 9 ನೇ ವಯಸ್ಸಿನಿಂದ ಈ ಹೇರ್‌ ಸ್ಟೈಲಿಂಗ್‌ ಕಲಿಯಲು ಪ್ರಾರಂಭಿಸಿದರು. 16 ನೇ ವಯಸ್ಸಿನಲ್ಲಿ ಅವರು ಕೇಶ ವಿನ್ಯಾಸಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅಲೀಂ ಅವರ ತಂದೆ ಅಮಿತಾಬ್ ಬಚ್ಚನ್ ಅವರ ಹೇರ್ ಸ್ಟೈಲ್ ಮಾಡಿದ್ದಾರೆ. ದಿಲೀಪ್ ಕುಮಾರ್‌ನಿಂದ ಹಿಡಿದು ಸುನೀಲ್ ದತ್‌ನಿಂದ ಅನಿಲ್ ಕಪೂರ್‌ವರೆಗೆ ವಿವಿಧ ಖ್ಯಾತನಾಮರು ಅವರ ಗ್ರಾಹಕರಾಗಿದ್ದರು. ಅದೂ ಅಲ್ಲದೆ ಬ್ರೂಸ್ ಲೀ, ಮುಹಮ್ಮದ್ ಅಲಿ, ಟೋನಿ ಕ್ರೇಗ್, ರಿಚರ್ಡ್ ಹ್ಯಾರಿಸ್, ಕ್ರೇಜಿ ಬಾಯ್ಸ್ ಮೊದಲಾದ ನಟರ ಹೇರ್ ಸ್ಟೈಲಿಂಗ್ ಮಾಡಿದ್ದು ಅಲೀಂ ತಂದೆ. 


ವರದಿಯ ಪ್ರಕಾರ, ಅಲಿಮ್ ತನ್ನ ಮನೆಯ ಬಾಲ್ಕನಿಯಲ್ಲಿ ಸಣ್ಣ ರೂಮ್‌ನಲ್ಲಿ ಹೇರ್‌ ಕಟಿಂಗ್‌ ಸಲೂನ್‌ನ್ನು ಆರಂಭಿಸಿದರು. ಅವರು ತಮ್ಮ ಕಠಿಣ ಪರಿಶ್ರಮದ ಬಲದಿಂದ ಅದರಲ್ಲಿಯೇ ಯಶಸ್ಸನ್ನು ಸಾಧಿಸಿ.. ಇಂದು ದೊಡ್ಡ ಹೇರ್ ಡ್ರೆಸ್ಸಿಂಗ್ ಸಲೂನ್ ಹೊಂದಿದ್ದಾರೆ. ಅಲೀಮ್ ಹಕೀಮ್ ಹೇರ್ ಸ್ಟೈಲಿಂಗ್ ಮತ್ತು ಹೇರ್ ಕಟಿಂಗ್‌ಗೆ ಕನಿಷ್ಠ ಒಂದು ಲಕ್ಷ ರೂಪಾಯಿಗಳನ್ನು ವಿಧಿಸುತ್ತಾರೆ. ಕೇಶವಿನ್ಯಾಸವನ್ನು ಅವಲಂಬಿಸಿ ಈ ಬೆಲೆ ಬದಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.