ಗಗನಸಖಿಯಾಗಿದ್ದ ಪ್ರಿಯಾ ಸುದೀಪ್ ಗೆ ಸಿಕ್ಕಿದ್ದೇಗೆ ಗೊತ್ತಾ? ಕಿಚ್ಚ- ಪ್ರಿಯಾ ಲವ್ ಸ್ಟೋರಿ ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲ!!

Kiccha Sudeep-Priya Love Story: ಕನ್ನಡ ಚಿತ್ರದರಂಗದಲ್ಲಿ ಗುಡ್‌ ಪೇರ್‌ಗಳು ಯಾವುವು ಎಂದರೇ ಒಂದಷ್ಟು ಮುಖಗಳು ನಮ್ಮ ಕಣ್ಣಮುಂದೆ ಬರುತ್ತವೆ.. ಶಿವಣ್ಣ-ಗೀತ, ರಾಧಿಕಾ-ಯಶ್, ಪುನೀತ್‌ ರಾಜ್‌ಕುಮಾರ್‌- ಅಶ್ವಿನಿ, ಸುದೀಪ್‌-ಪ್ರಿಯಾ ಹೀಗೆ ಸಾಕಷ್ಟು ಜೋಡಿಗಳಿವೆ.. ಇವರೆಲ್ಲರ ಜೀವನ ನಮಗೆ ರೋಲ್‌ ಮಾಡೆಲ್..‌ ಗಂಡ ಹೆಂಡತಿ ಎಂದರೇ ಕೇವಲ ಸುಖ ಸಂಸಾರವಲ್ಲ.. ಎಲ್ಲ ಹಂತದಲ್ಲೂ ಜೊತೆ ಬದುಕುವುದು ಎಂದು ತೋರಿಸಿಕೊಟ್ಟವರು ಇವರೆಲ್ಲ.. 
 

1 /5

ನಟ ಸುದೀಪ್‌ ಹಾಗೂ ಪ್ರಿಯಾ ಬುದಕು ನಾನಾ ಏರುಪೇರುಗಳನ್ನು ಕಂಡಿದೆ.. ಜೀವಕ್ಕಿಂತ ಹೆಚ್ಚು ಪ್ರೀತಿಸಿ ಮದುವೆಯಾದವರು ಡಿವೋರ್ಸ್‌ ಪಡಿಯುವುದಕ್ಕೆ ಕೋರ್ಟ್‌ ಮೆಟ್ಟಿಲನ್ನು ಏರಿದ್ದರು.. ಅದೆಲ್ಲ ಈಗ ಇತಿಹಾಸ.. ಕೆಟ್ಟ ದಿನಗಳು ಮರೆಯಾಗಿ ನೆಮ್ಮದಿಯ ಜೀನದಲ್ಲಿ ತೇಲಾಡುತ್ತಿದ್ದಾರೆ..   

2 /5

ಸದ್ಯ ಸ್ಯಾಂಡಲ್‌ವುಡ್‌ನ ಬೆಸ್ಟ್‌ ಪೇರ್‌ ಎನಿಸಿಕೊಂಡ ಕೇರಳದ ಹುಡುಗಿ ಮಲೆನಾಡಿನ ಮಡಿಲು ಶಿವಮೊಗ್ಗದ ಮಗನಿಗೆ ಮನಸೋತಿದ್ದು ಹೇಗೆ? ಪ್ರಿಯಾ ಸುದೀಪ್‌ ಹಿನ್ನಲೆ ಏನು? ಇದೆಲ್ಲವನ್ನು ಇದೀಗ ತಿಳಿದುಕೊಳ್ಳೋಣ..  

3 /5

ಚಿಕ್ಕ ವಯಸ್ಸಿನಲ್ಲಿಯೇ ನಟನಾ ಆಸಕ್ತಿ ಹೊಂದಿದ್ದ ಕಿಚ್ಚ ಸುದೀಪ್‌ ಪ್ರಿಯಾ ಓದುತ್ತಿದ್ದ ಕಾಲೇಜಿನಲ್ಲಿಯೇ ನಾಟಕ ತರಬೇತಿಗೆ ಸೇರಿಕೊಳ್ಳುತ್ತಾರೆ.. ಅಲ್ಲಿಂದಲೇ ಕಿಚ್ಚ ಹಾಗೂ ಪ್ರಿಯಾ ನಡುವೆ ಸ್ನೇಹ ಬೆಳೆದಿದ್ದು.. ನಿತ್ಯ ನಾಟಕ ಪ್ರ್ಯಾಕ್ಟೀಸ್‌ ಮಾಡಲು ಬರುತ್ತಿದ್ದ ಸುದೀಪ್‌ಗೆ ಒಂದು ದಿನ ಪ್ರಿಯಾ ಕಾಣಿಸುತ್ತಾರೆ.. ಮೊದಲ ನೋಟದಲ್ಲಿಯೇ ಪ್ರಿಯಾ ತುಂಬಾ ಇಷ್ಟವಾಗಿ ಬಿಡುತ್ತಾರೆ.. ಹೀಗೆ ಕಿಚ್ಚ ಸುದೀಪ್‌ ಧ್ವನಿಗೆ ಬೆರಗಾದ ಪ್ರಿಯಾ ಅವರಿಗೆ ಮನಸೋಲೋಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ..   

4 /5

ನಟ ಸುದೀಪ್‌ಗೆ ಮಡದಿಯಾಗುವ ಮುನ್ನ ಪ್ರಿಯಾ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.. ಇವರು ಗಗನಸಖಿಯಾಗಿ ಒಂದಿಷ್ಟು ಕಾಲ ಕೆಲಸ ಮಾಡಿದ್ದಾರೆ.. ಬಳಿಕ ಇದನ್ನು ಬಿಟ್ಟು ಬ್ಯಾಂಕ್‌ ಉದ್ಯೋಗಿಯಾಗಿಯೂ ಸುದೀಪ್‌ ಪತ್ನಿ ಕೆಲಸ ಮಾಡಿದ್ದಾರೆ..   

5 /5

ಅದೃಷ್ಟ ಎನ್ನುವುದು ಕೈ ಹಿಟಿದ್ರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಕಿಚ್ಚ ಸುದೀಪ್‌ ಉತ್ತಮ ಉದಾಹರಣೆ ಏಕೆಂದರೆ ನಟನ ಪರಿಶ್ರಮದ ಜೊತೆಗೆ ಅವರ ಲಕ್‌ ಕೂಡ ಅವರನ್ನು ಕೈಬಿಡದೇ ಈ ಹಂತಕ್ಕೆ ತಲುಪಿಸಿದೆ..