Kannada Serial : ಮೂಲತಃ ಭ್ರದಾವತಿಯವರಾದ ರಮ್ಯಾ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಕಷ್ಟವನ್ನು ಅನುಭವಿಸಿದವರು. ಕೇವಲ 14ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದು ದುಡಿಮೆ ಆರಂಭಿಸಿದವರು. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್​ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ರಮ್ಯಾ, ಅತಿ ಕಡಿಮೆ ಸಮಯದಲ್ಲಿ ಕೋಳಿಯನ್ನು ಹಿಡಿದ ಕಾರಣ ಕೋಳಿ ರಮ್ಯಾ ಎಂದೇ ಖ್ಯಾತರಾದರು....ನಂತರ ಕಿರುತೆರೆಯಲ್ಲಿ ಹಲವಷ್ಟು ಅವಕಾಶಗಳನ್ನು ರೂಪಿಸಿಕೊಂಡರು.


COMMERCIAL BREAK
SCROLL TO CONTINUE READING

ಸೊಸೆ ತಂದ ಸೌಭಾಗ್ಯ ಧಾರಾವಾಹಿಯ ಮೂಲಕ ಧಾರಾವಾಹಿ ಲೋಕಕ್ಕೆ  ಕಾಲಿಟ್ಟು, ನಂತರ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿ ಪ್ರಸಿದ್ದಿ ಪಡೆದಿದ್ದಾರೆ. ಕೋಳಿ ರಮ್ಯಾ ಎಂದರೆ ಕಿರುತೆರೆ ವೀಕ್ಷಕರಿಗೆ ಬಹಳ ಅಚ್ಚುಮೆಚ್ಚು. ಸಿಟಿ ಹುಡುಗಿಯರು ಹಳ್ಳಿಯಲ್ಲಿ ಬದುಕುವ ಈ ರಿಯಾಲಿಟಿ ಶೋ ನಲ್ಲಿ ರಮ್ಯಾ 2ನೇ ಸ್ಥಾನವನ್ನು ಪಡೆದಿದ್ದರು. ಅಲ್ಲಿಂದ ಅವರ ಜರ್ನಿ ಆರಂಭವಾಗಿದ್ದು. ನಂತರ ಅವರು ತಿರುಗಿ ನೋಡಿಲ್ಲ... 


ಇದನ್ನೂ ಓದಿ-Bhairati Rangal : ಕಬ್ಜ ಯಶಸ್ಸಿನ ಬೆನ್ನಲ್ಲೇ ಭೈರತಿ ರಣಗಲ್ ಗೆ ಸಜ್ಜಾದ ಶಿವಣ್ಣ: ಮುಂದಿನ ಚಿತ್ರದ ಸುಳಿವು ನೀಡಿದ ಮುತ್ತಣ್ಣ!


ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಕಿರುತೆರೆಯಲ್ಲಿ ಸಹ ಕೋಳಿ ರಮ್ಯಾ ಹೆಸರನ್ನು ಪಡೆದಿದ್ದಾರೆ. ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ...ರಮ್ಯಾ ಅವರಿಗೆ ವಿಲನ್‌ ಪಾತ್ರಗಳೇ ಹೆಚ್ಚಾಗಿ ಹುಡುಕಿಕೊಂಡು ಬರುತ್ತವೆ.. ಮಿಥುನಾ ರಾಶಿ ಧಾರಾವಾಹಿಯಲ್ಲಿ ಸಹ ವಿಲನ್ ಆಗಿ ಅದ್ಭುತ  ನಟಿ ಎನಿಸಿಕೊಂಡಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಕಷ್ಟಗಳನ್ನು ಅನುಭವಿಸಿ ಮೇಲೇರಿದ್ದಾರೆ.


ಇನ್ನು ರಮ್ಯಾ ನಟಿ ಮಾತ್ರವಲ್ಲದೇ ನಿರೂಪಕಿ ಕೂಡ ಹೌದು, ತನನಂ ತನನಂ ಎನ್ನುವ ಕಾರ್ಯದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿ ಫೇಮಸ್​ ಆಗಿದ್ದರು..ಕಿರುತೆರೆ ಕಥೆಗಳಲ್ಲಿ ಅಥವಾ ಸಿನಿಮಾದಲ್ಲಿ ನಾಯಕ ನಾಯಕಿಗಿರುವಷ್ಟೇ ಪ್ರಾಮುಖ್ಯತೆ ಖಳನಾಯಕ ಖಳನಾಯಕರಿಗೂ ಇರುತ್ತದೆ. ಅದೆಷ್ಟೋ ಕಲಾವಿದರು ನಾಯಕ-ನಾಯಕಿಯಾಗಿ ನಟಿಸಬೇಕು ಮಿಂಚಬೇಕೆಂಬ ಆಸೆ ಹೊತ್ತು ನಟನ ಕ್ಷೇತ್ರಕ್ಕೆ ಕಾಲಿಟ್ಟು ನಂತರ ವಿಲನ್ ಪಾತ್ರದಲ್ಲೇ ಹೆಚ್ಚು ಫೇಮಸ್ ಆದ ಉದಾಹರಣೆಗಳಿವೆ. ಅಂಥವರಲ್ಲಿ ಒಬ್ಬರಾದ ನಟಿ ರಮ್ಯಾ, ತಮ್ಮ ಖಳನಾಯಕಿ ರೋಲ್‌ಗಳಿಗೆ ಫೇಮಸ್ಸು.


ಇದನ್ನೂ ಓದಿ-Choreographer Chaitanya: ಖ್ಯಾತ ಡ್ಯಾನ್ಸ್  ಕೋರಿಯೊಗ್ರಾಫರ್ ಚೈತನ್ಯ ಆತ್ಮಹತ್ಯೆ!


ಮನೆಯಲ್ಲಿದ್ದ ಆರ್ಥಿಕ ಸಂಕಷ್ಟದಿಂದ ದುಡಿಯುವ ಅನಿವಾರ್ಯತೆ ಇದ್ದ ರಮ್ಯಾ ಅವರು ಭದ್ರಾವತಿಯಿಂದ ಬೆಂಗಳೂರಿಗೆ ಬಂದು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ತನನಂ ತನನಂ" ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಮೂಲಕ ತಮ್ಮ ಕಲರ್ ಫುಲ್ ಟಿವಿ ಜರ್ನಿಗೆ ಕಾಲಿಟ್ಟರು. ಆಗ ಈಕೆ ಬರಿ 9ನೇ ಕ್ಲಾಸಿನ ಹುಡುಗಿ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿಯನ್ನು ಹೆಗಲ ಮೇಲೆ ಹೊರಬೇಕಾದರೂ ಅದನ್ನು ಅತ್ಯದ್ಭುತವಾಗಿ ನಿಭಾಯಿಸಿದ ಈಕೆ ನಿಧಾನವಾಗಿ ಧಾರಾವಾಹಿಗಳಲ್ಲಿ ಒಳ್ಳೊಳ್ಳೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬಂದರು.


ಚಟಪಟ ಮಾತು ಹಾಗೂ ಅದ್ಭುತ ಅಭಿನಯದಿಂದ ತೆಲುಗು, ತಮಿಳು ಇತ್ಯಾದಿ ಕ್ಷೇತ್ರಗಳಲ್ಲಿಯೂ ಅವಕಾಶಗಳು ಬರುತ್ತ ಹೋದವು. ತ್ರಿಭಾಷಾ ಕಿರುತರೆ ನಟಿ ಎಂದೇ ಖ್ಯಾತಿಯನ್ನು ಪಡೆದರು. ತಮಿಳು ತೆಲುಗು ಧಾರಾವಾಹಿಗಳಲ್ಲಿ ಬ್ಯುಸಿ ಇದ್ದ ಸಮಯದಲ್ಲೇ ಕನ್ನಡದಿಂದ ಅವಕಾಶ ಬಂದಾಗ ಖುಷಿಯಿಂದ ಒಪ್ಪಿಕೊಂಡು ಕನ್ನಡಕ್ಕೆ ಮರಳಿದ ಈಕೆ 'ಮಿಥುನ ರಾಶಿ' ಧಾರಾವಾಹಿಯಲ್ಲಿ ಕವಿತಾ ಎಂಬ ಖಳನಾಯಕಿಯ ರೋಲ್ ಮಾಡಿ ಬಹಳಷ್ಟು ಪ್ರಖ್ಯಾತಿ ಪಡೆದರು...


ಅಸಲಿಗೆ ಮಗಳು ಕನ್ನಡದಲ್ಲಿಯೇ ಹೆಚ್ಚು ನಟಿಸಬೇಕೆಂಬುದು ತಾಯಿ ಅಭಿಲಾಷೆಯಾಗಿತ್ತಂತೆ. ಹಾಗಾಗಿ ಮಿಥುನರಾಶಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಬಂದಾಗ ಕಣ್ಣು ಮುಚ್ಚಿ ಅಸ್ತು ಎಂದರು. ಕಿರುತೆರೆಯಲ್ಲೇ ಬಹಳ ಕಂಫರ್ಟೆಬಲ್ ಆಗಿದ್ದ ನಟಿ ರಮ್ಯಾ ಅಲಿಯಾಸ್ ಕೋಳಿ ರಮ್ಯಾ ಅವರು ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಅಭಿನಯಿಸುತ್ತಾರಂತೆ. ಇನ್ನು 'ಮಿಥುನ ರಾಶಿ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ರಮ್ಯಾ ಮತ್ತ್ಯಾವಾಗ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋದು ಸದ್ಯಕ್ಕೆ ಕುತೂಹಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.