Kannada Serial : ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ನಾಯಕ ಸಿದ್ಧಾರ್ಥನ ತಂಗಿ ಅಂಜಲಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಸುಕೃತಾ ನಾಗ್ ಬರೋಬ್ಬರಿ ಏಳು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರ ಗಮನ ಸೆಳೆದಿದ್ದರು. ಅಗ್ನಿಸಾಕ್ಷಿ' ಧಾರಾವಾಹಿಯ ನಂತರ ಕೊಂಚ ಸಮಯ ನಟನೆಯಿಂದ ದೂರವಿದ್ದ ಸುಕೃತಾ ನಾಗ್ ತದ ನಂತರ ಶ್ವೇತಾ ಆಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯಲ್ಲಿ ಖಳನಾಯಕಿ ಶ್ವೇತಾ ಆಗಿ ನಟಿಸುತ್ತಿರುವ ಸುಕೃತಾ ನಾಗ್ ಇದೇ ಮೊದಲ ಬಾರಿಗೆ ವಿಲನ್ ಆಗಿ ಕಿರುಪರದೆಯಲ್ಲಿ ಅಬ್ಬರಿಸುತ್ತಿದ್ದಾರೆ. ಬಾಲನಟಿಯಾಗಿ ಕಿರುತೆರೆಗೆ ಕಾಲಿಟ್ಟು ಮುಂದೆ ಪೋಷಕ ಪಾತ್ರಗಳ ಮೂಲಕ ವೀಕ್ಷಕರನ್ನು ರಂಜಿಸಿದ್ದ ಸುಕೃತಾ ನಾಗ್ ಇದೀಗ ಮೊದಲ ಬಾರಿಗೆ ಖಳನಾಯಕಿಯಾಗಿ ಮೋಡಿ ಮಾಡುತ್ತಿದ್ದಾರೆ. 


ಇದನ್ನೂ ಓದಿ-Rashmika Mandanna: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ನಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ!


"ಲಕ್ಷಣ ಧಾರಾವಾಹಿಯ ಶ್ವೇತಾ ಪಾತ್ರದಲ್ಲಿ ನಟಿಸುವ ಅವಕಾಶ ದೊರೆತಾಗ ಸಂತಸಕ್ಕಿಂತ ಭಯ ಆಗಿದ್ದೇ ಹೆಚ್ಚು. ಯಾಕೆಂದರೆ ಇದು ನೆಗೆಟಿವ್ ರೋಲ್. ಇಲ್ಲಿಯ ತನಕ ಪಾಸಿಟಿವ್ ಪಾತ್ರಗಳಲ್ಲಷ್ಟೇ ಕಾಣಿಸಿಕೊಂಡಿದ್ದ ನಾನು ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್ ನಲ್ಲಿ ನಟಿಸಲಿದ್ದೇನೆ ಎಂದಾಗ ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿತ್ತು. 


ಈಗ ಜನರು ಒಪ್ಪಿಕೊಂಡಿದ್ದಾರೆ ಎಂದಾಗ ನಾನು ಈ ಪಾತ್ರ ಒಪ್ಪಿಕೊಂಡಿದ್ದಕ್ಕೆ ಸಾರ್ಥಕವಾಯ್ತು ಎಂದರು ಸುಕೃತಾ ನಾಗ್. 'ಲಕ್ಷಣ' ಧಾರಾವಾಹಿಯ ನಿರ್ಮಾಪಕ, ನಟ ಜಗನ್ ಚಂದ್ರಶೇಖರ್ ನನ್ನನ್ನು ಸಂಪರ್ಕಿಸಿ ಈ ಪಾತ್ರದ ಬಗ್ಗೆ ಹೇಳಿದ್ದಾಗ ನನಗೆ ಭಯವಾಯಿತು. ಯಾಕೆಂದರೆ ಇದು ಫುಲ್ ನೆಗೆಟಿವ್ ಪಾತ್ರ. ನಟನೆಯಲ್ಲಿ ಹೊಸತನ ಇದ್ದರೆ ಚೆಂದ ಎಂದು ಒಪ್ಪಿಕೊಂಡೆ. ಈಗ ಕಿರುತೆರೆ ವೀಕ್ಷಕರು ನನ್ನನ್ನು ಸ್ವೀಕರಿಸಿದಾಗ ಸಂತಸವಾಗುತ್ತಿದೆ" ಎಂದು ಹೇಳಿದರು.


ಇದನ್ನೂ ಓದಿ-ಪ್ರೇಕ್ಷಕರಿಗೆ ಕ್ಷಮೆ ಕೇಳಿದ ʼಏಜೆಂಟ್‌ʼ ಸಿನಿಮಾ ನಿರ್ಮಾಪಕ, ಕಾರಣವಾದ್ರೂ ಏನು..?


ಕಲಾವಿದೆ ಎಂದ ಮೇಲೆ ಯಾವುದೇ ಪಾತ್ರ ನೀಡಿದರೂ ಸರಿ ಜೀವ ತುಂಬಲು ತಯಾರಿರಬೇಕು ಎಂದು ಹೇಳುವ ಸುಕೃತಾ ನಾಗ್‌ಗೆ ಮೊದಲಿನಿಂದಲೂ ಒಂದೇ ಪಾತ್ರಕ್ಕೆ ಬ್ರಾಂಡ್ ಆಗಲು ಇಷ್ಟವಿರಲಿಲ್ಲ. ಜೊತೆಗೆ ಬೇರೆ ಬೇರೆ ರೀತಿಯ ಪಾತ್ರಗಳಾದರೆ ನಟಿಸುವ ಅವಕಾಶವೂ ಕೂಡಾ ಜಾಸ್ತಿ. ಹಾಗಾಗಿ ಬಂದಂತಹ ಪಾತ್ರಗಳನ್ನು ಬೇಡ ಎನ್ನದೇ ಒಪ್ಪಿಕೊಂಡಿದ್ದಾರೆ ಸುಕೃತಾ.


ಕಾದಂಬರಿ ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಸುಕೃತಾ ನಾಗ್ ಮುಂದೆ ಶೀವಲೀಲಾಮೃತ, ಪುರುಷೋತ್ತಮ, ಸರಸ್ವತಿ, ಮಹಾಭಾರತ, ಅಗ್ನಿಸಾಕ್ಷಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಪಾರ್ಟ್ನರ್ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.