Akhil Akkineni : ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದ ನಿರ್ದೇಶಕ ಸುರೇಂದರ್ ರೆಡ್ಡಿ ಈ ಸಲ ನೆಲಕಚ್ಚಿದ್ದಾರೆ. ಹೌದು ಭಾರೀ ವೆಚ್ಚದಲ್ಲಿ ನಿರ್ಮಾಣವಾಗಿದ್ದ ʼಏಜೆಂಟ್; ಸಿನಿಮಾ ಹೇಳಲು ಹೆಸರಿಲ್ಲದಂತೆ ಮುಗ್ಗರಿಸಿದೆ. ಅಖಿಲ್ ಅಕ್ಕಿನೇನಿ ಅಭಿನಯದ ತೆಲುಗು ಸಿನಿಮಾ ಇದು. ಈ ಸಿನಿಮಾ ಬಗ್ಗೆ ಮೊದಲ ಪ್ರದರ್ಶನದಿಂದಲೂ ಬರೀ ನೆಗೆಟಿವ್ ಟಾಕ್‌ಗಳೇ ಕೇಳಿಬಂದಿದ್ದವು.
ಟ್ರೋಲಿಗರು ಸಿನಿಮಾವನ್ನು ಟ್ರೋಲ್ ಮಾಡುಲು ಶುರು ಮಾಡಿದ್ದಾರೆ. ಇದಲ್ಲದೇ ಸಿನಿಮಾ ಪ್ರದರ್ಶನ ಒಂದು ವಾರ ಪೊರೈಸುವುದಕ್ಕಿಂತ ಮುಂಚಿತವಾಗಿಯೇ ಥಿಯೇಟರ್‌ನಿಂದ ಸಿನಿಮಾ ಹೊರಬಿದ್ದಿದೆ. ಈ ಏಜೆಂಟ್ ಸಿನಿಮಾವನ್ನು ರಾಮ್‌ಬ್ರಹ್ಮಂ ಸುಂಕರ್, ಅನಿಲ್ ಸುಂಕರ್ ಹಾಗೂ ದೀಪಾ ರೆಡ್ಡಿ ಅವರು ಜಂಟಿಯಾಗಿ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾರೀ ವೆಚ್ಚದಲ್ಲಿ ನಿರ್ಮಾಣವಾಗಿತ್ತು.
ಇದನ್ನೂ ಓದಿ-Rashmika Mandanna: ರಶ್ಮಿಕಾ ಮಂದಣ್ಣ ರಿಜೆಕ್ಟ್ ಮಾಡಿದ್ದ ಈ 5 ಸಿನಿಮಾಗಳೂ ಸೂಪರ್ ಹಿಟ್!
ಸತತವಾಗಿ ಸೋಲುಗಳಿಂದಲೇ ಮುಗ್ಗರಿಸಿದ್ದ ಅಖಿಲ್ ಏಂಜೆಟ್ ಸಿನಿಮಾ ಮೂಲಕ ಗೆಲ್ಲುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅದು ಸುಳ್ಳಾಗಿದೆ. ಸಿನಿಮಾ ಸಿನಿರಂಗದಲ್ಲಿ ನೆಲಕಚ್ಚಿದೆ. ಈ ವಿಚಾರವಾಗಿ ನಿರ್ಮಾಪಕ ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಒಂದು ಪೋಸ್ಟ್‌ನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ನಮ್ಮ ಸಿನಿಮಾ ಸೋತಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ಹತ್ತಿರ ಕ್ಷಮೆ ಯಾಚಿಸಿದ್ದಾರೆ.
We have to take the entire blame for #Agent. Though we know its an uphill task, we thought of conquering but failed to do so as we did a blunder starting the project without a bound script & innumerable issues including covid followed. We don't want to give any excuses but learn…
— Anil Sunkara (@AnilSunkara1) May 1, 2023
"ಏಜೆಂಟ್ ಸಿನಿಮಾ ಸೋಲಿನ ಹೊಣೆಯಯನ್ನು ನಾವೇ ಹೊತ್ತುಕೊಳ್ಳುತ್ತೆವೆ. ಇದು ದೊಡ್ಡ ರಿಸ್ಕ ಮತ್ತು ಟಾಸ್ಕ್ ಅಂತಾ ಗೊತ್ತಿದ್ದರೂ ಸಿನಿಮಾ ಮಾಡಲು ಮುಂದಾದೆವು. ಆದರೆ ಅದು ಫೇಲ್ ಆಗಿದೆ. ಸ್ಕ್ರಿಪ್ಟ್ ಆರಂಭವಾಗುವ ಮುನ್ನ ನಾವು ಶೂಟಿಂಗ್ ಆರಂಭಿಸಬಾರದಿತ್ತು ಆದರೆ ತಪ್ಪು ಮಾಡಿದ್ದೇವೆ. ಇದರ ಜೊತೆಜೊತೆಗೆ ಕೊರೊನಾದಂತಹ ಅಡ್ಡಿಗಳು ಸಾಕಷ್ಟು ಬಂದೊದಗಿದವು ಆದರೆ ಸಿನಿಮಾ ಸೋತಿದಕ್ಕೆ ಕುಂಟುನೆಪ ಹೇಳುತ್ತಿಲ್ಲ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ-Rashmika Mandanna: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ನಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ!
ಒಟ್ಟಾರೆಯಾಗಿ ಈ ಸಿನಿಮಾ ಕಥೆಯನ್ನು ನೋಡುವುದಾದರೇ ದೇಶದ ಭದ್ರತೆಗಾಗಿ ನಿರ್ಮಿತವಾದ ರಿಸರ್ಚ್ ಅನಲಾಸಿಸ್ ವಿಂಗ್‌ದಲ್ಲಿ ಏಜೆಂಟ್ ಆಗುವ ಕನಸು ಕಟ್ಟಿಕೊಂಡಿದ್ದ ನಾಯಕನ ಕಥೆ. ಎಥಿಕಲ್ ಹ್ಯಾಕರ್ ಎಂದು ಈ ವಿಂಗ್ ಸಂಸ್ಥೆಯಲ್ಲಿ ಸೇರಿಕೊಳ್ಳು ನಾಯಕ ಎಷ್ಟು ಹರಸಾಹಸ ಮಡುತ್ತಾನೆ ಎನ್ನುವುದರ ಚಿತ್ರಣ ಈ ಸಿನಿಮಾ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.