ಅಂದು ವಿಷ್ಣುವರ್ಧನ್ ಗೆ ವೀರೇಂದ್ರ ಹೆಗ್ಡೆ ಕೊಟ್ಟ ಚಿನ್ನದ ಸರವನ್ನ ವಿಷ್ಣು ಸರ್ ಏನು ಮಾಡಿದ್ರು ಗೊತ್ತಾ..?
Aniruddha Jatkar : ಅನಿರುದ್ದ್ ವಿಷ್ಣುವರ್ಧನ್, ವಿಷ್ಣುದಾದ ತುಂಬಾ ಅಂದ್ರೆ ತುಂಬಾ ಇಷ್ಟಪಡೋ ಮುದ್ದಿನ ಅಳಿಯ. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರೂ ಕಿರುತೆರೆಯಲ್ಲಿ ಪ್ರಸಾರವಾದ ಜೊತೆಜೊತೆಯಲಿ ಸಿನಿಮಾ ಇವರಿಗೆ ದೊಡ್ಡಮಟ್ಟದಲ್ಲಿ ಯಶಸ್ಸು ತಂದುಕೊಡ್ತು.
Sandalwood : ಎಲ್ಲೇ ಹೋದರೂ ಅನಿರುದ್ದ್ ಬಿಟ್ಟು ಪ್ರತಿಯೊಬ್ಬರೂ ಇವತ್ತಿಗೂ ಆರ್ಯವರ್ಧನ್ ಅಂತಾನೆ ಗುರುತಿಸಲು ಶುರು ಮಾಡಿಬಿಟ್ಟರು. ಈ ಖುಷಿಯನ್ನ,ಸಂಭ್ರಮವನ್ನು ನೋಡಲು ವಿಷ್ಣುವರ್ಧನ್ ಅವರು ಇರಬೇಕಿತ್ತು ಅಂತ ಪ್ರತಿಬಾರಿಯೂ ಮನೆಯಲ್ಲಿ ಚರ್ಚೆ ಆಗುತ್ತಾ ಇತ್ತು ಅನ್ನೋದನ್ನ ಇತ್ತೀಚಿಗೆ ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ಹಂಚಿಕೊಂಡರು ಅನಿರುದ್ದ್.
ವಿಷ್ಣುವರ್ಧನ್ ಅವರಿಗೆ ಅದರಲ್ಲೂ ಅಳಿಯನ ಬಗ್ಗೆ ಇದ್ದ ಪ್ರೀತಿ ಬಗ್ಗೆ ಮತ್ತೊಂದು ಉದಾಹರಣೆಯನ್ನ ಕೂಡ ತುಂಬಾ ಖುಷಿ ಮತ್ತು ಗೌರವದಿಂದ ಹೇಳಿಕೊಂಡರು.ಅದೇನ್ ಅಂದ್ರೆ ಆಗಾಗ ವಿಷ್ಣುವರ್ಧನ್ ಸರ್ ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಆಸೆ.ಅಂತೆಯೇ ಹೋದಾಗ ವೀರೇಂದ್ರ ಹೆಗ್ಡೆ ಅವರ ಕಾಲಿಗೆ ನಮಸ್ಕಾರ ಮಾಡುತ್ತಾ ಒಂದಷ್ಟು ಕ್ಷಣ ಹಾಗೇ ಇದ್ದು ಬಿಡುತ್ತ ಇದ್ದರಂತೆ
ಇದನ್ನೂ ಓದಿ-Adipurush: ರಾಘವನ ಹಂಬಲದಲ್ಲಿ ಜಾನಕಿ.. 'ಸೋಲ್ ಆಫ್ ದಿ ಫಿಲ್ಮ್' ಈ ರಾಮ್ ಸಿಯಾ ರಾಮ್ ಹಾಡು!
.ಆಗ ಒಮ್ಮೆ ಚಿನ್ನದ ಸರವನ್ನ ಉಡುಗೊರೆಯಾಗಿ ವೀರೇಂದ್ರ ಹೆಗ್ಡೆ ಯವರು ವಿಷ್ಣು ಸರ್ ಕತ್ತಿಗೆ ಹಾಕಿಬಿಡುತ್ತಾರೆ. ಆಗ ಒಂದಷ್ಟು ಹೆಜ್ಜೆ ಮುಂದೆ ಸಾಗಿದ ವಿಷ್ಣು ಸರ್ ಆ ಸರವನ್ನ ತಕ್ಷಣವೇ ತೆಗೆದು ಅಳಿಯನ ಕತ್ತಿಗೆ ಹಾಕಿಬಿಡುತ್ತಾರೆ ಅಂತೆ.ಹೀಗೆ ಪ್ರತಿ ಹಂತದಲ್ಲೂ ಅಳಿಯ ಸಾಧಿಸಿಬೇಕು ಅನ್ನೋ ದೊಡ್ಡ ಆಸೆಯನ್ನ ಇಟ್ಟುಕೊಂಡಿದ್ದರಂತೆ ವಿಷ್ಣುದಾದಾ.
ಇದನ್ನೂ ಓದಿ-Ragini Dwivedis: ರಾಗಿಣಿ ಹೊಸ ಫೋಟೋಶೂಟ್, ಯಾರವ್ವ ಇವಳು ಚೆಲುವೆ ಚೆಲುವೆ ನನ್ನಾ ಕಣ್ಣೇ ಬಿತ್ತು ಎಂದ ಫ್ಯಾನ್ಸ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.