South Fan India Star Prabhas: ಟಾಲಿವುಡ್‌ ಪ್ರಿಯರು ಡಾರ್ಲಿಂಗ್‌ ಪ್ರಭಾಸ್‌ ಹೊಸ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.. ನಿರ್ದೇಶಕ ನಾಗ್ ಅಶ್ವಿನ್ ಮತ್ತು ಪ್ರಭಾಸ್ ಕಾಂಬೋದಲ್ಲಿ ಬರುತ್ತಿರುವ ಕಲ್ಕಿ2898ಡಿ ಸಿನಿಮಾ ಸ್ಟಾರ್ ನಿರ್ಮಾಪಕ ಕೆ. ಅಶ್ವಿನಿ ದತ್ ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಬೃಹತ್ ಬಜೆಟ್ ಮತ್ತು ಪ್ರಮುಖ ಪಾತ್ರಗಳೊಂದಿಗೆ ಅತ್ಯಂತ ಪ್ರತಿಷ್ಠಿತವಾಗಿ ನಿರ್ಮಾಣವಾಗುತ್ತಿದೆ.. 


COMMERCIAL BREAK
SCROLL TO CONTINUE READING

ಈ ಸಿನಿಮಾದ ಪ್ರಚಾರದ ಅಂಗವಾಗಿ ಬುಧವಾರ ರಾಮೋಜಿ ಫಿಲಂ ಸಿಟಿಯಲ್ಲಿ ಕಲ್ಕಿ 2898ಎಡಿ ಬುಜ್ಜಿ ವರ್ಸಸ್ ಭೈರವ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಭಾಸ್ ಕಲ್ಕಿ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಚಿತ್ರದಲ್ಲಿ ನಟಿಸುತ್ತಿರುವ ಲೆಜೆಂಡರಿ ನಟ ಅಮಿತಾಬ್ ಬಚ್ಚನ್ ಮತ್ತು ರಾಷ್ಟ್ರ ನಟ ಕಮಲ್ ಹಾಸನ್ ಅವರ ಬಗ್ಗೆ ಪ್ರಭಾಸ್ ಕೆಲವು ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ.


ಇದನ್ನೂ ಓದಿ-ಪ್ರಿಯಾಂಕಾ ಧರಿಸಿರುವ ಈ 200 ಕ್ಯಾರೆಟ್ ವಜ್ರದ ನೆಕ್ಲೇಸ್‌ ಬೆಲೆ ಎಷ್ಟು ಗೊತ್ತೆ..! ಸಾಯೋವರೆಗೂ ಕುಂತು ತಿಂತೀರಾ..


ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಜಗದ್ಗುರು ಕಮಲ್ ಹಾಸನ್ ನಟಿಸಿದ್ದು, ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ.. ಕಮಲ್ ಹಾಸನ್ ಮತ್ತು ಅಮಿತಾಬ್ ಬಚ್ಚನ್ ಅವರನ್ನು ನೋಡಿ ಚಿತ್ರರಂಗ ಪ್ರೇರಿತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಉನ್ನತ ನಾಯಕರ ಜೊತೆ ಕೆಲಸ ಮಾಡುವುದು ನನ್ನ ಅದೃಷ್ಟ ಎಂದು ಪ್ರಭಾಸ್ ಹೇಳಿದ್ದಾರೆ. ಈ ಅವಕಾಶ ನೀಡಿದ ನಿರ್ದೇಶಕ ನಾಗ್ ಅಶ್ವಿನ್ ಹಾಗೂ ನಿರ್ಮಾಪಕ ಅಶ್ವಿನಿದತ್ ಅವರಿಗೆ ಪ್ರಭಾಸ್ ಧನ್ಯವಾದ ತಿಳಿಸಿದ್ದಾರೆ.  


ಇದನ್ನೂ ಓದಿ-Bhoomi Shetty : ಶೈನಿಂಗ್ ಸೀರೆಯಲ್ಲಿ ಮಿಂಚುಳ್ಳಿಯಾಗಿ ಹೊಳೆದ ರಾಯಲ್ ಶೆಟ್ಟಿ, ಫೋಟೋಸ್ ಇಲ್ಲಿವೆ


ಇನ್ನು ಬುಧವಾರ ನಡೆದ ಕಲ್ಕಿ ಸಿನಿಮಾ ಕಾರ್ಯಕ್ರಮಕ್ಕೆ ಸ್ಪೆಷಲ್ ಹೋಸ್ಟ್ ಬರುತ್ತಿದ್ದಾರೆ ಎನ್ನುವುದಕ್ಕೆ ಪ್ರಭಾಸ್‌ ತಮ್ಮ ಸೋಷಿಯಲ್‌ ಮಿಡಿಯಾದಲ್ಲಿ ಸ್ಟೋರಿವೊಂದನ್ನು ಹಂಚಿಕೊಂಡಿದ್ದರು... ಅದನ್ನು ನೋಡಿದ ಅವರ ಅಭಿಮಾನಿಗಳು ಪ್ರಭಾಸ್‌ ಮದುವೆಯಾಗಲಿದ್ದಾರೆ ಎಂದು ಭಾವಿಸಿದ್ದರು.. 


ಈ ಬಗ್ಗೆ ಮಾತನಾಡಿದ ಪ್ರಭಾಸ್.. "ನಾನು ಆ ಸ್ಟೋರಿ ಹಂಚಿಕೊಂಡಿದ್ದಕ್ಕೆ ಅದೆಷ್ಟು ಹುಡುಗಿಯರ ಹಾರ್‌ಟ ಬ್ರೇಕ್‌ ಆಗಿದೆಯೋ ಗೊತ್ತಿಲ್ಲ.. ಅವರಿಗಾಗಿಯೇ ನಾನು ಇನ್ನೂ ಮದುವೆಯಾಗಿಲ್ಲʼ ಎಂದಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.