ಪ್ರಿಯಾಂಕಾ ಧರಿಸಿರುವ ಈ 200 ಕ್ಯಾರೆಟ್ ವಜ್ರದ ನೆಕ್ಲೇಸ್‌ ಬೆಲೆ ಎಷ್ಟು ಗೊತ್ತೆ..! ಸಾಯೋವರೆಗೂ ಕುಂತು ತಿಂತೀರಾ..

Priyanka Chopra diamond necklace : ಇತ್ತೀಚೆಗೆ ಬಲ್ಗೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಲಿವುಡ್‌ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ನೆಕ್ಲೇಸ್‌ ಮೌಲ್ಯ ಸಖತ್‌ ಸದ್ದು ಮಾಡುತ್ತಿದೆ. ಈವೆಂಟ್‌ನಲ್ಲಿ ನಟಿ ಬಿಳಿ ಮತ್ತು ಕಪ್ಪು ಆಫ್ ಶೋಲ್ಡರ್ ಗೌನ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಆದರೆ ಹೆಚ್ಚು ಚರ್ಚೆಯಾಗಿದ್ದು, ಮಾತ್ರ ಪಿಂಕಿ ಕೊರಳಲ್ಲಿ ಧರಿಸಿರುವ ಕೋಟಿಗಟ್ಟಲೆ ಮೌಲ್ಯದ ವಜ್ರದ ನೆಕ್ಲೇಸ್.
 

1 /6

ಬಲ್ಗೇರಿಯ 140 ನೇ ವಾರ್ಷಿಕೋತ್ಸವದಂದು ಗಾಲಾ ಡಿನ್ನರ್ ಪಾರ್ಟಿ ನಡೆಯಿತು. ಇದರಲ್ಲಿ ಬಲ್ಗೇರಿಯ ಹೆಚ್ಚಿನ ಆಭರಣ ಸಂಗ್ರಹ ಎಟರ್ನಾವನ್ನು ಪ್ರದರ್ಶಿಸಲಾಯಿತು.   

2 /6

ಪ್ರಿಯಾಂಕಾ ಚೋಪ್ರಾ ಗ್ಲಾಮರಸ್ ಮತ್ತು ದುಬಾರಿ ಡೈಮಂಡ್ ನೆಕ್ಲೇಸ್ ಧರಿಸಿ ಗಾಲಾ ಡಿನ್ನರ್‌ಗೆ ಆಗಮಿಸಿದ್ದರು. ನಟಿಯ ಫೊಟೋಸ್‌ ಕೆಲವೇ ಸೆಕೆಂಡ್‌ಗಳಲ್ಲಿ ವೈರಲ್ ಆಗಿವೆ.  

3 /6

ಪ್ರಿಯಾಂಕಾ ಚೋಪ್ರಾ ಆಫ್ ಶೋಲ್ಡರ್ ಬಿಳಿ ಮತ್ತು ಕಪ್ಪು ಬಣ್ಣದ ಗೌನ್‌ನಲ್ಲಿ ಮಿಂಚಿದರು. ವಿಶೇಷವೆಂದರೆ ಪಿಂಕಿ ಧರಿಸಿದ್ದ ಗೌನ್ ಕೆಳಭಾಗದಿಂದ ಸಂಪೂರ್ಣ ಪಾರದರ್ಶಕವಾಗಿತ್ತು.  

4 /6

ಪ್ರಿಯಾಂಕಾ ತನ್ನ ಕುತ್ತಿಗೆಗೆ ಕಾಸ್ಟ್ಲೀ ವಜ್ರದ ಹಾರವನ್ನು ಧರಿಸಿದ್ದರು. ವೋಗ್ ಅರೇಬಿಯಾ ಪ್ರಕಾರ, ಪ್ರಿಯಾಂಕಾ ಚೋಪ್ರಾ ಅವರ ನೆಕ್ಲೇಸ್ ಸರ್ಪೆಂಟಿ ಎಟರ್ನಾ ಅವರದ್ದು ಎಂದು ತಿಳಿದು ಬಂದಿದೆ.  

5 /6

ಈ ಸುಂದರವಾದ ನೆಕ್ಲೇಸ್ ತಯಾರಿಸಲು ಸುಮಾರು 2800 ಗಂಟೆಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ, ಇದು 200 ಕ್ಯಾರೆಟ್ ವಜ್ರಗಳನ್ನು ಒಳಗೊಂಡಿದೆಯಂತೆ.   

6 /6

ವರದಿಯ ಪ್ರಕಾರ ಪಿಂಕಿ ಧರಿಸಿದ್ದ ನೆಕ್ಲೇಸ್‌ ಬೆಲೆ 43 ಮಿಲಿಯನ್ ಅಂದರೆ 350 ಕೋಟಿ ರೂಪಾಯಿ ಎನ್ನಲಾಗಿದೆ..