ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) 2016 ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಯಿತು. ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ಕಿರಿಕ್ ಬೆಡಗಿ ಟ್ರೋಲ್ ಪೇಜ್​ಗಳಿಗೆ ಸದಾ ಹಾಟ್ ಟಾಪಿಕ್.


COMMERCIAL BREAK
SCROLL TO CONTINUE READING

ಇದನ್ನೂ ಓದಿ: James Trademark Song: ಪವರ್ ಸ್ಟಾರ್ ಸಾಂಗ್, ಪವರ್ ಫುಲ್ ರಿಲೀಸ್..! ಹೇಗಿದೆ 'ಜೇಮ್ಸ್' ಹಾಡು..?


ಸದ್ಯ ಟಾಕ್​ ಆಫ್​ ದಿ ಟೌನ್ ಆಗಿರುವ ರಶ್ಮಿಕಾ ಅವರ ಮದುವೆ ವಿಚಾರ ಕೆಲ ದಿನಗಳಿಂದ ಸಖತ್ ಸುದ್ದಿಯಲ್ಲಿದೆ. ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakond) ಮದುವೆ ವಿಚಾರ ಕೆಲವು ದಿನಗಳಿಂದ ಹರಿದಾಡುತ್ತಿದೆ.


ಇಬ್ಬರೂ ಬಾಲಿವುಡ್​ನಲ್ಲಿ ಸಕ್ರಿಯರಾಗಿ ಈಗ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಜೊತೆಯಾಗಿ ಜಿಮ್ ಮಾಡುವುದು, ಡಿನ್ನರ್ ಮಾಡುವುದನ್ನು ಕಂಡ ಫ್ಯಾನ್ಸ್, ಈ ಜೋಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಬಹುದೇನೋ ಎಂಬ ಅನುಮಾನ್ದಲ್ಲಿದ್ದಾರೆ. ಇವರಿಬ್ಬರ ಡೇಟಿಂಗ್ (Dating) ವದಂತಿಗಳು ಸದಾ ಕೇಳಿಬರುತ್ತಿರುತ್ತವೆ. 


ವಿವಾಹ ವಿಚಾರ ವೈರಲ್ ಆಗಿರುವ ಈ ಹೊತ್ತಲ್ಲೇ ರಶ್ಮಿಕಾ ರೀಲ್ಸ್​ವೊಂದನ್ನು (Instagram Reels) ಮಾಡಿದ್ದಾರೆ. "ನನ್ನ ಖುಷಿಯ ಸೀಕ್ರೆಟ್​ ಇಲ್ಲಿದೆ ನೋಡಿ.." ಅಂತ ಬರೆದುಕೊಂಡು ಪೋಸ್ಟ್​ ಮಾಡಿದ್ದಾರೆ. 


ಇದನ್ನೂ ಓದಿ: ಕಾರು ಅಪಘಾತ: 'ಕಚ್ಚಾ ಬಾದಮ್' ಗಾಯಕ ಭುವನ್ ಬಡ್ಯಾಕರ್ ಆಸ್ಪತ್ರೆಗೆ ದಾಖಲು


"ನೀರು ಕುಡಿದು ನನ್ನ ಕೆಲಸ ಮಾತ್ರ ನೋಡಿಕೋ.." ಎಂದು ಸಾಹಿತ್ಯವಿರುವ ಹಾಡಿಗೆ ರೀಲ್ಸ್ ಮಾಡಿದ್ದು, ಈ ವಿಡಿಯೋ ಅವರ ವೈಯಕ್ತಿಕ ಜೀವನ ಬಗ್ಗೆ ಚರ್ಚೆ ಮಾಡುತ್ತಿರುವವರಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದಂತಿದೆ. 


ಆದರೆ ರಶ್ಮಿಕಾ ಅವರ ಈ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಟ್ರೋಲ್​ (Troll) ಆಗುತ್ತಿದೆ.


ಆ ರೀಲ್ಸ್ ಇಲ್ಲಿದೆ ನೋಡಿ: 


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.