Rashmika ಗೆ ಟ್ರೋಲ್‌ ಕಾಟ..! ʼಲೆಜೆಂಡ್‌ʼ ಬಾಯಲ್ಲಿ ಕನ್ನಡ ಕವನ..!

Rashmika Trolled Again - ರಶ್ಮಿಕಾಗೆ ಟ್ರೋಲರ್ಸ್‌ಗಳ ಕಾಟ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಪದೇ ಪದೆ ಟ್ರೋಲರ್ಸ್‌ ಕೆಂಗಣ್ಣಿಗೆ ಗುರಿಯಾಗುವ ರಶ್ಮಿಕಾ ಮಂದಣ್ಣ, ಇದೀಗ ಮತ್ತೆ ಟ್ರೋಲ್‌ ಬಲೆಯಲ್ಲಿ ಸಿಲುಕಿದ್ದಾರೆ. ಹಾಗಾದ್ರೆ ರಶ್ಮಿಕಾ ಸದ್ಯಕ್ಕೆ ಟ್ರೋಲ್‌ ಆಗ್ತಿರೋದು ಯಾಕೆ..? ಮುಂದೆ ನೋಡೋಣ ನೋಡೋಣ ಬನ್ನಿ.

Written by - Malathesha M | Edited by - Nitin Tabib | Last Updated : Feb 4, 2022, 04:42 PM IST
  • ಮತ್ತೊಮ್ಮೆ ನೆಟ್ಟಿಗರ ಟ್ರೋಲ್ ಗೆ ಗುರಿಯಾದ ರಷ್ಮಿಕಾ ಮಂದಣ್ಣ
  • ರಷ್ಮಿಕಾ ಬಗ್ಗೆ ತೆಲುಗಿನ ಲೆಜೆಂಡ್ ನಟ ಬಾಲಯ್ಯ ಹೇಳಿದ್ದೇನು?
  • ಈಗ ಯಾವ ಕಾರಣಕ್ಕೆ ರಷ್ಮಿಕಾ ಟ್ರೋಲ್ ಆಗಿದ್ದಾರೆ ತಿಳಿಯೋಣ ಬನ್ನಿ
Rashmika ಗೆ ಟ್ರೋಲ್‌ ಕಾಟ..! ʼಲೆಜೆಂಡ್‌ʼ ಬಾಯಲ್ಲಿ ಕನ್ನಡ ಕವನ..! title=
Rashmika Trolled Again (File Photo)

Rashmika Trolled Again - ರಶ್ಮಿಕಾಗೆ ಟ್ರೋಲರ್ಸ್‌ಗಳ ಕಾಟ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಪದೇ ಪದೆ ಟ್ರೋಲರ್ಸ್‌ ಕೆಂಗಣ್ಣಿಗೆ ಗುರಿಯಾಗುವ ರಶ್ಮಿಕಾ ಮಂದಣ್ಣ, ಇದೀಗ ಮತ್ತೆ ಟ್ರೋಲ್‌ ಬಲೆಯಲ್ಲಿ ಸಿಲುಕಿದ್ದಾರೆ. ಹಾಗಾದ್ರೆ ರಶ್ಮಿಕಾ ಸದ್ಯಕ್ಕೆ ಟ್ರೋಲ್‌ ಆಗ್ತಿರೋದು ಯಾಕೆ..? ಮುಂದೆ ನೋಡೋಣ ನೋಡೋಣ ಬನ್ನಿ.

ರಶ್ಮಿಕಾ ಮಂದಣ್ಣ.. ಕನ್ನಡದ ʼಕಿರಿಕ್‌ ಪಾರ್ಟಿʼ (Kirik Party) ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಇದೀಗ ಪರಭಾಷೆಯಲ್ಲೂ ಸಿಕ್ಕಾಪಟ್ಟೆ ಬೇಡಿಕೆಯಲ್ಲಿರುವ ನಟಿ. ಆದರೆ ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿರುವ ರಶ್ಮಿಕಾ ಮಂದಣ್ಣ (Rashmika Mandanna) ಪದೇ ಪದೆ ಟ್ರೋಲರ್ಸ್‌ ಕೆಂಗಣ್ಣಿಗೆ ಗುರಿಯಾಗ್ತಾರೆ. ಒನ್ಸ್‌ ಅಗೈನ್‌ ಇದೀಗ ಮತ್ತೆ ರಶ್ಮಿಕಾ ಟ್ರೋಲ್‌ (Rashmika Trolled) ಬಲೆಯೊಳಗೆ ಸಿಲುಕಿದ್ದಾರೆ.

ಕನ್ನಡದ ಕಂಪು..!
ತೆಲುಗು ಚಿತ್ರರಂಗದ ಲೆಜೆಂಡ್‌ ಬಾಲಯ್ಯ (Balakrishna) ಅವರ ಕನ್ನಡ ಪ್ರೇಮ ತುಂಬಾ ದೊಡ್ಡದು. ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಬಾಲಯ್ಯ ಅವರಿಗೂ ಪ್ರೀತಿ ಮತ್ತು ಅಪಾರ ಗೌರವವಿದೆ. ಇದನ್ನು ಪದೇ ಪದೆ ಸಾಬೀತುಪಡಿಸುವ ಲೆಜೆಂಡ್ ಬಾಲಯ್ಯ ಅವರು, ಇತ್ತೀಚೆಗೆ ನಟಿ ರಶ್ಮಿಕಾ ಜೊತೆ ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ ಕನ್ನಡದ ಕಂಪು ಹರಿಸಿದ್ದರು.

ಕವನ ಹೇಳಿದ್ದ ʼಲೆಜೆಂಡ್‌ʼ..!
ಹೀಗೆ ರಶ್ಮಿಕಾ ಕುರಿತು ಕವನದ ಸಾಲುಗಳನ್ನು ಕನ್ನಡದಲ್ಲೇ ಹೇಳಿದ್ದ ಲೆಜೆಂಡ್‌ ಬಾಲಯ್ಯ, ಚೆಲುವಲ್ಲಿ ಬೇಲೂರ ಬಾಲೆ. ಮನಸ್ಸಲ್ಲಿ ಮೈಸೂರ ಮಲ್ಲೆ. ನುಡಿಯಲ್ಲಿ ಕಸ್ತೂರಿ. ನಡೆಯಲ್ಲಿ ಕಾವೇರಿ. ಸೊಬಗಲ್ಲಿ ಮಡಿಕೇರಿ,  ನಾಟ್ಯದಲ್ಲಿ ಮಯೂರಿ, ಕೊಡಗಿನ ಬೆಡಗಿ. ಕರ್ನಾಟಕದ ಹುಡುಗಿ ಎಂದು ಕನ್ನಡಿಗರ ಮನ ಗೆದ್ದಿದ್ದರು. ಆದರೆ ಈ ವಿಡಿಯೋ ಎಡಿಟ್‌ ಮಾಡಿರುವ ಟ್ರೋಲ್‌ ಪೇಜ್‌ಗಳು ನಟಿ ರಶ್ಮಿಕಾ ಅವರ ಕಾಲೆಳೆಯುತ್ತಿದ್ದಾರೆ.

ಇದನ್ನೂ ಓದಿ-‘ಅಪ್ಪು’ ನೆನೆದು ಅಲ್ಲು ಅರ್ಜುನ್ ಭಾವುಕ; ಪವರ್‌ ಸ್ಟಾರ್‌ ಬಗ್ಗೆ ಹೇಳಿದ್ದೇನು ಗೊತ್ತಾ..?

ಟ್ರೋಲ್‌ ಬಗ್ಗೆ ಮಾತು..!
ಲೆಜೆಂಡ್ ಸ್ಟಾರ್ ಬಾಲಕೃಷ್ಣ ಅವರು ನಡೆಸಿಕೊಡುವ ಟಾಕ್ ಶೋ 'ಅನ್‌ಸ್ಟಾಪಬಲ್' ನಲ್ಲಿ ರಶ್ಮಿಕಾಗೋಸ್ಕರ ಕನ್ನಡದಲ್ಲಿ ಕವನ ಓದಿದ್ದಷ್ಟೇ ಅಲ್ಲ‌, ನಟ ಬಾಲಯ್ಯ ಅವರು ಸಿಕ್ಕಾಪಟ್ಟೆ ರಶ್ಮಿಕಾರ ಕಾಲೆಳೆದಿದ್ದರು. ಇನ್ನೂ ಇದೇ ವಿಡಿಯೋ ಇಟ್ಕೊಂಡು ಟ್ರೋಲ್‌ ಪೇಜ್‌ಗಳು ರಶ್ಮಿಕಾರನ್ನ ಟ್ರೋಲ್‌ ಮಾಡ್ತಿವೆ. ಟಾಕ್‌ ಶೋನಲ್ಲಿ ಮಾತನಾಡುತ್ತಾ ಬಾಲಯ್ಯ ಅವರು 'ರಶ್ಮಿಕಾಗೂ ಟ್ರೋಲಿಗರಿಗೂ ಫ್ರೆಂಡ್‌ಶಿಪ್ ಇದೆಯಲ್ವಾ..?ʼ ಎಂದು ತಮಾಷೆ ಮಾಡಿದ್ದರು. ಈ ಪ್ರಶ್ನೆಗೆ ನಟಿ ರಶ್ಮಿಕಾ ಕೂಡ ನಾಚಿ ನೀರಾಗಿದ್ದರು. ಅಂದಿನಿಂದಲೂ ರಶ್ಮಿಕಾ ಮಂದಣ್ಣ ಟ್ರೋಲ್ ಆಗ್ತಾನೆ ಇದ್ದಾರೆ.

ಇದನ್ನೂ ಓದಿ-#LoveMocktail2: 'ಲವ್‌ ಮಾಕ್ಟೇಲ್‌ 2' ರಿಲೀಸ್‌ಗೆ ರೆಡಿ: ಬಿಡುಗಡೆ ಯಾವಾಗ ಗೊತ್ತಾ..?

ಒಟ್ನಲ್ಲಿ ನಟಿ ರಶ್ಮಿಕಾ ಹಾಗೂ ಟ್ರೋಲಿಗರಿಗೂ ಬಿಟ್ಟೂಬಿಡದ ನಂಟು ಬೆಳೆದುಬಿಟ್ಟಿದೆ. ರಶ್ಮಿಕಾ ಏನೇ ಮಾಡಿದ್ರೂ ಟ್ರೋಲ್‌ ಪೇಜ್‌ಗಳು ಅಲ್ಲಿ ಹಾಜರ್‌ ಎನ್ನುವ ಪರಿಸ್ಥಿತಿ ಇದೆ. ಇನ್ನೂ ಅದೇನೇನು ವಿಚಾರಕ್ಕೆ ರಶ್ಮಿಕಾರನ್ನ ಟ್ರೋಲ್‌ ಪೇಜ್‌ಗಳು ಟ್ರೋಲ್‌ ಮಾಡ್ತಾವೋ ಕಾದು ನೋಡಬೇಕು.

ಇದನ್ನೂ ಓದಿ-ಫೆಬ್ರವರಿ 21 ರಂದು ಗೆಳತಿ ಶಿಬಾನಿ ದಾಂಡೇಕರ್ ಮದುವೆಯಾಗಲಿರುವ ಫರ್ಹಾನ್ ಅಖ್ತರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News