Dr Bro: ಚಿರತೆಗೆ ಶಾಲು ಹೊದಿಸಿ, ಕಿರೀಟಹಾಕಿ ಸನ್ಮಾನ ಮಾಡಿದ ಡಾ. ಬ್ರೋ..ವಿಡಿಯೋ ವೈರಲ್
Dr Bro Viral Video : ಸದ್ಯ ಸೋಮಾಲಿಯಾ ದೇಶದಲ್ಲಿ ಸುತ್ತುತ್ತಿರುವ ಡಾ. ಬ್ರೋಗೆ ಚಿರತೆ ಸಿಕ್ಕಿದೆ. ಆ ಚಿರತೆಗೆ ನೀನೇ ಕಾಡಿಗೆ ರಾಜ ಎನ್ನುವುದರ ಜತೆಗೆ ಶಾಲು ಹೊದಿಸಿ ಕಿರೀಟ ಇಟ್ಟು ಸನ್ಮಾನ ಮಾಡಿದ್ದಾರೆ. ಆ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Dr Bro-Gagan : ಯೂಟ್ಯೂಬ್‌ನಲ್ಲಿ ಸುಮಾರು ಎರಡು ಮಿಲಿಯನ್ ಸಬ್‌ಸ್ಕ್ರೈಬರ್ಸ್ ಹೊಂದಿರುವ ಕನ್ನಡಿಗ ಡಾ. ಬ್ರೋ ಅವರು ತಮ್ಮ ವಿಡಿಯೋಗಳ ಮೂಲಕವೇ ಕನ್ನಡಿಗರ ಹೃದಯ ಗೆದ್ದಿದ್ದಾರೆ. ವಯಸ್ಸು ಚಿಕ್ಕದಾದರೂ ಇವರ ಕೀರ್ತಿ ಸದ್ಯ ಹತ್ತಾರು ದೇಶದಲ್ಲಿ ಹರಡುತ್ತಿದೆ.
ಕನ್ನಡ ಜನೆತೆಗೆ ಕುಂತಲ್ಲಿಯೋ ಪ್ರಪಂಚ ತೋರಿಸುತ್ತಿರುವ ಡಾ. ಬ್ರೋ ಅಲಿಯಾಸ್ ಗಗನ್ ತಾವು ಕಾಲಿಟ್ಟ ದೇಶದಲ್ಲಿನ ಆಚಾರ, ವಿಚಾರ ಪದ್ಧತಿ ಅಲ್ಲಿನ ಜನರ ಸಂಸ್ಕೃತಿಯನ್ನು ತಮ್ಮ ವಿಡಿಯೋಗಳ ಮೂಲಕ ಪರಿಚಯಿಸುತ್ತಿದ್ದಾರೆ. ಸಾಕಷ್ಟು ಭಯಾನಕ ಜಾಗಗಳಿಗೆ ಹೋಗಿ ಅಲ್ಲಿನ ರಹಸ್ಯಗಳ ಕುರಿತು ಡಾ. ಬ್ರೋ ಕರುನಾಡ ಮಂದಿಗೆ ತಿಳಿಸುತ್ತಿದ್ದಾರೆ.
ಇದನ್ನೂ ಓದಿ-ʼಗೌರಿʼ ಚಿತ್ರದ ಮುಹೂರ್ತ ಸಮಾರಂಭ : ಪಿ. ಲಂಕೇಶ್ ಮೊಮ್ಮಗನ ಸ್ಯಾಂಡಲ್‌ವುಡ್ ಪಯಣ ಪ್ರಾರಂಭ
ಇದೀಗ ಕನ್ನಡದ ಯೂಟ್ಯೂಬರ್ ಡಾ ಬ್ರೋ ಸೋಮಾಲಿಯಾ ಭೇಟಿ ನೀಡಿದ್ದಾರೆ. ಅಲ್ಲಿನ ಜನರ ಪರಿಸ್ಥಿಗಳ ಬಗ್ಗೆ ಹಾಗೂ ಅಲ್ಲಿರುವ ಆಚಾರ ವಿಚಾರಗಳ ಕುರಿತು ತಿಳಿಸಿದ್ದಾರೆ. ಬೀದಿ ಬದಿಯ ವ್ಯಾಪಾರ, ಇನ್ನೊಂದು ಇಲ್ಲಿನ ವಿಶೇಷತೆಯೆಂದರೆ ಸೋಮಾಲಿಯಾದಲ್ಲಿ ಬೀದಿ ಬದಿ ಹಣವನ್ನು ಮಾರಾಟ ಮಾಡುತ್ತಾರೆ.
ಇದಲ್ಲದೇ ಪಕ್ಕದಲ್ಲಿನ ಪ್ರಾಣಿ ಸಂಗ್ರಹಾಲಯಕ್ಕೂ ಗಗನ್ ಬೇಟಿ ನೀಡಿದ ಗಗನ್ ಸಿಂಹದಿಂದ ಮೂತ್ರಾಭಿಷೇಕವನ್ನು ಮಾಡಿಸಿಕೊಂಡಿದ್ದರೆ. ಇದೆಲ್ಲದರ ನಡುವೆ ಇನ್ನೊಂದು ಅಚ್ಚರಿಯ ವಿಚಾರವೆಂದರೆ ಗಗನ್ ಅವರು ಸೋಮಾಲಿಯಾದ ಚಿರತೆಗೆ ಸನ್ಮಾನವನ್ನೂ ಮಾಡಿದ್ದಾರೆ.
ಪ್ರಭಾಸ್ ಆಧಾರ್ ಕಾರ್ಡ್ ಸಿಕ್ಕಾಪಟ್ಟೆ ವೈರಲ್! ನಿಜವಾದ ವಯಸ್ಸು ರಿವೀಲ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.