ಪ್ರಭಾಸ್ ಆಧಾರ್ ಕಾರ್ಡ್ ಸಿಕ್ಕಾಪಟ್ಟೆ ವೈರಲ್! ನಿಜವಾದ ವಯಸ್ಸು ರಿವೀಲ್‌

Prabhas Aadhar Card: ಸಾಮಾಜಿಕ ಜಾಲತಾಣದಲ್ಲಿ ಪ್ರಭಾಸ್ 'ಆಧಾರ್ ಕಾರ್ಡ್' ವೈರಲ್ ಆಗುತ್ತಿದೆ. ಅದರಲ್ಲಿ ಪ್ರಭಾಸ್‌ ಅವರ ನಿಜವಾದ ವಯಸ್ಸು ರಿವೀಲ್‌ ಆಗಿದೆ.   

Written by - Chetana Devarmani | Last Updated : Sep 3, 2023, 01:20 PM IST
  • ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್
  • ಪ್ರಭಾಸ್ ಆಧಾರ್ ಕಾರ್ಡ್ ವೈರಲ್
  • ನಿಜವಾದ ವಯಸ್ಸು ರಿವೀಲ್‌
ಪ್ರಭಾಸ್ ಆಧಾರ್ ಕಾರ್ಡ್ ಸಿಕ್ಕಾಪಟ್ಟೆ ವೈರಲ್! ನಿಜವಾದ ವಯಸ್ಸು ರಿವೀಲ್‌  title=
Prabhas

Prabhas Real Age : ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಪ್ರಭಾಸ್ ಅವರ ಒಂದು ಆಧಾರ್ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರಿಗೆ ಯಾವುದೇ ಹೊಸ ಪರಿಚಯಗಳ ಅಗತ್ಯವಿಲ್ಲ. ಅದರಲ್ಲಿ ಉಪ್ಪಲಪಾಟಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ಎಂದು ಹೆಸರಿಡಲಾಗಿದೆ. ಹುಟ್ಟಿದ ದಿನಾಂಕ 23/10/1979 ಎಂದು ಇದೆ. ಅಭಿಮಾನಿಗಳು ಪ್ರಭಾಸ್ ಅವರ ಆಧಾರ್ ಕಾರ್ಡ್ ಅನ್ನು ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹತ್ತನೇ ಸೀಸನ್ ನಲ್ಲಿ ಸರ್ಪ್ರೈಸ್ ಕೊಡಲು ಸಜ್ಜಾದ ಬಿಗ್ ಬಾಸ್ ರಿಯಾಲಿಟಿ ಶೋ 

'ಬಾಹುಬಲಿ' ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಪ್ರಭಾಸ್ ಇತ್ತೀಚೆಗೆ ಆದಿಪುರುಷ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಇದೀಗ ಪ್ರಭಾಸ್‌ ಮುಂಬರುವ ಸಿನಿಮಾ ಸಲಾರ್‌ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾವನ್ನು ಸೆಪ್ಟೆಂಬರ್ ನಿಂದ ನವೆಂಬರ್ ಗೆ ಮುಂದೂಡಲಾಗಿದೆ. 

ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ'ಯಂತಹ ಬಿಗ್ ಬಜೆಟ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 500 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮುಂತಾದ ನಟರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಹೀಗಾಗಿ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆಗಳಿವೆ.

ಇದನ್ನೂ ಓದಿ: ಪಾಕಿಸ್ತಾನಿ ಸಿನಿಮಾಗಳಲ್ಲಿ ನಟಿಸಿದ ಭಾರತದ ಖ್ಯಾತ ತಾರೆಯರು ಇವರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News