Drugs Case: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನ
Drugs Case: ಡ್ರಗ್ಸ್ ಪ್ರಕರಣದಲ್ಲಿ ಅರ್ಮಾನ್ ಕೊಹ್ಲಿಯನ್ನು ಬಂಧಿಸಲಾಗಿದೆ. ಆತನನ್ನು ಸುಮಾರು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು.
ನವದೆಹಲಿ: Drugs Case - ಬಾಲಿವುಡ್ ನಟನಾಗಿದ್ದ ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಸಾವಿನ ಬಳಿಕ ಬಾಲಿವುಡ್ ಡ್ರಗ್ಸ್ ಪ್ರಕರಣ ನಿರಂತರ ಹೆಡ್ಲೈನ್ ಸೃಷ್ಟಿಸುತ್ತಲೇ ಇದೆ. ಈ ಪ್ರಕರಣದಲ್ಲಿ ಈಗಾಗಲೇ ಹಲವು ಬಾಲಿವುಡ್ ಖ್ಯಾತನಾಮರ ಹೆಸರುಗಳು ಬಹಿರಂಗಗೊಂಡಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ (Armaan Kohli) ಅವರಮನೆಯ ಮೇಲೆ Narcotics Control Bureau ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಂತರ ಅಧಿಕಾರಿಗಳು ಅರ್ಮಾನ್ ಕೊಹ್ಲಿಯನ್ನು ಬಂಧನಕ್ಕೆ ಒಳಪಡಿಸಿದ್ದಾರೆ. ಇದಕ್ಕೂ ಮೊದಲು ಅರ್ಮಾನ್ ಕೊಹ್ಲಿಯನ್ನು ಸುಮಾರು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ.
ಅರ್ಮಾನ್ ಕೊಹ್ಲಿ ಸೇರಿದಂತೆ ಓರ್ವ ಪೆಡ್ಲರ್ ಬಂಧನ
NCB (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ಮುಂಬೈ ಅಬಕಾರಿ ಕಾಯ್ದೆಯ ಹಲವು ಸೆಕ್ಷನ್ ಗಳ ಅಡಿಯಲ್ಲಿ ಅರ್ಮಾನ್ ಕೊಹ್ಲಿ (Arman Kohli Arrested) ಮೇಲೆ ಪ್ರಕರಣ ದಾಖಲಿಸಿದೆ. ಅರ್ಮಾನ್ ಕೊಹ್ಲಿ ಜೊತೆಗೆ ಡ್ರಗ್ ಮಾರಾಟಗಾರ ಅಜಯ್ ರಾಜು ಸಿಂಗ್ ಕೂಡ ಬಂಧನಕ್ಕೊಳಗಾಗಿದ್ದಾರೆ. ಈ ಪ್ರಕರಣದಲ್ಲಿ ಆತನ ಬಳಿಯಿಂದ ಕೊಕೇನ್ ವಶಪಡಿಸಿಕೊಳ್ಳಲಾಗಿದ್ದು, ಈ ಕೊಕೇನ್ ದಕ್ಷಿಣ ಅಮೆರಿಕಾ ಮೂಲದದ್ದಾಗಿರುವುದರಿಂದ ಈ ಪ್ರಕರಣದ ಬೇರುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿವೆ ಎಂಬುದು ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ. ಎನ್‌ಸಿಬಿ ಮುಂಬೈ ಇದೀಗ ಜಪ್ತಿ ಮಾಡಲಾಗಿರುವ ಕೊಕೇನ್ ಅನ್ನು ಮುಂಬೈಗೆ ತರಲು ಬಳಸಿದ ಮಾರ್ಗ ಮತ್ತು ಸಂಪರ್ಕವನ್ನು ಪತ್ತೆ ಹಚ್ಚುವ ಕೆಲಸದಲ್ಲಿ ನಿರತವಾಗಿದೆ. ಇದಲ್ಲದೆ ಇತರ ಡ್ರಗ್ಸ್ ಸಪ್ಲೈಯರ್ ಗಳ ಕನೆಕ್ಷನ್ ಕುರಿತು ಕೂಡ ತನಿಖೆಯನ್ನು ಮುಂದುವರೆಸಿದೆ.
ಹಲವು ಗಂಟೆಗಳವರೆಗೆ ನಡೆದ ವಿಚಾರಣೆಯ ವೇಳೆ ಅರ್ಮಾನ್ ಸರಿಯಾಗಿ ಸ್ಪಂದಿಸಿಲ್ಲ
ಶನಿವಾರ ನಡೆದ ದಾಳಿಯಲ್ಲಿ ಅರ್ಮಾನ್ ಕೊಹ್ಲಿಯ ಮನೆಯಿಂದ ಡ್ರಗ್ಸ್ ಅನ್ನು ವಶಕ್ಕೆ ಪಡೆದು ನಂತರ ಆತನನ್ನು ಎನ್‌ಸಿಬಿ ಕಚೇರಿಗೆ ಕರೆದೊಯ್ಯಲಾಗಿದೆ ಮತ್ತು ಎನ್‌ಸಿಬಿ ಅಧಿಕಾರಿಗಳು ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಎನ್‌ಸಿಬಿ ಪ್ರಾದೇಶಿಕ ನಿರ್ದೇಶಕ (ಮುಂಬೈ) ಸಮೀರ್ ವಾಂಖೆಡೆ, ದಾಳಿಯ ನಂತರ ನಟ ಅರ್ಮಾನ್ ಕೊಹ್ಲಿ ಎನ್‌ಸಿಬಿ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿಲ್ಲ ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಆತನನ್ನು ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಮತ್ತೋರ್ವ ನಟನ ಮನೆಯಲ್ಲಿಯೂ ಕೂಡ ಡ್ರಗ್ಸ್ ಪತ್ತೆಯಾಗಿದೆ
ಈ ಹಿಂದೆಯೂ ಕೂಡ ಎನ್‌ಸಿಬಿ ಅಧಿಕಾರಿಗಳು ಟಿವಿ ನಟ ಗೌರವ್ ದೀಕ್ಷಿತ್ (Gaurav Dixit) ಅವರ ಮನೆಯ ಮೇಲೆ ದಾಳಿ ನಡೆಸಿ ಆತನ ಮನೆಯಿಂದ ಎಂಡಿ ಮತ್ತು ಚರಸ್ ನಂತಹ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆದಿರುವುದು ಇಲ್ಲಿ ಅಮನಾರ್ಹ. ಆತನನ್ನು ಆಗಸ್ಟ್ 30 ರವರೆಗೆ ಎನ್‌ಸಿಬಿ ವಶಕ್ಕೆ ನೀಡಲಾಗಿದೆ. ದೀಕ್ಷಿತ್ ಅವರನ್ನು ಶುಕ್ರವಾರ ಎನ್‌ಸಿಬಿಯ ಮುಂಬೈ ವಲಯ ತಂಡ ಬಂಧಿಸಿದ್ದು, ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಇದನ್ನೂ ಓದಿ-ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ..!
ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದೇನು?
ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ NCB ಪರ ವಾದ ಮಂಡಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಅದ್ವೈತ್ ಸೇಠ್ನಾ , ಈ ಪ್ರಕರಣ ವ್ಯಾಪಾರಕ್ಕಾಗಿ ಅಕ್ರಮವಾಗಿ ಮಾದಕ ದ್ರವ್ಯಗಳ ಜಪ್ತಿಗೆ ಸಂಬಂಧಿಸಿರುವ ಕಾರಣ ದೀಕ್ಷಿತ್ ಅವರ ವಿಚಾರಣೆಯ ಅಗತ್ಯವಿದೆ ಎಂದು ಹೇಳಿದ್ದರು. ಈ ವೇಳೆ ಆರೋಪಿ ಪರ ವಾದ ಮಂಡಿಸಿದ್ದ ವಕೀಲ ಕುಶಾಲ್ ಮೊರೆ, ದಾಳಿಯ ವೇಳೆ ವಶಕ್ಕೆ ಪಡೆದುಕೊಳ್ಳಳಾಗಿರುವ ಮಾದಕ ಪದಾರ್ಥ ಸಣ್ಣ ಪ್ರಮಾಣದಲ್ಲಿದ್ದು, ದೀಕ್ಷಿತ್ ಅವರನ್ನು ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು. ಉಭಯ ಪಕ್ಷಗಳ ವಾದವನ್ನು ಆಲಿಸಿದ ಬಳಿಕ ನ್ಯಾಯಪೀಠ ಆರೋಪಿ ದೀಕ್ಷಿತ್ ನನ್ನು ಆಗಸ್ಟ್ 30ರವರೆಗೆ NCB ವಶಕ್ಕೆ ನೀಡಿ ಆದೇಶ ನೀಡಿತ್ತು.
ಇದನ್ನೂ ಓದಿ-Priyanka Chopra: ಚಿತ್ರೀಕರಣದ ವೇಳೆ ನಟಿ ಪ್ರಿಯಾಂಕಾ ಚೋಪ್ರಾಗೆ ಗಾಯ..!
ಎಜಾಜ್ ಖಾನ್ ವಿಚಾರಣೆಯ ವೇಳೆ ಬಹಿರಂಗಗೊಂಡ ಹೆಸರುಗಳು
ಇದೆ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಈ ಪ್ರಕರಣದಲ್ಲಿ ಬಾಲಿವುಡ್ ನಟ ಎಜಾಜ್ ಖಾನ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವಿಚಾರಣೆಯ ವೇಳೆ ದೀಕ್ಷಿತ್ ಹೆಸರು ಬಹಿರಂಗಗೊಂಡ ಬಳಿಕ NCB ಅಧಿಕಾರಿಗಳು ದೀಕ್ಷಿತ್ ಬಂಧನಕ್ಕೆ ಜಾಲ ಬೀಸಿತ್ತು. ಈ ಅವಧಿಯಲ್ಲಿ ಮುಂಬೈನ ಲೋಖಂಡವಾಲಾ ಪ್ರದೇಶದಲ್ಲಿರುವ ದೀಕ್ಷಿತ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಮಾದಕ ಪದಾರ್ಥಗಳನ್ನು ಜಪ್ತಿ ಮಾಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ