ನವದೆಹಲಿ: ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಮೇಲೆ ಮಾಡಲಾಗುತ್ತಿರುವ ಆರೋಪಗಳನ್ನು ದಿಯಾ ಮಿರ್ಜಾ (Dia Mirza) ಅಲ್ಲಗಳೆದಿದ್ದಾರೆ. ಮಂಗಳವಾರ ಸಂಜೆ ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಖ್ಯಾತ ಬಾಲಿವುಡ್ ನಟಿ ದಿಯಾ ಮಿರ್ಜಾ ತನ್ನ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ದಿಯಾ ತಮ್ಮ ಮೇಲೆ ಮಾಡಲಾಗುತ್ತಿರುವ ಎಲ್ಲ ಆರೋಪಗಳು ಆಧಾರ ರಹಿತ ಹಾಗೂ ತಪ್ಪಾಗಿವೆ. ನಾನು ನನ್ನ ಸಂಪೂರ್ಣ ಜೀವನದಲ್ಲಿ ಯಾವುದೇ ರೀತಿಯ ಮಾದಕ ಪದಾರ್ಥ ಸೇವನೆ ಮಾಡಿಲ್ಲ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Drugs Case ನಲ್ಲಿ ಸಿಲುಕಿರುವ ಕಂಪನಿಯ ಜೊತೆಗೆ Salman Khan ಸಂಬಂಧ...!


"ನಾನು ಈ ಕುರಿತಾದ ಸುದ್ದಿಗಳನ್ನು ಬಲವಾಗಿ ಖಂಡಿಸಲು ಬಯಸುತ್ತೇನೆ, ಏಕೆಂದರೆ ಇದು ಆಧಾರರಹಿತವಾಗಿದೆ ಮತ್ತು ತಪ್ಪು ಉದ್ದೇಶಗಳೊಂದಿಗೆ ಹಬ್ಬಿಸಲಾಗುತ್ತಿದೆ" ಎಂದು ದಿಯಾ ಮಿರ್ಜಾ ಟ್ವೀಟ್ ಮಾಡಿದ್ದಾರೆ.


"ಈ ರೀತಿಯ ತಪ್ಪಾಗಿ ವರದಿ ಮಾಡುವುದು ನನ್ನ ಖ್ಯಾತಿಯ ಮೇಲೆ ನೇರ ಪರಿಣಾಮ ಬೀರಲಿದೆ ಮತ್ತು ಇದು ನನ್ನ ವೃತ್ತಿಜೀವನಕ್ಕೆ ಮಾರಕವಾಗಿದೆ. ಇದಕ್ಕಾಗಿ ನಾನು ವರ್ಷಗಳವರೆಗೆ ಕಠಿಣ ಪರಿಶ್ರಮದ  ಮಾಡಿದ್ದೇನೆ." ಎಂದು ದಿಯಾ ತಮ್ಮ ಮುಂದಿನ ಟ್ವೀಟ್ ನಲ್ಲಿ ಹೇಳಿದ್ದಾರೆ.


ಇದನ್ನು ಓದಿ - Bollywood Drugs Case: Sara ಹಾಗೂ ಶ್ರದ್ಧಾಗೆ ಸಮನ್ಸ್ ನೀಡಲಿದೆ NCB


"ನನ್ನ ಇಡೀ ಜೀವನದಲ್ಲಿ ನಾನು ಯಾವುದೇ ರೂಪದಲ್ಲಿ ಮಾದಕ ಪದಾರ್ಥ ಬಳಸಿಲ್ಲ ಅಥವಾ ಸೇವಿಸಿಲ್ಲ. ಭಾರತೀಯ ಪ್ರಜೆಯಾಗಿರುವುದರಿಂದ, ನನ್ನ ವಿರುದ್ಧ ಹರಡುವ ಅಪಪ್ರಚಾರದ ವಿರುದ್ಧ ಕಾನೂನು ಕ್ರಮಗಳನ್ನು ಬಳಸಲಿದ್ದೇನೆ. ನನ್ನ ಬೆಂಬಲಕ್ಕೆ ನಿಂತ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು." ಎಂದು ದಿಯಾ ಹೇಳಿದ್ದಾರೆ.


ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯಲ್ಲಿ ಡ್ರಗ್ ಆಂಗಲ್ ಕಾಣಿಸಿಕೊಂಡ ಹಿನ್ನೆಲೆ ಅನೇಕ ಬಾಲಿವುಡ್ ತಾರೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತನಿಖೆಯಲ್ಲಿ ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆ (Deepika Padukone), ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಅವರ ಕೇಳಿಬಂದ ಕಾರಣ ಜನರು ಆಶ್ಚರ್ಯಚಕಿತರಾಗಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಬಾಲಿವುಡ್ ನಟಿ ದಿಯಾ ಮಿರ್ಜಾ ಹೆಸರು ಕೇಳಿಬಂದ ಕಾರಣ ಜನರು ಸ್ತಬ್ಧರಾಗಿದ್ದಾರೆ.


ಬಂಧಿತ ಡ್ರಗ್ಸ್ ಪೆಡ್ಲರ್ಗಳಾದ ಅನುಜ್ ಕೇಶವಾನಿ ಮತ್ತು ಅಂಕುಶ್ ಅವರನ್ನು ವಿಚಾರಣೆಯ ಬಳಿಕ  ನಟಿ ದಿಯಾ ಮಿರ್ಜಾ ಅವರ ಹೆಸರು ಬಹಿರಂಗವಾಗಿದೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ. ಮಾಹಿತಿಯ ಪ್ರಕಾರ, ಸೆಲೆಬ್ರಿಟಿ ಮ್ಯಾನೇಜರ್ ಮೂಲಕ, ಈ ನಟಿಗೆ ಡ್ರಗ್ಸ್ ತಲುಪಿಸಲಾಗುತ್ತಿತ್ತು ಎನ್ನಲಾಗಿದೆ.


ಇದನ್ನು ಓದಿ- Drugs Case: Deepika Padukone 'ಹ್ಯಾಲೊವಿನ್ ಪಾರ್ಟಿ' ಸತ್ಯ ಬಹಿರಂಗ


2019 ರಲ್ಲಿ ಈ ನಟಿಗಾಗಿ ಖರೀದಿಸಿದ ಮಾದಕ ಪದಾರ್ಥಗಳ ಬಗ್ಗೆ ಎನ್‌ಸಿಬಿಗೆ ಬಲವಾದ ಮಾಹಿತಿ ಮತ್ತು ಪುರಾವೆಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ. ನಟಿಯ ವತಿಯಿಂದ ಅವರ ಸೆಲೆಬ್ರಿಟಿ ಮ್ಯಾನೇಜರ್ ಗಳು ಒಂದರಿಂದ ಎರಡು ಬಾರಿ ಡ್ರಗ್ಸ್ ಪೆಡ್ಲರ್ ಗಳನ್ನು ಭೇಟಿಯಾಗಿದ್ದರು ಎನ್ನಲಾಗಿದೆ.