ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಸಂಬಂಧಿಸಿದ ಡ್ರಗ್ ಆಂಗಲ್ ಬಗ್ಗೆ ತನ್ನ ತನಿಖೆಯ ವ್ಯಾಪ್ತಿಯನ್ನುವಿಸ್ತರಿಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ದೀಪಿಕಾ ಅವರನ್ನು ಎನ್‌ಸಿಬಿ ತಂಡ ಶನಿವಾರ ಪ್ರಶ್ನಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ನಡೆಸುವಾಗ ದೀಪಿಕಾ ಅವರ ಪತಿ ಮತ್ತು ಬಾಲಿವುಡ್ ನಟ ರಣವೀರ್ ಸಿಂಗ್ (Ranaveer Singh) ಅವರು ಪತ್ನಿಯೊಂದಿಗೆ ಹಾಜರಾಗಬಹುದೇ ಎಂದು ಎನ್‌ಸಿಬಿಯನ್ನು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Full Video: Karan Johar Drug Party ಮೇಲೆ NCB ಕಣ್ಣು... ದಿಗ್ಗಜ ಬಾಲಿವುಡ್ ನಟ-ನಟಿಯರು ಇದರಲ್ಲಿ ಶಾಮೀಲು


ರಣವೀರ್ ಸಿಂಗ್ ಮಾಡಿರುವ ಮನವಿ ಏನು?
ಈ ಕುರಿತು ತನ್ನ ಮನವಿಯಲ್ಲಿ ಬರೆದುಕೊಂಡಿರುವ ರಣವೀರ್ ಸಿಂಗ್, ದೀಪಿಕಾ ಆಗಾಗ ಚಿಂತೆಗೆ ಒಳಗಾಗಿ ಆತಂಕದಿಂದ ಬಳಲುತ್ತಾರೆ. ಹೀಗಾಗಿ ವಿಚಾರಣೆಯ ವೇಳೆ ಅವರಿಗೆ ಸಾಥ್ ನೀಡಲು ತಮಗೆ ಅವಕಾಶ ಕಲ್ಪಿಸಬೇಕು ಎಂದು ಕೇಳಿಕೊಂಡಿದ್ದಾರೆ. ತಾನೊಬ್ಬ ಕಾನೂನನ್ನು ಅನುಸರಿಸುವ ಪ್ರಜೆಯಾಗಿದ್ದು, ದೀಪಿಕಾ ಜೊತೆಗೆ ವಿಚಾರಣೆಯ ವೇಳೆ ಹಾಜರಾಗುವುದು ಸಾಧ್ಯವಿಲ್ಲ ಎಂಬುದು ತಮಗೆ ತಿಳಿದಿದೆ. ಆದರೆ, NCB ಕಾರ್ಯಾಲಯದಲ್ಲಿ ಕುಳಿತುಕೊಳ್ಳಲು ತಮಗೆ ಅನುಮತಿಸಬೇಕು ಎಂದು ಕೇಳಿಕೊಂಡಿದ್ದಾರೆ. ಆದರೆ, ಅವರ ಅರ್ಜಿಯ ಕುರಿತು NCB ಇದುವರೆಗೂ ಯಾವುದೇ ನಿರ್ಣಯ ಕೈಗೊಂಡಿಲ್ಲ.


ಇದನ್ನು ಓದಿ- Drugs Case: Deepika Padukone 'ಹ್ಯಾಲೊವಿನ್ ಪಾರ್ಟಿ' ಸತ್ಯ ಬಹಿರಂಗ


ಚಾಟ್ ನಡೆಸಿ ಸಿಲುಕಿಕೊಂಡಿದ್ದಾರೆ ದೀಪಿಕಾ
ತಾವು ನಡೆಸಿರುವ ಚಾಟ್ ವೊಂದರಿಂದ ದೀಪಿಕಾ ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾಳೆ. ದೀಪಿಕಾ ನಡೆಸಿರುವ ಈ ಚಾಟ್ ಇದೀಗ NCB ಅಧಿಕಾರಿಗಳ ಕೈಸೇರಿದೆ. ಅಕ್ಟೋಬರ್ 28, 2017ರಲ್ಲಿ ನಡೆಸಿರುವ ಚಾಟ್ ಇದಾಗಿದೆ. ಈ ದಿನಾಂಕ ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಆವಶ್ಯಕವಾಗಿದೆ. ಏಕೆಂದರೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಈ ಚಾಟ್ ನಲ್ಲಿ ದೀಪಿಕಾ ತನ್ನ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರ ಬಳಿಯಿಂದ ಹಶಿಶ್ ಡ್ರಗ್ಸ್ ಕೇಳುತ್ತಿರುವುದು ಕಂಡುಬಂದಿದೆ.


ಇದನ್ನು ಓದಿ- BIG NEWS: ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಸೇರಿದಂತೆ ಹಲವರಿಗೆ ಸಮನ್ಸ್ ಜಾರಿಗೊಳಿಸಿದ NCB