ನವದೆಹಲಿ: ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಆತ್ಮಹತ್ಯೆ ಪ್ರಕರಣದಲ್ಲಿ ಡ್ರಗ್ಸ್ ಕೋನ ಕಂಡುಬಂದಿರುವ ಹಿನ್ನೆಲೆ ಹಲವು ಡ್ರಗ್ಸ್ ಪೆಡ್ಲರ್ ಗಳು ಇದೀಗ NCB ಅತಿಥಿಯಾಗಿದ್ದಾರೆ. ಬಾಲಿವುಡ್ ನಲ್ಲಿಯೂ ಕೂಡ ಇದೀಗ ನಿರವ ಮೌನದ ಛಾಯೆ ಆವರಿಸಿದೆ. ರಿಯಾ ಚರ್ಕ್ರವರ್ತಿಯ ಬಂಧನದ ಬಳಿಕ ಹಲವು ಖ್ಯಾತನಾಮರ ಹೆಸರುಗಳು ಖುಲಾಸೆಗೊಳ್ಳುತ್ತಿವೆ.
#UDTABollywood - Fiction Vs Reality
Watch how the high and mighty of Bollywood proudly flaunt their drugged state!!
I raise my voice against #DrugAbuse by these stars. RT if you too feel disgusted @shahidkapoor @deepikapadukone @arjunk26 @Varun_dvn @karanjohar @vickykaushal09 pic.twitter.com/aBiRxwgQx9
— Manjinder Singh Sirsa (@mssirsa) July 30, 2019
ಏತನ್ಮಧ್ಯೆ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಪಾರ್ಟಿ 'ಸಾಟರ್ಡೆ ನಾಯಿಟ್ ವೈಬ್ಸ್' ನಿಂದ ಹೊರಹೊಮ್ಮಿದ್ದ ವಿಡಿಯೋವೊಂದು ಇದೀಗ ಎರಡನೇ ಬಾರಿಗೆ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ ಇದೀಗ ಈ ಸಂಪೂರ್ಣ ವಿಡಿಯೋ NCB ಅಧಿಕಾರಿಗಳ ಕೈ ಕೂಡ ಸೇರಿದೆ. ಈ ವಿಡಿಯೋದಲ್ಲಿ ಖ್ಯಾತ ಬಾಲಿವುಡ್ ನಟ-ನಟಿಯರು ನಷೆಯಲ್ಲಿರುವುದು ಕಂಡುಬರುತ್ತಿದೆ ಎನ್ನಲಾಗಿದೆ.
Also Read-ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಆಯುಷ್ಮಾನ್ ಕುರಾನಾ...!
ಈ ವಿಡಿಯೋ ಅನ್ನು ಸ್ವತಃ ಕರಣ್ ಜೋಹರ್ (Karan Johar) ಅವರೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಆಗ ಈ ವಿಡಿಯೋಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡಿ ಸ್ವಾರಸ್ಯಕರ ಕಾಮೆಂಟ್ ಗಳನ್ನೂ ಕೂಡ ಮಾಡಿದ್ದರು. ಈ ವಿಡಿಯೋದಲ್ಲಿ ಬಾಲಿವುಡ್ ನ ಖ್ಯಾತನಾಮರು ನಷೆಯಲ್ಲಿರುವುದು ಕಂಡುಬರುತ್ತಿದೆ. ಈ ನಡುವೆ ಶಿರೋಮಣಿ ಅಕಾಲಿದಳದ ಶಾಸಕ ಮನಜಿಂದರ್ ಸಿಂಗ್ ಸಿರ್ಸಾ, ಕರಣ್ ಜೋಹರ್ ಸೇರಿದಂತೆ ಬಾಲಿವುಡ್ ನ ಖ್ಯಾತನಾಮರ ವಿರುದ್ಧ ದೂರು ದಾಖಲಿಸಿದ್ದಾರೆ.
Also Read- ಡ್ರಗ್ಸ್ ಪ್ರಕರಣದಲ್ಲಿ ಹೆಸರು ಹೊರಬಂದ ಬಳಿಕ ದೆಹಲಿ ಹೈಕೋರ್ಟ್ ಕದಬಡಿದ ರಕುಲ್ ಪ್ರೀತ್ ಸಿಂಗ್
ಈ ಪಾರ್ಟಿಯಲ್ಲಿ ವಿಕ್ಕಿ ಕೌಶಲ್, ದೀಪಿಕಾ ಪಡುಕೋಣೆ, ಜೋಯಾ ಅಖ್ತರ್, ಮಲೈಕಾ ಅರೋರಾ, ಅರ್ಜುನ್ ಕಪೂರ್, ಶಾಹಿದ್ ಕಪೂರ್ ಕಾಣಿಸಿಕೊಂಡಿದ್ದಾರೆ.ಈ ಎಲ್ಲಾ ಸ್ಟಾರ್ಸ್ ಗಳು ಈ ವಿಡಿಯೋದಲ್ಲಿ ನಷೆಯಲ್ಲಿರುವಂತೆ ಕಂಗೊಳಿಸುತ್ತಿದೆ. ಈ ವೀಡಿಯೊ ಕುರಿತು ಇದೀಗ NCB ತನಿಖೆ ನಡೆಸುತ್ತಿದೆ. ವಿಕಿ ಕೌಶಲ್ ಬಳಿ ಬಿಳಿ ಬಣ್ಣದ ಪುಡಿ ಗೋಚರಿಸುತ್ತದೆ. ಇದನ್ನು ಕೊಕೇನ್ ಎಂದು ಕರೆಯಲಾಗುತ್ತಿದೆ ಎಂದು ವರದಿಯಾಗಿದೆ. ಈ ಪಾರ್ಟಿ 2019 ರ ಜುಲೈ 30 ರಂದು ಕರಣ್ ಜೋಹರ್ ಅವರ ಮನೆಯಲ್ಲಿ ಆಯೋಜಿಸಲಾಗಿತ್ತು ಎನ್ನಲಾಗಿದೆ.
Also Read- Sara Ali Khan ನಿಂದ ಹಲವು ಬಾರಿ ಡ್ರಗ್ಸ್ ಪಡೆದಿದ್ದಾಳಂತೆ ರಿಯಾ ಚಕ್ರವರ್ತಿ
ಕಳೆದ ವಾರಾಂತ್ಯದವರೆಗೆ NCB ಅಧಿಕಾರಿಗಳು ಆರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿತ್ತು. ಇವರಲ್ಲಿ ಓರ್ವ ಡ್ರಗ್ ಪೆಡ್ಲರ್ ಅನ್ನು ಗೋವಾದಿಂದ ಬಂಧಿಸಲಾಗಿತ್ತು ಹಾಗೂ ಮುಂಬರುವ ದಿನಗಳಲ್ಲಿ ಈ ದಾಳಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ.
Also Read- Viral Video: 'ನಾನೂ ಒಂದು ಕಾಲದಲ್ಲಿ ಡ್ರಗ್ ಅಡಿಕ್ಟ್ ಆಗಿದ್ದೆ' ಎಂದ Kangana Ranaut