ಡ್ರಗ್ಸ್ ಧಂಧೆ: ಹಿರಿತೆರೆ ಆಯ್ತು, ಈಗ ಕಿರುತೆರೆ ಸರದಿ, ಇಂದು ನಾಲ್ವರ ವಿಚಾರಣೆ
ಸ್ಯಾಂಡಲ್ ವುಡ್ ಸ್ಟಾರ್ ಗಳು ಸೆಲೆಬ್ರಿಟಿ ಸ್ಟೇಟಸ್ ಪಡೆದುಕೊಂಡಿರುತ್ತಾರೆ. ಹೈ ಪೈ ಲೈಫ್ ಸ್ಟೈಲ್ ನಡೆಸುತ್ತಿರುತ್ತಾರೆ. ಹಾಗೆಯೇ ಮೋಜು ಮಸ್ತಿ ಮಾಡುತ್ತಾರೆ, ಡ್ರಗ್ಸ್ (Drugs) ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು.
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಭಾರೀ ಸಂಚಲನ ಮೂಡಿಸಿರುವ ಡ್ರಗ್ಸ್ ಮಾಫಿಯಾ (Drugs Mafia)ಕ್ಕೆ ಸಂಬಂಧಿಸಿದಂತೆ ಇಷ್ಟು ದಿನ ಸ್ಯಾಂಡಲ್ ವುಡ್ (Sandalwood) ನಟಿ-ನಟರ ವಿಚಾರಣೆ ಮಾಡಲಾಗಿತ್ತು. ಈಗ ಕಿರುತೆರೆಯ ಸರದಿ. ಇಂದು ಕೂಡ ನಾಲ್ವರು ಕಿರುತೆರೆ ಕಲಾವಿದರ ವಿಚಾರಣೆ ನಡೆಯಲಿದೆ.
ಸ್ಯಾಂಡಲ್ ವುಡ್ ಸ್ಟಾರ್ ಗಳು ಸೆಲೆಬ್ರಿಟಿ ಸ್ಟೇಟಸ್ ಪಡೆದುಕೊಂಡಿರುತ್ತಾರೆ. ಹೈ ಪೈ ಲೈಫ್ ಸ್ಟೈಲ್ ನಡೆಸುತ್ತಿರುತ್ತಾರೆ. ಹಾಗೆಯೇ ಮೋಜು ಮಸ್ತಿ ಮಾಡುತ್ತಾರೆ, ಡ್ರಗ್ಸ್ (Drugs) ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಈಗ ಈ ಚಾಳಿ ಕಿರುತೆರೆಗೂ ಪಸರಿಸಿದೆ. ಕಿರುತೆರೆಯ ಕಲಾವಿದರು ಕೂಡ ಡ್ರಗ್ಸ್ ಬಳಕೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಡ್ರಗ್ಸ್ ದಂಧೆ ವಿಚಾರಣೆ ನಡುವೆಯೂ ಶೂಟಿಂಗ್ ಗೆ ರೆಡಿಯಾದ ದಿಗಂತ್
ಈಗಾಗಲೇ ಒಟ್ಟು ಎಂಟು ಮಂದಿಗೂ ಹೆಚ್ಚು ಕಿರುತೆರೆ ಕಲಾವಿದರನ್ನು ವಿಚಾರಣೆ ನಡೆಸಿದ್ದ ಐಎಸ್‌ಡಿ (ISD) ಈಗ ಮತ್ತೆ ನಾಲ್ವರನ್ನು ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದೆ. ನಿನ್ನೆ ಕಿರುತೆರೆ ನಟಿ ಗೀತಾ ಭಾರತಿ ಭಟ್ ಮತ್ತು ಅಭಿಷೇಕ್ ದಾಸ್ ಅವರನ್ನು ಸುದೀರ್ಘ ವಿಚಾರಣೆ ನಡೆಸಲಾಗಿತ್ತು. ಇದಲ್ಲದೆ ಚಿತ್ರನಟ ಲೂಸ್ ಮಾದ (Loose Mada) ಯೋಗಿ ಹಾಗೂ ಅಯ್ಯಪ್ಪ ಸೇರಿ ಕಿರುತೆರೆ ನಟಿಯರನ್ನು ವಿಚಾರಣೆ ನಡೆಸಲಾಗಿತ್ತು.
ಕೇರಳ ಮೂಲದ ಡ್ರಗ್ ಫೆಡ್ಲರ್ ಗಳಾದ ಡ್ಯಾನಿಯಲ್ ಮತ್ತು ಗೋಕುಲ್ ಕೃಷ್ಣನ್ ಕೆಲ ಕಿರುತೆರೆ ನಟ ನಟಿಯರು ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಡ್ಯಾನಿಯಲ್ ಮತ್ತು ಗೋಕುಲ್ ಕೃಷ್ಣನ್ ಅವರ ಪೋನ್ ಕಾಂಟ್ಯಾಕ್ಟ್ ಇದ್ದವರನ್ನು ಹಾಗೂ ಅವರು ವಿಚಾರಣೆ ವೇಳೆ ತಿಳಿಸಿರುವವರನ್ನು ವಿಚಾರಣೆಗೆ ಕರೆಯಲಾಗಿದೆ. ಡ್ರಗ್ ಫೆಡ್ಲರ್ ಗಳ ಮೊಬೈಲ್ ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಿರುತೆರೆ ಕಲಾವಿದರ ನಂಬರ್ ಗಳು ಪತ್ತೆಯಾಗಿದ್ದು ಎಲ್ಲರಿಗೂ ನೋಟೀಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಡ್ರಗ್ಸ್ ಧಂಧೆಯಲ್ಲಿ ನಾನಿರುವುದು ಸಾಬೀತಾದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಕೊಟ್ಟುಬಿಡುತ್ತೇನೆ: ಜಮೀರ್ ಅಹಮದ್