ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುವ ಪೆಡ್ಲರ್ಗಳ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯ ಕುರಿತು ವಿದ್ಯಾರ್ಥಿಗಳಿಗಾಗಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಸಚಿವ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದರು.
ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿರುವ ಮಂಡ್ಯ ನೂತನ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ರೌಡಿಸಂ ಹಾಗೂ ಅಕ್ರಮ ಚಟುವಟಿಕೆ ತಡೆಗಾಗಿ ಕಾನೂನು ಬಾಹಿರ ಕೃತ್ಯ ನಡೆಸುವವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಶಿವಸಾಗರ್ ಮತ್ತು ಕರ್ಬಿ ಅಂಗ್ಲಾಂಗ್ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 48 ಕೋಟಿ ರೂಪಾಯಿ ಮೌಲ್ಯದ ದೊಡ್ಡ ಪ್ರಮಾಣದ ಡ್ರಗ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಎರಡು ಕಾರ್ಯಾಚರಣೆಯಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
OTC Drug Policy: ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಲಭ್ಯವಿರುವ ಔಷಧಿಗಳು ಓವರ್ ದಿ ಕೌಂಟರ್ (OTC) ಪಟ್ಟಿಯಲ್ಲಿ ಲಭ್ಯವಿರಲಿದ್ದು ವಿಶೇಷ ಸಮಿತಿಯು ಯಾವ ಹೊಸ ನಿಯಮಗಳನ್ನು ರೂಪಿಸುತ್ತಿದೆ ಎಂದು ತಿಳಿಯಿರಿ.
Mass killing of donkeys: ಭಾರತದಲ್ಲಿ ಈ ಚೀನೀ ಔಷಧದ ಬೇಡಿಕೆ ಮತ್ತು ಪೂರೈಕೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇದಲ್ಲದೆ ಬ್ರೂಕ್ ಇಂಡಿಯಾದ ವರದಿಯ ಪ್ರಕಾರ 2010ರಿಂದ 2020ರ ದಶಕದಲ್ಲಿ ಭಾರತದಲ್ಲಿ ಕತ್ತೆಗಳ ಜನಸಂಖ್ಯೆಯಲ್ಲಿ 61.2% ರಷ್ಟು ಭಾರೀ ಕುಸಿತ ಕಂಡುಬಂದಿದೆ.
Antibiotics other drugs new rate:ಬೆಲೆ ಇಳಿಕೆಯ ಅಧಿಸೂಚನೆಯನ್ನು NPCA ಹೊರಡಿಸಿದೆ. NPCA ಯ ಅಧಿಸೂಚನೆಯ ಪ್ರಕಾರ, ಔಷಧ ತಯಾರಿಕಾ ಕಂಪನಿಗಳು ಸ್ವತಃ GST ಪಾವತಿಸಿದರೆ ಮಾತ್ರ GST ಸೇರಿಸಲು ಅನುಮತಿಸಲಾಗುತ್ತದೆ.
‘ದಮ್ ಮಾರೋ ದಮ್, ಮಿತ್ ಜಾಯೇ ಘಮ್’ ಹಾಡು 1971ರಲ್ಲಿ ಬಿಡುಗಡೆಯಾಗಿದ್ದು, ಅಂದಿನಿಂದ ಇಲ್ಲಿಯವರೆಗೆ ಹಿಂದಿ ಹಾಡುಗಳನ್ನು ಇಷ್ಟಪಡುವ ಜನರ ಬಾಯಲ್ಲಿ ಉಳಿದುಕೊಂಡಿದೆ. ಇಂದಿಗೂ ಯುವಕರು ಅದೇ ಸೂತ್ರದ ಮೇಲೆ ಡ್ರಗ್ಸ್ ಮೊರೆ ಹೋಗುತ್ತಿದ್ದಾರೆ. ಇದು ಖಂಡಿತವಾಗಿಯೂ ಸ್ವಲ್ಪ ಸಮಯದವರೆಗೆ ಉದ್ವೇಗವನ್ನು ನಿವಾರಿಸುತ್ತದೆ, ಆದರೆ ದೀರ್ಘಾವಧಿಯಲ್ಲಿ ಇದು ಸಾಕಷ್ಟು ಹಾನಿಕಾರಕವೆಂದು ಸಾಬೀತುಪಡಿಸುತ್ತದೆ. ಮಾದಕ ವ್ಯಸನದಿಂದ ಅನೇಕ ಜನರ ಜೀವನ ಮತ್ತು ಕುಟುಂಬಗಳು ನಾಶವಾಗಿವೆ, ಆದರೆ ಜನರು ಇನ್ನೂ ವ್ಯಸನಿಯಾಗಿ ಉಳಿದಿದ್ದಾರೆ.
ವಶಪಡಿಸಿಕೊಂಡ ಡ್ರಗ್ ನಲ್ಲಿ 1,723 ಕೆ.ಜಿ. ಅಫೀಮು, 55,895 ಕೆ.ಜಿ. ಹೆರಾಯಿನ್, 40 ಗ್ರಾಂ ಹಾಶಿಶ್ ಆಯಿಲ್, 1.026 ಕೆ.ಜಿ. ಚರಸ್, 467 ಗ್ರಾಂ, ಸೇರಿದಂತೆ 572 ವಿವಿಧ ರೀತಿಯ ಮಾತ್ರೆಗಳು 43 ಎಲ್ ಎಸ್ ಡಿ ಸ್ಟಿಪ್ಸ್ ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ.
ಗಾಂಜಾ ಮಾರಾಟ ಮಾಡುತ್ತಿದ್ದ ಭರತ್ ಕುಮಾರ್, ರಾಕೇಶ್ ಕುಮಾರ್, ಅನಿಲ್ ಸಿಂಗ್,ಮುಖೇಶ್ ರನ್ನು ಬಂಧಿಸಿ 4 ಕೆಜಿ ಗಾಂಜಾ,ನಗದು,ಕೃತ್ಯಕ್ಕೆ ಬಳಸಿದ್ದ 2 ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದು ಶಿವಮೊಗ್ಗದ ಪ್ರತಿಷ್ಠಿತ ಕಾಲೇಜು ಕ್ಯಾಂಪಸ್ ನಲ್ಲಿ ಕಂಡು ಬಂದಿರುವ ದೃಶ್ಯ ಎನ್ನಲಾಗಿದೆ. ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ಕ್ಯಾಂಪಸ್ ನಲ್ಲಿ ಕಾಲೇಜಿವ ವಿದ್ಯಾರ್ಥಿಗಳು ಹಾಡಹಗಲೇ ಡ್ರಗ್ಸ್ ಸೇವಿಸಿ, ಗುಂಗಿನ ನಶೆಯಲ್ಲಿ ಒದ್ದಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡ್ರಗ್ಸ್ ಚಟ ಬಿಡಿಸಲು ಕುಟುಂಬಸ್ಥರು ಈತನನ್ನು ಹತ್ತಿರದ ರಿಹಾಬಿಲೇಷನ್ ಸೆಂಟರ್ ಸೆಂಟರ್ ಸೇರಿಸಿದ್ದರು. ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆದು ಹೊರಬಂದಿದ್ದ. ಕೈಯಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ.
ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಇತ್ತೀಚಿಗೆ ಹೆಚ್ಚಾಗುತ್ತಿರುವ ಮಾದಕ ವಸ್ತುಗಳ ಮಾರಾಟ ಹಾಗೂ ಮಾದಕ ವ್ಯಸನಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಇನ್ನು ಮುಂದೆ ವಾರಕ್ಕೊಮ್ಮೆ ಕಾಲೇಜುಗಳು , ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಡಾಗ್ ಸ್ಕ್ವಾಡ್ ಪರಿಶೀಲನೆ.
Virtual World: ಡಾರ್ಕ್ ವೆಬ್ (Dark Web) ಅಂದರೆ, ಡ್ರಗ್ಸ್ (Drugs), ಶಸ್ತ್ರಾಸ್ತ್ರ (Arms) ಹಾಗೂ ಭೂಗತ ಜಗತ್ತಿನ (Under World) ಸಂಗಮವಾಗಿದೆ. ಇಲ್ಲಿ ನಡೆಯುವ ಅಪರಾಧಗಳವರೆಗೆ ಪೊಲೀಸರು ಎಂದಿಗೂ ಕೂಡ ತಲುಪಲು ಸಾಧ್ಯವಿಲ್ಲ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ಗಾಂಜಾ ಬೆಳೆಯನ್ನು ಕೃಷಿಯಂತೆ ಬೆಳೆದು, ಅದನ್ನು ಒಣಗಿಸಿದ ನಂತರ ಪ್ಯಾಕ್ ಮಾಡಿ ವ್ಯವಸ್ಥಿತವಾಗಿ ನೆಲಮಂಗಲದ ಸುತ್ತಮುತ್ತ ಮಾರಾಟ ಮಾಡುತ್ತಿದ್ದ ಜಾಲಕ್ಕಾಗಿ ಬಲೆ ಬೀಸಿದ್ದ ತ್ಯಾಮಗೊಂಡ್ಲು ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.