ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾ (Drugs Mafia)ದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ‌ ದ್ವಿವೇದಿ  ಮತ್ತು ಸಂಜನಾ ಗುಲ್ರಾನಿ (Sanjana Gulrani) ಸೇರಿದಂತೆ ಆರು ಮಂದಿ ಆರೋಪಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.


COMMERCIAL BREAK
SCROLL TO CONTINUE READING

ರಾಗಿಣಿ‌ ದ್ವಿವೇದಿ (Ragini Dwivedi) ಮತ್ತು ಸಂಜನಾ ಗುಲ್ರಾನಿ  ಸೇರಿದಂತೆ ಆರು ಮಂದಿ ಆರೋಪಿಗಳ ಜೈಲು ವಾಸ ಮುಂದುವರೆಯುತ್ತದೆಯೋ ಅಥವಾ ಮೊಟಕುಗೊಳ್ಳುತ್ತದೆಯೋ ಎಂದು ಇಂದು ನಿರ್ಧಾರವಾಗಲಿದೆ. 


ಡ್ರಗ್ಸ್ ದಂಧೆ ವಿಚಾರಣೆ ನಡುವೆಯೂ ಶೂಟಿಂಗ್ ಗೆ ರೆಡಿಯಾದ ದಿಗಂತ್


ಇವರೆಲ್ಲರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಲಿದ್ದು ಅವರನ್ನು ಇಂದು ಬೆಂಗಳೂರಿನ‌ಲ್ಲಿರುವ  ಎನ್ ಡಿಪಿಎಸ್ ಕೋರ್ಟಿಗೆ ಹಾಜರುಪಡಿಸಲಾಗುತ್ತದೆ. 


ಡ್ರಗ್ ಕಿಂಗ್ ಪಿನ್ ಜತೆ ಬಿಜೆಪಿಯ ಮಾಜಿ ಗೃಹ ಸಚಿವ ಅಶೋಕ್; ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್


ಈ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಲಿರುವ ಎನ್ ಡಿಪಿಎಸ್ ಕೋರ್ಟ್ ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡುತ್ತದೆಯೋ ಅಥವಾ ಆರೋಪಿಗಳಿಗೆ ಜಾಮೀನು ನೀಡುತ್ತದೆಯೋ ಎಂಬುದನ್ನು ಕಾದುನೋಡಬೇಕು.


ಡ್ರಗ್ಸ್ ಧಂಧೆಯಲ್ಲಿ ನಾನಿರುವುದು ಸಾಬೀತಾದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಕೊಟ್ಟುಬಿಡುತ್ತೇನೆ: ಜಮೀರ್ ಅಹಮದ್


ಕಳೆದ  ವಿಚಾರಣೆ ಸಂದರ್ಭದಲ್ಲಿ ಡ್ರಗ್ಸ್ ಮಾಫಿಯಾ (Drugs Mafia)ದ ತನಿಖೆ ನಡೆಸುತ್ತಿರುವ ಸೆಂಟ್ರಲ್ ಕ್ರೈಂ ಬ್ರಾಂಚ್ (CCB) ಪೊಲೀಸರಿಗೆ ಆರೋಪಿಗಳ ವಿರುದ್ಧ ಆಕ್ಷೇಪಣೆಗಳಿದ್ದರೆ ಆ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಲಾಗಿತ್ತು. ಇದರ ಅನ್ವಯ ಇಂದು ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರ ಪರವಾಗಿ ಸರ್ಕಾರಿ ಅಭಿಯೋಜಕರು ಇಂದು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.