Branded Watches Scam: ಬ್ರಾಂಡೆಡ್ ವಾಚ್ ಪ್ರಿಯರೇ ಎಚ್ಚರ. ನೀವು ಸಾವಿರಾರು ರೂಪಾಯಿಯ ವಾಚ್ ಅನ್ನು ಅರ್ಧ ಬೆಲೆಗೆ ಸಿಗುತ್ತೆ ಅಂತ ಮುಗಿಬಿದ್ದರೆ ಮೋಸ ಹೋಗೋದು ಗ್ಯಾರಂಟಿ. ಸಿಲಿಕಾನ್ ಸಿಟಿಯಲ್ಲಿ ಅಸಲಿ ಕಂಪನಿ ಸೇರಿ ಗ್ರಾಹಕರಿಗೆ ಪಂಗನಾಮ ಹಾಕುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಸಿಸಿಬಿ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಬರೋಬ್ಬರಿ 25 ಲಕ್ಷ ಮೌಲ್ಯದ ನಕಲಿ ವಾಚ್ಗಳ ಜೊತೆ ಐವರು ಆರೋಪಿಗಳು ಈಗ ಕಂಬಿ ಎಣಿಸುತ್ತಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಆರ್ಸಿಬಿ ಮ್ಯಾಚ್ ವೇಳೆ ಮೊಬೈಲ್ ಕದ್ದಿದ್ದ ಖದೀಮರನ್ನು ಕಬ್ಬನ್ ಪಾರ್ಕ್ ಪೊಲೀಸರು ಲಾಕ್ ಮಾಡಿದ್ದಾರೆ.
ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವೊಂದನ್ನು ಬೇಧಿಸಿದ ಮಂಗಳೂರು ಪೊಲೀಸರು ಸುಮಾರು 75 ಕೋಟಿ ರೂ ಮೌಲ್ಯದ 37.87 ಕೆ ಜಿ ತೂಕದ ಎಂಡಿಎಂಎ ಡ್ರಗ್ಸನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..
ಮಹಾರಾಷ್ಟ್ರದ ಸಾಂಗಲಿಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ವಾಹನದಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ.
ಭೀಮಾ ಸಿನಿಮಾ ರಿಲೀಸ್ ಆದ್ಮೇಲೆ ನಟ ದುನಿಯಾ ವಿಜಯ್ ಸ್ವತಃ ಮಾದಕ ವಸ್ತುಗಳ ಜಾಲ ಪತ್ತೆ ಹಚ್ಚಿ ರೈಡ್ ಮಾಡಿದ್ದರು. ಸಿಸಿಬಿ ಕಚೇರಿ ಬಳಿ ಮಾದಕ ವಸ್ತು ಮಾರಾಟವಾಗುತ್ತಿದೆ ಎಂದು ವಿಜಯ್ ಆರೋಪಿಸಿದ್ದರು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Bengaluru rave party updates: ಬೆಂಗಳೂರು ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾಗೆ ಸಿಸಿಬಿ ಬಿಗ್ ಶಾಕ್ ನೀಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗೇನ ಅಗ್ರಹಾರದ ಜಿ.ಎಂ.ಫಾರ್ಮ್ಹೌಸ್ ನಲ್ಲಿ ರೇವ್ ಪಾರ್ಟಿ ನಡೆಯುವಾಗ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ಸೋಮವಾರ ನಸುಕಿನ ಜಾವ 2 ಗಂಟೆ ವೇಳೆ ದಾಳಿ ನಡೆಸಿದ್ದರು. ಈ ಐವರನ್ನ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಪೋಟಕ ಸಂಗತಿಗಳು ಬೆಳಕಿಗೆ ಬಂದಿವೆ.
Crime News: ಹುಬ್ಬಳ್ಳಿ ಗಾಂಧಿವಾಡದ ಅನಫಲ್ ಅಬ್ದುಲ್ ಅಜೀಜ್, ಆಕಾಶಪಾರ್ಕ ನ ವಿಕ್ರಮ್ ಚೌಧರಿ, ನವನಗರದ ದಾವಲ್ ಮಲಿಕ್ ನದಾಫ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 1,38,450 ರೂ. ಮೌಲ್ಯದ 0.923 ಗ್ರಾಂ ತೂಕದ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಬಾಂಬ್ ಬ್ಲಾಸ್ಟ್ ಗೆ ಬಳಸಿರುವ ಟೈಮರ್ ಆನ್ ಲೈನ್ ನಲ್ಲಿ ಬಹಳ ಸುಲಭವಾಗಿ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಆನ್ ಲೈನಲ್ಲಿ ಟೈಮರ್ ಖರೀದಿ ಮಾಡಿದವರ ಮಾಹಿತಿ ಪಡೆಡಿರುವ ಸಿಸಿಬಿ ಎಲ್ಲರನ್ನೂ ವಿಚಾರಣೆಗೆ ಗುರಿಪಡಿಸಿದೆ.
ಜನವರಿ 7ರಂದು ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಸಿ ಸರ್ಕಲ್ ಬಳಿಯಿರುವ ಪಾರ್ಕ್ ವೆಸ್ಟ್ ಅಪಾರ್ಟ್ಮೆಂಟಿನಲ್ಲಿರುವ ರಾಜ್ ಜೈನ್ ಎಂಬಾತನ ಫ್ಲ್ಯಾಟಲ್ಲಿ ಆರೋಪಿಗಳು ಅಂದರ್ ಬಾಹರ್ ಆಡುತ್ತಿದ್ದರು.
ನೋಡೋಕೆ ಕಳ್ಳನ್ ತರ ಇದಾನೆ.. ಆದ್ರೆ ಹೇಳ್ತಿದ್ದು ಮಾತ್ರ ಲೋಕಾಯಕ್ತ ಅಧಿಕಾರಿ ಅಂತಾ.. ಸರ್ಕಾರಿ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡ್ತಿದ್ದ ಇವ ಸ್ಟೈಲಾಗಿ ಬೆದರಿಸಿ ಅವ್ರಿಂದ ಲಕ್ಷ ಲಕ್ಷ ಸುಲಿಗೆ ಮಾಡ್ತಿದ್ದ.. ಲೋಕಾಯಕ್ತ ಅಧಿಕಾರಿ ಅಂತಾ ಲಕ್ಷ ಲಕ್ಷ ಪೀಕ್ತಿದ್ದವನನ್ನ ಸಿಸಿಬಿ ಪೊಲೀಸರು ಲಾಕ್ ಮಾಡಿದ್ದಾರೆ.
Bengaluru Crime News : ಕಾಡುಬೀಸನಹಳ್ಳಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.