ಬೆಂಗಳೂರು : ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ರಾಕ್‌ಸ್ಟಾರ್‌ ದೇವಿ ಶ್ರೀಪ್ರಸಾದ್ ಆಲ್ಬಮ್ ಸಾಂಗ್ ʼಓ ಪರಿʼ ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಿದ್ದು, ಡಿಎಸ್‌ಪಿ ಹಾಡಿಗೆ ಖ್ಯಾತ ನಟರಾದ ಕಮಲ್‌ ಹಾಸನ್‌ ಮತ್ತು ನಾಗಾರ್ಜುನ್‌ ಸಾಥ್‌ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಟಿ-ಸೀರೀಸ್ ಜೊತೆಗೆ ಕೈಜೋಡಿಸಿ ಡಿಎಸ್‌ಪಿ ʼಓ ಪರಿʼ ಎಂಬ ಹಿಂದಿ ಸಿಂಗಲ್ ಹೊರತಂದಿದ್ದರು. ಅದನ್ನು ರಣವೀರ್ ಸಿಂಗ್ ಬಿಡುಗಡೆ ಮಾಡಿದ್ದರು. ಇದೊಂದು ಪ್ಯಾನ್ ಇಂಡಿಯಾ ಹಾಡಾಗಿದ್ದು, ಹಿಂದಿಯಲ್ಲದೆ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಮೂಡಿಬಂದಿದೆ. ಇನ್ನು ʼಓ ಪರಿʼಯ ತಮಿಳ್‌ ವರ್ಷನ್‌ ಸಾಂಗ್‌ನ್ನು ಬಿಗ್‌ ಬಾಸ್‌ ತಮಿಳು ಕಾರ್ಯಕ್ರಮದಲ್ಲಿ ಕಮಲ್‌ ಹಾಸ್‌ ಬಿಡುಗಡೆ ಮಾಡಿದ್ರೆ, ʼಓ ಪಿಲ್ಲಾʼ  ತೆಲುಗು ವರ್ಷನ್‌ ಸಾಂಗ್‌ನ್ನು ಬಿಗ್‌ ಬಾಸ್‌ ತೆಲುಗು ಕಾರ್ಯಕ್ರಮದ ವೇದಿಕೆ ಮೇಲೆ ನಾಗಾರ್ಜುನ ಬಿಡುಗಡೆ ಮಾಡಿದ್ರು.


ಇದನ್ನೂ ಓದಿ: 8 ಸಾವಿರ ರೂಪಾಯಿ ಬೆಲೆಯ ಅತ್ಯದ್ಬುತ ಸ್ಮಾರ್ಟ್ ಫೋನ್ ಬಿಡುಗಡೆ .!


ʼಓ ಪಿಲ್ಲಾʼಗೆ ಆಲ್‌ದಿ ಬೆಸ್ಟ್‌ ಹೇಳಿದ ನಾಗಾರ್ಜುನ, ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಸಾಂಗ್‌ ತೆಲುಗು ಭಾಷೆಯಲ್ಲಿ ಬರ್ಬೇಕು ಅಂತ ಅಂದುಕೊಂಡಿದ್ದೆ, ಅಷ್ಟರಲ್ಲಿ ಡಿಎಸ್‌ಪಿ ಆ ಕೆಲವನ್ನು ಮಾಡಿದ್ದಾರೆ. ಡಿಎಸ್‌ಪಿ ಮೇಲೆ ನಂಗೆ ಟ್ರಸ್ಟ್‌ ಇದೆ. ಅಲ್ಲದೆ ಮೊದಲಿನಿಂದಲೂ ಅವರ ಹಾಡುಗಳ ಬಗ್ಗೆ ನಂಗೆ ಇಂಟ್ರಸ್ಟ್‌. ಸದ್ಯ ಓ ಪಿಲ್ಲಾ ಹಾಡು ಸೂಪರ್‌ ಹಿಟ್‌ ಆಗ್ಲಿ ಅಂತ ಹೇಳಿದ್ರು.


ಡಿಎಸ್‌ಪಿ ಕುರಿತು ಮಾತನಾಡಿರುವ ಕಮಲ್ ಹಾಸನ್, ಡಿಎಸ್‌ಪಿ ಹಾಡುಗಳು ತುಂಬಾ ಸೂಪರ್‌ ಆಗಿ ಇರ್ತವೆ. ಅವರು ವಿಶಿಷ್ಟ ಸಾಧನೆಗಳ ಮೂಲಕ ಹಿಸ್ಟರಿ ಕ್ರಿಯೇಟ್‌ ಮಾಡಲು ಬಯಸುತ್ತಿರುತ್ತಾರೆ. ಎಲ್ಲ ಮ್ಯೂಸಿಕ್‌ ಡೈರೆಕ್ಟರ್‌ಗಳು ಈ ತರ ಎನಾದ್ರು ಒಂದು ಸಾಧನೆ ಮಾಡ್ಬೇಕು. ಪ್ರಯತ್ನಕ್ಕೆ ಫಲ ಇದ್ದೆ ಇರುತ್ತದೆ. ಓ ಪರಿಯ ಮೂಲಕ ಡಿಎಸ್‌ಪಿ ದೊಡ್ಡ ಯಶಸ್ಸು ಕಂಡಿದ್ದಾರೆ. ಅವರು ಇನ್ನಷ್ಟು ಎತ್ತರಕ್ಕೆ ಹೋಗಲಿ ಎನ್ನುವುದು ನನ್ನ ಆಸೆ. ಅವರಿಗೆ ಬೆನ್ನೆಲುಬಾಗಿ ನಿಂತಿರುವ ಭೂಷಣ್ ಕುಮಾರ್‌ ಸಹಕಾರ ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದರು.


ಇದನ್ನೂ ಓದಿ: ಮೀಸಲಾತಿ ಬಗ್ಗೆ ನಿರ್ಧರಿಸಿದ್ದೇವೆ, ಕ್ರೆಡಿಟ್ ತಗೋಳ್ತೇವೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್


ಕಮಲ್ ಹಾಸನ್ ಮತ್ತು ನಾಗಾರ್ಜುನ ಅವರ ಸಹಕಾರ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಡಿಎಸ್ಪಿ, ಅವರಿಬ್ಬರ ಪ್ರೋತ್ಸಾಹವಿಲ್ಲದೆ ಇಷ್ಟು ದೂರ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ಇಂಥದ್ದೊಂದು ಅಂತಾರಾಷ್ಟ್ರೀಯ ಮಟ್ಟದ ಹಾಡಿನ ಬಗ್ಗೆ ನಾನು ಮೊದಲು ಪ್ರಸ್ತಾಪ ಮಾಡಿದ್ದು ಕಮಲ್ ಹಾಸನ್ ಅವರ ಬಳಿ. ಅವರ ಪ್ರೋತ್ಸಾಹದ ಮಾತುಗಳು ನನ್ನನ್ನು ಈ ಹಾಡು ಸಂಯೋಜಿಸುವಂತೆ ಮಾಡಿತು. ಅವರ ಸಂಗೀತಾಸಕ್ತಿಯೇ ನಮ್ಮಿಬ್ಬರನ್ನೂ ಇಷ್ಟು ಹತ್ತಿರಕ್ಕೆ ಸೇರಿಸಿದ್ದು. ಅದೇ ಕಾರಣಕ್ಕೆ ಈ ಹಾಡನ್ನು ಅವರಿಂದಲೇ ಬಿಡುಗಡೆ ಮಾಡಿಸಲಾಯಿತು ಎಂದು ಹೇಳಿಕೊಂಡಿದ್ದಾರೆ. ‘ಓ ಪೆಣ್ಣೆ’ ಮತ್ತು ‘ಓ ಪಿಲ್ಲಾ’ ಹಾಡುಗಳು ಯೂಟ್ಯೂಬ್‌ ಟಿ-ಸೀರೀಸ್ ಚಾನಲ್‌ನಲ್ಲಿ ಲಭ್ಯವಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.