8 ಸಾವಿರ ರೂಪಾಯಿ ಬೆಲೆಯ ಅತ್ಯದ್ಬುತ ಸ್ಮಾರ್ಟ್ ಫೋನ್ ಬಿಡುಗಡೆ .!

Lava Yuva Pro Launched In India:ಲಾವಾ  ಯುವ ಪ್ರೊ   720 x 1600 ಪಿಕ್ಸೆಲ್‌ಗಳ HD+ ರೆಸಲ್ಯೂಶನ್ ಮತ್ತು 60 Hz ರಿಫ್ರೆಶ್ ರೇಟ್ ಅನ್ನು ಉತ್ಪಾದಿಸುವ 6.5-ಇಂಚಿನ IPS LCD ಪ್ಯಾನೆಲ್ ಅನ್ನು ಹೊಂದಿದೆ. ಇದು 3GB RAM ಜೊತೆಗೆ MediaTek ಚಿಪ್ ಅನ್ನು ಹೊಂದಿದೆ. 

Written by - Ranjitha R K | Last Updated : Oct 11, 2022, 01:43 PM IST
  • ಭಾರತದಲ್ಲಿ ಲಾವಾ ಯುವ ಪ್ರೊ ಹೊಸ ಫೋನ್ ಅನಾವರಣ
  • ಲಾವಾ ಯುವ ಪ್ರೊ ಸ್ಮಾರ್ಟ್ ಫೋನಿನ ವೈಶಿಷ್ಟ್ಯ ತಿಳಿಯಿರಿ
  • 8 ಸಾವಿರ ರೂಪಾಯಿ ಬೆಲೆಯ ಅತ್ಯದ್ಬುತ ಸ್ಮಾರ್ಟ್ ಫೋನ್
8 ಸಾವಿರ ರೂಪಾಯಿ ಬೆಲೆಯ ಅತ್ಯದ್ಬುತ ಸ್ಮಾರ್ಟ್ ಫೋನ್ ಬಿಡುಗಡೆ .! title=
Lava Yuva Pro Launched In India

Lava Yuva Pro Launched In India : ಲಾವಾ ಸದ್ದಿಲ್ಲದೆ ಭಾರತದಲ್ಲಿ ಲಾವಾ ಯುವ ಪ್ರೊ ಹೊಸ ಫೋನ್ ಅನಾವರಣಗೊಳಿಸಿದೆ. ಈ ಫೋನ್ 20:9 ಆಸ್ಪೆಕ್ಟ್ ರೇಶಿಯೋ 13-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾಗಳು, ದೊಡ್ಡ ಬ್ಯಾಟರಿ ಮತ್ತು ಹಿಂಭಾಗದಲ್ಲಿ ಆಕರ್ಷಕವಾದ ಮಿರರ್ ಫಿನಿಶ್ ಹೊಂದಿರುವ ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇಯನ್ನು ಹೊಂದಿದೆ. ಲಾವಾ ಯುವ ಪ್ರೊ ಸ್ಮಾರ್ಟ್ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಲಾವಾ ಯುವ ಪ್ರೊ ವಿಶೇಷತೆಗಳು :
ಲಾವಾ ಯುವ ಪ್ರೊ 720 x 1600 ಪಿಕ್ಸೆಲ್‌ಗಳ HD+ ರೆಸಲ್ಯೂಶನ್ ಮತ್ತು 60 Hz ರಿಫ್ರೆಶ್ ರೇಟ್ ಅನ್ನು ಉತ್ಪಾದಿಸುವ 6.5-ಇಂಚಿನ IPS LCD ಪ್ಯಾನೆಲ್ ಅನ್ನು ಹೊಂದಿದೆ. ಇದು 3GB RAM ಜೊತೆಗೆ MediaTek ಚಿಪ್ ಅನ್ನು ಹೊಂದಿದೆ. ಹ್ಯಾಂಡ್ಸೆಟ್ 32GB ಸ್ಟೋರೇಜ್ ಅನ್ನು ಹೊಂದಿದ್ದು, ಹೆಚ್ಚುವರಿ  ಸ್ಟೋರೇಜ್ ಗಾಗಿ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಕೂಡಾ ಹೊಂದಿದೆ. ಇದರಲ್ಲಿ Android 12 OS ಮೊದಲೇ ಇನ್ಸ್ಟಾಲ್ ಆಗಿರುತ್ತದೆ. ಇದು Android Go ಆವೃತ್ತಿಯಲ್ಲಿ ರನ್ ಆಗುತ್ತಿರುವಂತೆ ಕಂಡುಬಂದರೂ, ಲಾವಾ ಇಂಡಿಯಾ ವೆಬ್‌ಸೈಟ್‌ನಲ್ಲಿ ಅದರ ಬಗ್ಗೆ ಅಧಿಕೃತವಾಗಿ ಏನನ್ನೂ ಬಹಿರಂಗಪಡಿಸಿಲ್ಲ. 

ಇದನ್ನೂ ಓದಿ : ವಾಟ್ಸಾಪ್ನಲ್ಲಿ ವಿದ್ಯುತ್ ಬಿಲ್: ವಾಟ್ಸಾಪ್ನಲ್ಲಿ ಬರುವ ಇಂತಹ ಸಂದೇಶಗಳ ಬಗ್ಗೆ ಹುಷಾರ್!

ಲಾವಾ ಯುವ ಪ್ರೊ ಕ್ಯಾಮೆರಾ : 
ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಲಾವಾ  ಯುವ ಪ್ರೊ  8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದರ ಹಿಂಭಾಗದ ಪ್ಯಾನೆಲ್ 13-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು ಎರಡು ಆಕ್ಸಿಲೆರಿ ಕ್ಯಾಮೆರಾಗಳನ್ನು ಹೊಂದಿದೆ. ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಫೋನ್ ಇದಾಗಿದೆ. ಇದರ ಬೆಲೆ 8,000 ರೂ.ಗಿಂತ ಕಡಿಮೆ. ಹ್ಯಾಂಡ್‌ಸೆಟ್ ಫೇಸ್ ಅನ್‌ಲಾಕ್ ಅನ್ನು ಸಹ  ಸಪೋರ್ಟ್ ಮಾಡುತ್ತದೆ. 

ಲಾವಾ ಯುವ ಪ್ರೊ ಬ್ಯಾಟರಿ :
ಲಾವಾ  ಯುವ ಪ್ರೊ  5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಅದು USB-C ಮೂಲಕ 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಲಾವಾ ಪ್ರಕಾರ, ಸಂಪೂರ್ಣ ಚಾರ್ಜ್‌ನಲ್ಲಿ, ಇದು 37 ಗಂಟೆಗಳ 4G ಟಾಕ್‌ಟೈಮ್ ಮತ್ತು 320 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ. ಸಾಧನವು ಡ್ಯುಯಲ್ ಸಿಮ್, 4G VoLTE, Wi-Fi 802.11 AC, ಬ್ಲೂಟೂತ್ 5.0, GPS ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ನಂತಹ ಸಂಪರ್ಕ ಆಯ್ಕೆಗಳನ್ನು ನೀಡುತ್ತದೆ.

ಇದನ್ನೂ ಓದಿ :  YouTube Diwali Offer: ಈ ದೀಪಾವಳಿಯಲ್ಲಿ ಯೂಟ್ಯೂಬ್ ನೀಡುತ್ತಿದೆ ಬಂಪರ್ ಆಫರ್, ಕೇವಲ 10 ರೂ.ಗೆ ಸಿಗಲಿದೆ ಈ ಸೌಲಭ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News