Arindam Pramanik: ಕೆಲಸ ಸಿಗದೆ ಮೀನು ಮಾರಾಟ ಮಾಡುತ್ತಿರುವ ನಟ
Arindam Pramanik: ಸುಬರ್ನಾಟಾದಂತಹ ಪ್ರಸಿದ್ಧ ಬಂಗಾಳಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಪ್ರಸಿದ್ಧ ನಟ ಅರಿಂದಂ ಪ್ರಮಣಿಕ್ (Arindam Pramanik) ಕಳೆದ ಒಂದು ವರ್ಷದಿಂದ ಕೆಲಸ ಸಿಗದೇ ನಿರುದ್ಯೋಗಿಯಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರು ತಮ್ಮ ಕುಟುಂಬವನ್ನು ಪೋಷಿಸಲು ರಸ್ತೆಯಲ್ಲಿ ಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಕೋಲ್ಕತಾ: ಕರೋನಾ ಸಾಂಕ್ರಾಮಿಕ (Corona Pandemic) ದಿಂದಾಗಿ ದೇಶಾದ್ಯಂತ ಅನೇಕ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಸಿನಿ ರಂಗದ ತಾರೆಯರು, ಕಲಾವಿದರೂ ಕೂಡ ಇದಕ್ಕೆ ಹೊರತಾಗಿಲ್ಲ. ಪ್ರಸಿದ್ಧ ನಟ ಅರಿಂದಂ ಪ್ರಮಣಿಕ್ (Arindam Pramanik) ಕೂಡ ತಮ್ಮ ಕುಟುಂಬವನ್ನು ಪೋಷಿಸಲು ಮೀನು ಮಾರಾಟ ಮಾಡುತ್ತಿರುವುದು ಈ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ.
ಕರೋನಾದಿಂದಾಗಿ ಈ ಪರಿಸ್ಥಿತಿ ಸಂಭವಿಸಿದೆ:
'ನನ್ನ ತಂದೆ ಪೂರ್ವ ಬುರ್ದ್ವಾನ್ ಜಿಲ್ಲೆಯ ಮೇಮರಿಯಲ್ಲಿ ತರಕಾರಿಗಳನ್ನು ಮಾರುತ್ತಿದ್ದರು. ಆದರೆ ನಾನು ಯಾವಾಗಲೂ ಯಶಸ್ವಿ ನಟನಾಗಬೇಕೆಂದು ಕನಸು ಕಾಣುತ್ತಿದ್ದೆ. ನಾನು ಆ ವೃತ್ತಿಗೆ ಕಾಲಿಟ್ಟ ದಿನದಿಂದ ನನ್ನ ತಂದೆ ಆ ಕೆಲಸ ಮಾಡುವುದನ್ನು ನಿಲ್ಲಿಸಿದ್ದರು. ನಾನು ಎಲ್ಲರಿಗೂ ಉದಾಹರಣೆಯಾಗಿದ್ದೆ. ಆದರೆ ಇಂದು ಕರೋನಾದ ಕಾರಣ ನಟನೆಯಲ್ಲಿ ನನಗೆ ಕೆಲಸ ಸಿಗುತ್ತಿಲ್ಲ. ಹಾಗಾಗಿ ನನ್ನ ಕುಟುಂಬವನ್ನು ಪೋಷಿಸಲು ನಾನು ಮೀನು ಮಾರಾಟ ಮಾಡುತ್ತಿದ್ದೇನೆ ಎಂದು ಪ್ರಸಿದ್ಧ ಬಂಗಾಳಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಪ್ರಸಿದ್ಧ ನಟ ಅರಿಂದಂ ಪ್ರಮಣಿಕ್ (Arindam Pramanik) ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ- Rocking Star Yash: ಐಷಾರಾಮಿ ಬಂಗಲೆಗೆ ಎಂಟ್ರಿ ಕೊಟ್ಟ 'ರಾಕಿ ಭಾಯ್' ದಂಪತಿ
Actor Now Becomes Fish Seller) ಮಾಡುತ್ತಿದ್ದಾರೆ. ಮೆಮರಿ ನಿಲ್ದಾಣ ಮಾರುಕಟ್ಟೆಯಲ್ಲಿ ಅರಿಂದಮ್ ಮೀನು ಮಾರಾಟ ಮಾಡುತ್ತಿದ್ದಾರೆ. ರಸ್ತೆಬದಿಯಲ್ಲಿ ಕುಳಿತು ಮೀನುಗಳನ್ನು ಮಾರಾಟ ಮಾಡುವುದು ಅಷ್ಟು ಸುಲಭವಲ್ಲ, ಆದರೆ ಸದ್ಯದ ಸ್ಥಿತಿಯಲ್ಲಿ ಬೇರೆ ದಾರಿಯಿಲ್ಲ ಎಂದು ನಟ ತಮ್ಮ ಪರಿಸ್ಥಿತಿಯ ಬಗ್ಗೆ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ- ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರನ್ನು 'ಜಾತ್ಯತೀತ ನಾಯಿ' ಎಂದ ಕಂಗನಾ ರನೌತ್
'ಸುಬರ್ನಲತಾ' ಧಾರಾವಾಹಿಯಿಂದ ಖ್ಯಾತಿ ಪಡೆದಿರುವ ನಟ:
ಅರಿಂದಂ ಪ್ರಮಣಿಕ್ (Arindam Pramanik) 11 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ನಾಟಕಕಾರ ಮತ್ತು ನಿರ್ದೇಶಕ ಚಂದನ್ ಸೇನ್ ಅವರ ನಾಟಕ ತಂಡದೊಂದಿಗೆ ಅರಿಂದಂ ನಟನಾ ಜಗತ್ತಿಗೆ ಪದಾರ್ಪಣೆ ಮಾಡಿದರು. ಆದರೆ 2011 ರಲ್ಲಿ ಬಂಗಾಳಿ ಮೆಗಾ ಧಾರಾವಾಹಿ 'ಸುಬರ್ನಲತಾ' ಅವರಿಗೆ ವಿಶೇಷ ಗುರುತು ನೀಡಿತು. ಈ ಧಾರಾವಾಹಿಯಿಂದಾಗಿ ಅವರು ಎಲ್ಲರ ಹೃದಯವನ್ನು ಆಳಲು ಪ್ರಾರಂಭಿಸಿದರು. ಇದರ ನಂತರ, ಒಂದರ ನಂತರ ಒಂದರಂತೆ ಧಾರಾವಾಹಿಗಳಲ್ಲಿನ ಅಭಿನಯದಿಂದ ಅವರು ಮನೆ ಮಾತಾಗಿದ್ದರು. ಉದ್ಯಮವನ್ನು ತೊರೆಯುವ ಮೊದಲು ಅವರು ಸ್ಟಾರ್ ಜಲ್ಸಾದ ಮೆಗಾ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.