Rashmika Mandanna: ಮಾಸ್ಕ್ ಇಲ್ಲದೆ ಹೊರಬಂದ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್

Rashmika Mandanna Without Mask: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮಾಸ್ಕ್ ಧರಿಸದೇ  ಹೊರಬಂದಿದ್ದು ಈ ವಿಡಿಯೋ ತೀವ್ರವಾಗಿ ವೈರಲ್ ಆಗುತ್ತಿದೆ.

Written by - Yashaswini V | Last Updated : Jul 2, 2021, 09:10 AM IST
  • ಸಿನಿಮಾ ಜಗತ್ತಿನಲ್ಲಿ ರಶ್ಮಿಕಾ ಮಂದಣ್ಣ ಬಹಳ ಬೇಡಿಕೆಯ ನಟಿ
  • ಕೋವಿಡ್ -19 ಸಾಂಕ್ರಾಮಿಕದ ನಡುವೆಯೂ ಕೆಲಸದಲ್ಲಿ ಬ್ಯುಸಿ ಆಗಿರುವ ಕಿರಿಕ್ ಬೆಡಗಿ
  • ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
Rashmika Mandanna: ಮಾಸ್ಕ್ ಇಲ್ಲದೆ ಹೊರಬಂದ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್   title=
ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್

Rashmika Mandanna Without Mask: ಈ ದಿನಗಳಲ್ಲಿ ಸಿನಿಮಾ ಜಗತ್ತಿನಲ್ಲಿ ರಶ್ಮಿಕಾ ಮಂದಣ್ಣ ಬಹಳ ಬೇಡಿಕೆಯ ನಟಿಯಾಗಿದ್ದಾರೆ. ಅಂತೆಯೇ ರಶ್ಮಿಕಾ ಮಂದಣ್ಣ ಅವರ ಫೋಟೋಗಳು ಮತ್ತು ವೀಡಿಯೊಗಳು ಬಂದ ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ಅವು ಬೇಗ ವೈರಲ್ ಆಗುತ್ತವೆ. 

ಕೋವಿಡ್ -19 (Covid 19) ಸಾಂಕ್ರಾಮಿಕ ರೋಗದ ನಡುವೆಯೂ ರಶ್ಮಿಕಾ ಮಂದಣ್ಣ (Rashmika Mandanna) ನಿರಂತರವಾಗಿ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ, ಮುಂಬೈನಲ್ಲಿ ರಶ್ಮಿಕಾ ಕಾರಿನಿಂದ ಇಳಿಯುವ ದೃಶ್ಯ ಸೆರೆಹಿಡಿಯಲಾಗಿದೆ. ಇದರಲ್ಲಿ ಕಿರಿಕ್ ಬೆಡಗಿ ಮಾಸ್ಕ್ ಇಲ್ಲದೆ ಕಾರಿನಿಂದ ಕೆಳಗಿಳಿದು ಬರುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ - Rashmika Mandanna: 'ನ್ಯಾಷನಲ್ ಕ್ರಷ್' ರಶ್ಮಿಕಾ ಮಂದಣ್ಣ ಅವರ ಬ್ಲಾಕ್ ಅಂಡ್ ವೈಟ್ ಫೋಟೋಸ್ ವೈರಲ್

ವಾಸ್ತವವಾಗಿ, ನಟಿ ರಶ್ಮಿಕಾ ಮಂದಣ್ಣ (Rashmika Mandanna) ತನ್ನ ಕಾರಿನಿಂದ ಇಳಿಯುವ ವೇಳೆ ಮಾಸ್ಕ್ (Mask) ಧರಿಸಲು ಮರೆತಿದ್ದರು. ಆ ಸಮಯದಲ್ಲಿ ಜನರು ನಟಿಯ ಚಿತ್ರಗಳು ಮತ್ತು ವೀಡಿಯೊಗಳನ್ನು ಕ್ಲಿಕ್ ಮಾಡುತ್ತಿದ್ದರು. ಇದನ್ನು ಗಮನಿಸಿದ ನಟಿ ಕೂಡಲೇ ತನ್ನ ಕೈಗಳಿಂದ ಮುಖವನ್ನು ಮುಚ್ಚಿ ಬಳಿಕ ಕಾರಿನಿಂದ ಮಾಸ್ಕ್ ತೆಗೆದು ಹಾಕಿಕೊಂಡಿದ್ದಾರೆ.

ಇದನ್ನೂ ಓದಿ -  Rashmika Mandana ಅವರ ನೆಚ್ಚಿನ ಐಪಿಎಲ್ ತಂಡ ಯಾವುದು ಗೊತ್ತೇ?

ರಶ್ಮಿಕಾ ಮಂದಣ್ಣ ಅವರ ಈ ವಿಡಿಯೋವನ್ನು ವೈರಲ್ ಭಯಾನಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News