ಸಿನಿರಂಗಕ್ಕೆ ಮತ್ತಿಬ್ಬರು ಸ್ಟಾರ್ ಪುತ್ರಿಯರ ಆಗಮನ..ಯಾರವರು ಅಂತೀರಾ?
Duniya Vijay Daughters: ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ನಟ ಹಾಗೂ ನಿರ್ದೇಶಕನಾಗಿ ಸೈ ಎನಿಸಿಕೊಂಡಿರುವ ದುನಿಯಾ ವಿಜಯ್ ಇದೀಗ ತಮ್ಮ ಇಬ್ಬರು ಪುತ್ರಿಯರನ್ನು ಸಿನಿದುನಿಯಾಗೆ ಪರಿಚಯಿಸುತ್ತಿದ್ದಾರೆ.
Sandalwood News: ದುನಿಯಾ ವಿಜಯ್ ಅಭಿಮಾನಿಗಳು ಸದ್ಯ ಭೀಮಾ ಸಿನಿಮಾ ಎದುರು ನೋಡುತ್ತಿದ್ದಾರೆ. ಇದೇ ಸಮಯದಲ್ಲಿ ಸ್ಯಾಂಡಲ್‌ವುಡ್ ಸಲಗ ಫ್ಯಾನ್ಸ್‌ಗೆ ಸಿಹಿಸುದ್ದಿಯೊಂದನ್ನು ಕೊಟ್ಟಿದ್ದಾರೆ.
ಇತ್ತೀಚಿಗೆ ದುನಿಯಾ ವಿಜಯ್ ಅವರ ಇಬ್ಬರು ಹೆಣ್ಣುಮಕ್ಕಳ ಕುರಿತಾಗಿ ಸಾಕಷ್ಟು ಸುದ್ದಿಗಳು ಸೋಷಿಯಲ್ ಮಿಡಿಯಾದ ತುಂಬೆಲ್ಲಾ ಹರಿದಾಡುತ್ತಿದ್ದು, ಅವರು ತಮ್ಮ ಇಬ್ಬರು ಪುತ್ರಿಯರನ್ನು ಸಿನಿರಂಗಕ್ಕೆ ಪರಿಚಯಿಸುತ್ತಿದ್ದಾರೆ ಎನ್ನಲಾಗಿತ್ತು. ಅದು ಈಗ ನಿಜವಾಗಿದೆ. ಇದನ್ನ ಸ್ವತಃ ವಿಜಯ್ ಅನೌನ್ಸ್ ಮಾಡಿದ್ದಾರೆ.
ಇದನ್ನೂ ಓದಿ-Nayanathara: 'ಜವಾನ್' ಸಕ್ಸಸ್ ಬಳಿಕ ಪ್ರಭಾಸ್ ಸಿನಿಮಾದಲ್ಲಿ ಲೇಡಿ ಸೂಪರ್ ಸ್ಟಾರ್
ದುನಿಯಾ ವಿಜಯ್ ಪುತ್ರಿಯರು ಸಿನಿರಂಗ ಪ್ರವೇಶಿಸುವುದು ಕನ್ಫರ್ಮ ಆಗಿದೆ. ಆದರೆ ಎಲ್ಲರ ಗೆಸ್‌ನಂತೆ ಕಿರಿ ಮಗಳು ಮೊನಿಷಾ ಅಲ್ಲ. ಬದಲಿಗೆ ಹಿರಿ ಮಗಳು ಮೊನಿಕಾ ಸಿನಿರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಮೊನಿಕಾ ವಿಜಯ್ ಅವರು ತಮ್ಮ ಎಜುಕೇಷನ್, ಜೊತೆಗೆ ಮುಂಬೈನಲ್ಲಿ ಆ್ಯಕ್ಟಿಂಗ್ ಕೋರ್ಸ್ ಸಹ ಮುಗಿಸಿದ್ದಾರೆ. ಸದ್ಯ ಮೊನಿಕಾ ಬೆಂಗಳೂರಿನಲ್ಲಿ ಕಲಾತಂಡವೊಂದರ ಜೊತೆ ಕೆಲಸ ಮಾಡುತ್ತಿದ್ದಾರೆ.
ಇದೀಗ ದುನಿಯಾ ವಿಜಯ್ ಅವರ ಹಿರಿ ಮಗಳು ಮೊನಿಕಾ ಸಿನಿರಂಗಕ್ಕೆ ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ಘೋಷಣೆಯಾಗಲಿದೆ ಎನ್ನಲಾಗುತ್ತಿದೆ. ಆದರೆ ಕಿರಿ ಮಗಳು ಇನ್ನೂ ತಮ್ಮ ಶೈಕ್ಷಣಿಕ ಜೀವನದಲ್ಲಿ ಬ್ಯುಸಿಯಾಗಿದ್ದು ಸದ್ಯ ಅವರು ವಿದೇಶದಲ್ಲಿರುವುದರಿಂದ ಅಲ್ಲಿಂದ ರಿಟರ್ನ್ ಬಂದ ಮೇಲೆ ಮೊನಿಷಾ ಚಂದನವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ-ಮೇಘಾ ಅಮೋಘ ಸೌಂದರ್ಯಕ್ಕೆ ಪಡ್ಡೆ ಹೈಕ್ಳು ಫಿದಾ..! ಇಲ್ಲಿವೆ ಫೋಟೋಸ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.