Salaar Vs Dunki: ಸ್ಯಾಂಡಲ್‌ವುಡ್‌  ನಟ ಯಶ್‌ ಅಭಿನಯದ 'ಕೆಜಿಎಫ್ ಚಾಪ್ಟರ್ 1' ರಿಲೀಸ್ ಟೈಮ್‌ನಲ್ಲಿ ಶಾರುಖ್ ಖಾನ್ ನಟಿಸಿರುವ ಝೀರೋ ಚಿತ್ರದ ಎದುರು ಬಿಡುಗಡೆ ಮಾಡಿದ್ದರು. ಇದೀಗ ಕಿಂಗ್ ಖಾನ್ 'ಡಂಕಿ' ಎದುರು 'ಸಲಾರ್' ರಿಲೀಸ್ ಮಾಡುವುದಕ್ಕೆ ಹೊರಟಿದ್ದಾರೆ. ಬಹುತೇಕ ಪ್ರೇಮಿಗಳಲ್ಲೂ ಪ್ರಶ್ನೆ ಕಾಡುತ್ತಿದ್ದು, 'ಸಲಾರ್' ರಿಲೀಸ್ ಡೇಟ್ ಅನೌನ್ಸ್ ಮಾಡಿದಾಗ, ಉದ್ದೇಶಪೂರ್ವಕವಾಗಿಯೇ 'ಡಂಕಿ' ತಮ್ಮ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಎರಡನೇ ಬಾರಿ ಮುಖಾ-ಮುಖಿ ಆಗುತ್ತಿರುವ ಬಗ್ಗೆ ಒಂದಿಷ್ಟು ಊಹಾ ಪೋಹಗಳು ಎದ್ದಿದ್ದವು. ಕೊನೆಗೂ ಈ ಬಗ್ಗೆ ವಿನಯ್ ಕಿರಗಂದೂರು ಮೌನ ಮುರಿದಿದ್ದಾರೆ. 


COMMERCIAL BREAK
SCROLL TO CONTINUE READING

ಸಂದರ್ಶನವೊಂದರಲ್ಲಿ ನಿಮಾಪಕ ವಿಜಯ್‌ ಕಿರಗಂದೂರೂ, 'ಡಂಕಿ' ಎದುರು 'ಸಲಾರ್' ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದು ಯಾಕೆ ಅನ್ನುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಎದುರೇ 'ಸಲಾರ್' ರಿಲೀಸ್ ಮಾಡಬೇಕು ಅನ್ನೋ ಹಠವೇನು ಇರದೆ, ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಮಾಡುವುದಕ್ಕೆ ಕಾರಣ ಬೇರೆನೇ ಇದೆ , "ನಮ್ಮ ನಂಬಿಕೆಯ ಆಧಾರದ ಮೇಲೆ ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಾಗಿದೆ. ನಾನು ನಮ್ಮ ನಂಬಿಕೆಯ ಆಧಾರದ ಮೇಲೆ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡುತ್ತೇವೆ. 10-12 ವರ್ಷಗಳಿಂದ ಇದನ್ನೇ ಮಾಡಿಕೊಂಡು ಬಂದಿದ್ದೇವೆ. ಮುಂದೇನೂ ಇದನ್ನೇ ಮಾಡುತ್ತೇವೆ." ಎಂದು  ಹೇಳಿದ್ದಾರೆ.


ಇದನ್ನೂ ಓದಿ: ʼಸಲಾರ್‌ʼ ಎದುರು ಗೆಲ್ಲಲು ʼವೈಷ್ಣೋದೇವಿʼ ಮೊರೆ ಹೋದ್ರಾ ಕಿಂಗ್‌ ಖಾನ್‌ ಶಾರುಖ್‌..!


ಇದೇ ಸಂದರ್ಶನದಲ್ಲಿ ವಿಜಯ್‌ ಕಿರಗಂದೂರು ತಮಗೆ ವಿವಾದ ಇಷ್ಟವಿಲ್ಲ. ಈಗಾಗಲೇ ಈ ಸಂಬಂಧ ವಿತರಕರು ಹಾಗೂ ಪ್ರದರ್ಶಕರ ನಡುವೆ ಮಾತುಕತೆಯನ್ನು ನಡೆಸಿದ್ದಾಗಿ ಹೇಳಿಕೊಂಡು, ಸೋಲೊ ರಿಲೀಸ್ ಆದರೆ ಏನಾಗುತ್ತೆಂದು ವಿವರಿಸುತ್ತಾ, "ಸಲಾರ್ ಮತ್ತು ಡಂಕಿಗೆ ಸ್ಕ್ರೀನ್ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ಪರಿಸ್ಥಿತಿಯಲ್ಲಿ 50-50 ಸಿಗುವ ಸಾಧ್ಯತೆಯಿದೆ. ಇದರಲ್ಲಿ ಶೇ. 90 ರಿಂದ 100ರಷ್ಟು ಸಾಧನೆ ಮಾಡಬಹುದು. ಇದು ಎರಡೂ ಸಿನಿಮಾಗಳಿಗೂ ಉತ್ತಮ. ನಮಗೆ ಹೆಚ್ಚು ಸ್ಕ್ರೀನ್‌ಗಳು ಸಿಕ್ಕರೂ ಶೇ. 60 ರಿಂದ 70ರಷ್ಟು ಥಿಯೇಟರ್‌ಗಳು ತುಂಬುತ್ತವೆ" ಎಂದು ಸಲಾರ್ ರಿಲೀಸ್ ವಿಚಾರಕ್ಕೆ ತಮ್ಮ ಲೆಕ್ಕಾಚಾರವನ್ನು ಹೊರ ಹಾಕಿದ್ದಾರೆ. 


ವಿಜಯ್ ಕಿರಗಂದೂರು, ಸಲಾರ್‌ ವಿಎಫ್‌ಎಕ್ಸ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ವಿಳಂಬ ಆಗಿದ್ದು, ಇದರೊಂದಿಗೆ ಸೆಪ್ಟೆಂಬರ್‌ನಿಂದ ಮಾರ್ಚ್ (2024)ವರೆಗೂ ಸೂಕ್ತ ರಿಲೀಸ್ ಡೇಟ್ ಅನ್ನು ಹುಡುಕಾಡಿದ್ದರು. ಸಂಕ್ರಾಂತಿಯಲ್ಲಿ ತೆಲುಗು, ತಮಿಳು ಸಿನಿಮಾಗಳ ಹೆಚ್ಚು ರಿಲೀಸ್ ಆಗುವುದರಿಂದ ಆ ಡೇಟ್ ಅನ್ನು ಕೈ ಬಿಡಲಾಗಿತ್ತು ಎಂದಿದ್ದಾರೆ. ಡಿಸೆಂಬರ್ 22ಕ್ಕೆ ಯಾಕೆ ಅಂದರೆ, ಕ್ರಿಸ್‌ಮಸ್ ಹೊಸ ವರ್ಷ ಅಂತ ಹೆಚ್ಚು ಕಡಿಮೆ 10 ದಿನ ರಜೆ ಸಿಗುತ್ತೆ. ಈ ಸಮಯದಲ್ಲಿ ಪ್ರೇಕ್ಷಕರು ಥಿಯೇಟರ್‌ಗೆ ಬಂದು 'ಸಲಾರ್' ಸಿನಿಮಾವನ್ನು ನೋಡುತ್ತಾರೆ ಅಂತ ಅನ್ನೋ ಲೆಕ್ಕಾಚಾರ ಹಾಕಿ ಈ 'ಸಲಾರ್' ರಿಲೀಸ್‌ಗೆ ಮುಂದಾಗಿರೋದಾಗಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.