ಅಬ್ಬರ.. ಟೈಟಲ್ಲೇ ತುಂಬಾ ಕ್ಯಾಚಿ ಅನಿಸುತ್ತೆ. ಫೈನಲಿ ತೆರೆಮೇಲೆ ಟೈಟಲ್ ನಂತೆ ಸಿನಿಮಾ ಕೂಡ ಅಬ್ಬರಿಸಿ ಬೊಬ್ಬಿರಿದಿದೆ. ಪ್ರಜ್ವಲ್ ದೇವರಾಜ್ ನಟನೆಯ ಚಿತ್ರಗಳನ್ನ ನೋಡೋದೇ ಭರ್ಜರಿ ಥ್ರಿಲ್ ಬಿಡಿ. ಯಾಕಂದ್ರೆ ಹಾರ್ಟ್ ಗೆ ಟಚ್ ಆಗುವಂತಹ ಅದ್ಭುತ ಸ್ಟೋರಿಯನ್ನೇ ಇವ್ರು ಆಯ್ಕೆ ಮಾಡಿಕೊಳ್ಳೋದು. ಅಂತೆಯೇ ಅಬ್ಬರ ಸಿನಿಮಾ ಕೂಡ ಒಂದೊಳ್ಳೆ ಮನರಂಜನೆ ಕೊಡೋ ಸಿನಿಮಾ. ಹೊಟ್ಟೆ ಹುಣ್ಣಾಗಿಸುವಷ್ಟು ನಿಮ್ಮನ್ನ ನಗಿಸುತ್ತೆ. ಅಳಿಸುವಂತಹ ಸೆಂಟಿಮೆಂಟ್ ಸೀನ್ ಕೂಡ ನಿಮ್ಮನ್ನ 'ಅಬ್ಬರ'ದಲ್ಲಿ ಹೆಚ್ಚಾಗಿ ಕಾಡುತ್ತೆ.


COMMERCIAL BREAK
SCROLL TO CONTINUE READING

ಪ್ರಜ್ವಲ್ ದೇವರಾಜ್ ಅವರ ಅಬ್ಬರ ಸಿನಿಮಾ ಬಗ್ಗೆ  ಹೆಚ್ಚು ಟಾಕ್ ಇತ್ತು. ಪ್ಯಾಂಡಮಿಕ್ ಅವಧಿಯಲ್ಲೇ ಪೂರ್ಣಗೊಂಡಿದ್ದ, ರಾಮ್ ನಾರಾಯಣ್ ಅವರ ನಿರ್ದೇಶನದ ಅಬ್ಬರ ಸಿನಿಮಾ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಇಷ್ಟವಾಗುವ ರೀತಿಯಲ್ಲೇ ಇದೆ. 


ಇದನ್ನೂ ಓದಿ- MS Dhoni: ನಿರ್ಮಾಣದ ಜೊತೆಗೆ ನಟನೆಗೂ ಧೋನಿ ಎಂಟ್ರಿ! ದಳಪತಿ ವಿಜಯ್ ಚಿತ್ರದಲ್ಲಿ ಕೂಲ್ ಕ್ಯಾಪ್ಟನ್!


ನೀವು ಕೊಡೋ ಕಾಸಿಗೆ ಮಾತ್ರ ಪಕ್ಕಾ ಲಾಸ್ ಇಲ್ಲ. ಪ್ರಜ್ವಲ್ ಅವ್ರ ಪಂಚಿಂಗ್ ಡೈಲಾಗ್, ಮೂವರು ನಾಯಕಿಯರೊಂದಿಗೆ ಡ್ಯೂಯಟ್ ಎಲ್ಲಾವೂ ನಿಮಗೆ ಮಜಾ ಅನಿಸುತ್ತೆ. ಜೊತೆ ಫೈಟಿಂಗ್ ಮಾತ್ರ ಪಕ್ಕಾ ಮಾಸ್ ಆಗಿದೆ. ಅಬ್ಬರ ಸಿನಿಮಾದಲ್ಲಿ ಎಲ್ಲವೂ ಇದೆ. ಸೋ ನೀವು ಥೀಯೇಟರ್ ಫ್ಯಾಮಿಲಿ ಜೊತೆ ಬಂದು ಸಿನಿಮಾ ನೋಡಿ ಹೊರಗೆ ಹೋಗುವಾಗ ಖುಷ್ ಖುಷಿಯಾಗಿ ಹೋಗಬೋದು.


ಇದನ್ನೂ ಓದಿ- ನಟನೆಯಿಂದ ಸ್ವಲ್ಪ ವಿರಾಮ ಬೇಕು : ಸೌಥ್‌ ಸಿನಿಮಾಗಳ ಅಬ್ಬರಕ್ಕೆ ಹೆದರಿದ್ರಾ ಅಮಿರ್‌ ಖಾನ್‌..!


ಅಬ್ಬರ ಸೇಡಿನ ಕಥೆಯಾಗಿದ್ದು, ಅದಕ್ಕೆ ಹಾಸ್ಯದ ಮತ್ತೊಂದು ಮುಖವೂ ಇದೆ. ಕಥೆಯಲ್ಲಿ ಸಾಹಸಮಯ ದೃಶ್ಯಗಳಿದ್ದು, ರವಿಶಂಕರ್, ಶೋಭ್ ರಾಜ್ ಅವರಂತಹ ವಿಲ್ಲನ್ ಪಾತ್ರಧಾರಿಗಳಿದ್ದರೂ ಅವರನ್ನು ನಕಾರಾತ್ಮಕ ಪಾತ್ರಗಳಲ್ಲಿ ತೋರಿಸಿಲ್ಲ. ಗೋವಿಂದ ಗೌಡ ಹಾಗೂ ವಿಜಯ್ ಚೆಂಡೂರ್ ಅವರ ಹಾಸ್ಯ ಮಜಾವೆನಿಸುತ್ತೆ. ಪ್ರಜ್ವಲ್ ದೇವರಾಜ್ ಅವರು ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಹಲವು ತಿರುವುಗಳು ಈ ಚಿತ್ರದಲ್ಲಿದೆ. ರಾಜ್ ಶ್ರೀ ಪೊನ್ನಪ್ಪ, ಲೇಖಾ ಚಂದ್ರ ಹಾಗೂ ನಿಮಿಕಾ ರತ್ನಾಕರ್ ಪ್ರಜ್ವಲ್ ಗೆ ಜೋಡಿ ಭರ್ಜರಿಯಾಗಿ ನಟಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.