ನಟನೆಯಿಂದ ಸ್ವಲ್ಪ ವಿರಾಮ ಬೇಕು : ಸೌಥ್‌ ಸಿನಿಮಾಗಳ ಅಬ್ಬರಕ್ಕೆ ಹೆದರಿದ್ರಾ ಅಮಿರ್‌ ಖಾನ್‌..!

ಇತ್ತೀಚೆಗೆ ಮಾಧ್ಯಮ ಸಂವಾದದ ವೇಳೆ ಅಮೀರ್ ಖಾನ್ ಅವರು ತಮ್ಮ ಮುಂಬರುವ ಪ್ರಾಜೆಕ್ಟ್ - ಚಾಂಪಿಯನ್ಸ್ ಎಂಬ ಚಲನಚಿತ್ರವನ್ನು ನಿರ್ಮಿಸುತ್ತಿರುವ ಬಗ್ಗೆ ಹೇಳಿದ್ದರು. ಅದರಲ್ಲಿ ಅವರೇ ನಟಿಸಬೇಕಾಗಿತ್ತು. ಆದರೆ, ಈಗ ಅವರು ಬರೀ ಸಿನಿಮಾ ನಿರ್ಮಾಣ ಮಾಡಲಿದ್ದು, ನಟನೆಯಿಂದ ಸ್ವಲ್ಪ ಕಾಲ ವಿರಾಮ ತೆಗೆದುಕೊಳ್ಳಲು ಬಯಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Written by - Krishna N K | Last Updated : Nov 15, 2022, 10:17 AM IST
  • ನಟನೆಯಿಂದ ಸ್ವಲ್ಪ ವಿರಾಮ ಬೇಕು ಎಂದ ಅಮೀರ್‌ ಖಾನ್‌
  • ಸಿನಿಮಾ ನಿರ್ಮಾಣಕ್ಕೆ ಮುಂದಾ ಮಿಸ್ಟರ್ ಪರ್ಫೆಕ್ಟ್
  • ಚಾಂಪಿಯನ್ಸ್ ಸಿನಿಮಾ ಕುರಿತು ಅಮಿರ್‌ ಖಾನ್‌ ಹೇಳಿಕೆ
ನಟನೆಯಿಂದ ಸ್ವಲ್ಪ ವಿರಾಮ ಬೇಕು : ಸೌಥ್‌ ಸಿನಿಮಾಗಳ ಅಬ್ಬರಕ್ಕೆ ಹೆದರಿದ್ರಾ ಅಮಿರ್‌ ಖಾನ್‌..! title=

ಹೊಸದಿಲ್ಲಿ : ಇತ್ತೀಚೆಗೆ ಮಾಧ್ಯಮ ಸಂವಾದದ ವೇಳೆ ಅಮೀರ್ ಖಾನ್ ಅವರು ತಮ್ಮ ಮುಂಬರುವ ಪ್ರಾಜೆಕ್ಟ್ - ಚಾಂಪಿಯನ್ಸ್ ಎಂಬ ಚಲನಚಿತ್ರವನ್ನು ನಿರ್ಮಿಸುತ್ತಿರುವ ಬಗ್ಗೆ ಹೇಳಿದ್ದರು. ಅದರಲ್ಲಿ ಅವರೇ ನಟಿಸಬೇಕಾಗಿತ್ತು. ಆದರೆ, ಈಗ ಅವರು ಬರೀ ಸಿನಿಮಾ ನಿರ್ಮಾಣ ಮಾಡಲಿದ್ದು, ನಟನೆಯಿಂದ ಸ್ವಲ್ಪ ಕಾಲ ವಿರಾಮ ತೆಗೆದುಕೊಳ್ಳಲು ಬಯಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಎಎನ್‌ಐ ಜೊತೆ ಮಾತನಾಡಿರುವ ಅಮೀರ್‌ ಖಾನ್‌, ನಾನು ನಟನಾಗಿ ಚಿತ್ರ ಮಾಡುವಾಗ, ನನ್ನ ಜೀವನದಲ್ಲಿ ಬೇರೆಲ್ಲ ಕಳೆದುಕೊಂಡಿದ್ದೇನೆ. ಲಾಲ್ ಸಿಂಗ್ ಚಡ್ಡಾ ನಂತರ ನಾನು ಚಾಂಪಿಯನ್ಸ್ ಎಂಬ ಚಲನಚಿತ್ರವನ್ನು ಮಾಡಬೇಕಾಗಿತ್ತು. ಇದು ಅದ್ಭುತವಾದ ಚಿತ್ರಕಥೆ, ಸುಂದರವಾದ ಕಥೆ, ಮತ್ತು ಹೃದಯಸ್ಪರ್ಶಿ ಸಿನಿಮಾ. ಆದರೆ ನಾನು ನಟನೆಯಿಂದ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ, ನನ್ನ ಕುಟುಂಬ, ತಾಯಿ, ನನ್ನ ಮಕ್ಕಳೊಂದಿಗೆ ಇರಲು ಬಯಸುತ್ತೇನೆ ಎಂದು ನಟ ಹೇಳಿದ್ದಾರೆ.

ಇದನ್ನೂ ಓದಿ: ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ವಿಧಿವಶ

35 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ನಟನೆಯಿಂದ ವಿರಾಮ ತೆಗೆದುಕೊಳ್ಳುತ್ತಿರುವುದು ಇದೇ ಮೊದಲು. ನಾನು 35 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಮೇಲೆ ಅಷ್ಟೇ ಗಮನಹರಿಸಿದ್ದು, ನನ್ನ ಹತ್ತಿರವಿರುವ ಜನರನ್ನೂ ದೂರವಾಗಿಸಿದ್ದೇನೆ. ನಾನು ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು ಎಂದು ಭಾವಿಸುತ್ತೇನೆ. ಬಿಡುವಿನ ಸಮಯ ನನ್ನ ಪ್ರೀತಿ ಪಾತ್ರರೊಂದಿಗೆ ನಿಜವಾದ ಜೀವನವನ್ನು ವಿಭಿನ್ನ ರೀತಿಯಲ್ಲಿ ಅನುಭವಿಸುತ್ತೇನೆ. ಮುಂದಿನ ವರ್ಷ ಇಲ್ಲವೆ ಒಂದೂವರೆ ವರ್ಷದ ನಂತರ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅಮೀರ್ ಖಾನ್ ಅವರ ಕೊನೆಯ ಬಿಡುಗಡೆಯಾದ ಲಾಲ್ ಸಿಂಗ್ ಚಡ್ಡಾ ಬಹಿಷ್ಕಾರಕ್ಕೆ ಪ್ರವೃತ್ತಿಗೆ ಗುರಿಯಾಗಿ ಸೋಲು ಅನುಭವಿಸಿತು. ಅಮೀರ್ ಖಾನ್ ಅವರ 2015 ರ ಸಂದರ್ಶನದ ದೃಶ್ಯಗಳನ್ನು ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿ ಚಲನಚಿತ್ರದ ವಿರುದ್ಧ ಬಹಿಷ್ಕಾರದ ಪ್ರವೃತ್ತಿ ಬೆಳೆಯುವಂತೆ ಮಾಡಲಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಚಡ್ಡಾ ಕಲೆಕ್ಷನ್ ಮಾಡಲು ವಿಫಲವಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News