Gandii Baat Web Series : ಆಲ್ಟ್ ಬಾಲಾಜಿಯವರ ವೆಬ್ ಸೀರೀಸ್ 'ಗಂಧೀಬಾತ್ ಸೀಸನ್‌ 6 ರ ಹೊಸ ಟ್ರೈಲರ್ ಬಿಡುಗಡೆಯಾಗಿದೆ. ಇದಾದ ನಂತರ ಪೋಸ್ಟರ್ ಬಗ್ಗೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿವೆ. ಏಕ್ತಾ ಕಪೂರ್ ಅವರ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ವೆಬ್ ಸೀರೀಸ್ ಪ್ರತಿ ಸೀಸನ್ ನಲ್ಲೂ ಬೋಲ್ಡ್ ಸೀನ್ ಗಳಿಂದ ಮುಖ್ಯಾಂಶಗಳಲ್ಲಿತ್ತು. ಈ ಬಾರಿಯೂ ಸರಣಿಯಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳಿವೆ.


COMMERCIAL BREAK
SCROLL TO CONTINUE READING

ಲಕ್ಷ್ಮಿ ದೇವಿಗೆ ಅವಮಾನ ಮಾಡಿದ ಆರೋಪ


'ಗಂಧೀಬಾತ್' ಸೀಸನ್ 6 ರ ಪೋಸ್ಟರ್ ಬಿಡುಗಡೆಯಾದ ತಕ್ಷಣ, ಅದು ವಿವಾದಕ್ಕೆ ಸಿಲುಕಿತು. ಏಕ್ತಾ ಕಪೂರ್ ಮತ್ತು ಅವರ ಪ್ರೊಡಕ್ಷನ್ ಹೌಸ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಪೋಸ್ಟರ್‌ನ ಥಂಬ್‌ನೇಲ್ ಅನ್ನು ಜನರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಈ ಸರಣಿಯ ಟ್ರೈಲರ್ ನಲ್ಲಿ ಹಿಂದೂ ದೇವತೆ ಲಕ್ಷ್ಮಿಯನ್ನು ಅವಮಾನಿಸುವಂತಿದೆ ಎಂದು ಹಲವರು ಆರೋಪಿಸಿದ್ದಾರೆ. ಅಲ್ಲದೇ ಏಕ್ತಾ ಕಪೂರ್ ಅವರನ್ನು ಬ್ಯಾನ್ ಮಾಡುವಂತೆ ಹಲವರು ಟ್ವಿಟ್ಟರ್ ನಲ್ಲಿ ಒತ್ತಾಯಿಸುತ್ತಿದ್ದಾರೆ.


ಇದನ್ನೂ ಓದಿ: ಅಂದು ತೆರೆಮರೆಯ ಕಲಾವಿದರಾಗಿ 50 ರೂ.‌ ಗೆ ದುಡಿದ ಯಶ್.. ಇಂದು ರಾಕಿಂಗ್‌ ಸ್ಟಾರ್‌.!


ಥಂಬ್‌ನೇಲ್‌ನಲ್ಲಿ ಏನಿದೆ?


ಪೋಸ್ಟರ್‌ನ ಥಂಬ್‌ನೇಲ್‌ನಲ್ಲಿ ಕೆಂಪು ಸೀರೆಯನ್ನು ಧರಿಸಿರುವ ಮುಸುಕುಧಾರಿ ಮಹಿಳೆ ಮೌನದ ಸನ್ನೆ ಮಾಡುತ್ತಿರುವುದು ಕಂಡುಬರುತ್ತದೆ. ಚಿತ್ರದಲ್ಲಿ ಅವಳು ಕಮಲದಿಂದ ಹೊರಹೊಮ್ಮುತ್ತಿರುವುದನ್ನು ತೋರಿಸಲಾಗಿದೆ. ಸುತ್ತಲೂ ನವಿಲುಗಳಿವೆ. ಈ ಚಿತ್ರವನ್ನು ಜನರು ಲಕ್ಷ್ಮಿ ದೇವಿಗೆ ಮಾಡಿದ ಅವಮಾನ ಎಂದು ಕರೆಯುತ್ತಿದ್ದಾರೆ. ಲಕ್ಷ್ಮಿ ದೇವಿಯು ಸಹ ಹೂವಿನ ಮೇಲೆ ಕುಳಿತಿರುತ್ತಾಳೆ. 


ಟ್ವಿಟರ್‌ನಲ್ಲಿ ಹೆಚ್ಚಿದ ಆಕ್ರೋಶ 


ಶಬೋಲ್ಡ್‌ ಲುಕ್‌ನಲ್ಲಿರುವ ಮಹಿಳೆ, ಅವಳ ಸೊಂಟದ ಬಳಿ ಕಮಲ ಮತ್ತು ಅವಳ ಅಕ್ಕಪಕ್ಕ ಎರಡು ನವಿಲುಗಳಿರುವ ಈ ಫೋಟೋವನ್ನು ಟ್ವಿಟರ್‌ ಬಳಕೆದಾರರು ಕಟುವಾಗಿ ಟೀಕಿಸುತ್ತಿದ್ದಾರೆ. ಇದು ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ದೇವಿಯನ್ನು ಹೋಲುತ್ತದೆ ಎಂದು ನೆಟಿಜನ್‌ಗಳ ಒಂದು ವಿಭಾಗ ಹೇಳಿದೆ. ಅನೇಕ ಜನರು ಟ್ವಿಟರ್‌ನಲ್ಲಿ ಥಂಬ್‌ನೇಲ್ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. 


 


ಡಬ್ಬಿಂಗ್‌ ಮುಗಿಸಿ ʼಲವ್ ಮೀ ಆರ್ ಹೇಟ್ ಮೀʼ ಅಂತ ತೆರೆಗೆ ಬರಲು ರೆಡಿಯಾದ ಕೃಷ್ಣ-ರಚ್ಚು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.