Yash: ಅಂದು ತೆರೆಮರೆಯ ಕಲಾವಿದರಾಗಿ 50 ರೂ.‌ ಗೆ ದುಡಿದ ಯಶ್.. ಇಂದು ರಾಕಿಂಗ್‌ ಸ್ಟಾರ್‌.!

Yash : ಯಶ್ 16 ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಆದರೆ ಅವರು ಕೆಲಸ ಮಾಡುತ್ತಿದ್ದ ಪ್ರಾಜೆಕ್ಟ್‌ ಸ್ಥಗಿತಗೊಂಡಿತು.   

Written by - Chetana Devarmani | Last Updated : Jun 13, 2023, 05:14 PM IST
  • 16 ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದ ಯಶ್‌
  • ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ನಟ
  • ಅಂದು ತೆರೆಮರೆಯ ಕಲಾವಿದರಾಗಿ 50 ರೂ.‌ ಗೆ ದುಡಿದ ಯಶ್
Yash: ಅಂದು ತೆರೆಮರೆಯ ಕಲಾವಿದರಾಗಿ 50 ರೂ.‌ ಗೆ ದುಡಿದ ಯಶ್.. ಇಂದು ರಾಕಿಂಗ್‌ ಸ್ಟಾರ್‌.! title=
Yash

Yash : 2018 ರಲ್ಲಿ ರಿಲೀಸ್‌ ಆದ ಕೆಜಿಎಫ್‌ ಚಾಪ್ಟರ್‌ 1 ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಹಿಟ್ ಕಂಡಿತು. ಕರ್ನಾಟಕದ ಗಡಿಯಾಚೆಗೆ ಅಪರಿಚಿತರಾಗಿದ್ದ ಯಶ್ ಅವರು ಕೆಜಿಎಫ್‌ನಲ್ಲಿ ನಟಿಸಿ, ‘ರಾಕಿ ಭಾಯ್’ ಪಾತ್ರದಲ್ಲಿ ಭಾರತದಾದ್ಯಂತ ಜನಪ್ರಿಯರಾದರು. 2022 ರಲ್ಲಿ ತೆರೆಕಂಡ KGF 2 ಯಶ್‌ ಅವರನ್ನು ಪ್ಯಾನ್‌ ಇಂಡಿಯಾ ಸ್ಟಾರ ಆಗಿ ಮಾಡಿತು. 

ದೇಶದೆಲ್ಲೆಡೆ ಈಗ ಯಶ್  ಅವರನ್ನು ರಾಕಿ ಭಾಯ್ ಎಂದೇ ಚಿರಪರಿಚಿತರಾಗಿದ್ದಾರೆ. ಕನ್ನಡ ಚಲನಚಿತ್ರೋದ್ಯಮದಲ್ಲಿ ಅವರ ಹೋರಾಟದ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ಯಶ್ ಅವರು ನವೀನ್ ಕುಮಾರ್ ಗೌಡ ಎಂಬ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮತ್ತು ನಂತರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ಚಾಲಕರಾಗಿ ಕೆಲಸ ಮಾಡಿದ್ದರು. 

ಇದನ್ನೂ ಓದಿ: Urvashi: ಇವರೇ ನೋಡಿ ನಟಿ ಊರ್ವಶಿ ಮಗಳು.. ಸಿನಿರಂಗಕ್ಕೆ ತೇಜಲಕ್ಷ್ಮಿ ಎಂಟ್ರಿ ಯಾವಾಗ?

ಯಶ್ ಅವರು ಯಾವಾಗಲೂ ನಟನಾಗಬೇಕೆಂದು ಬಯಸಿದ್ದರಿಂದ ಮೈಸೂರು ಶಾಲೆಯಲ್ಲಿ ರಂಗಭೂಮಿ ಮತ್ತು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಯಶ್ 10 ನೇ ತರಗತಿಯನ್ನು ಮುಗಿಸಿದ ನಂತರ ಶಾಲೆಯನ್ನು ಬಿಡಲು ಉದ್ದೇಶಿಸಿದ್ದರು. ಆದರೆ ಪೂರ್ಣ ಸಮಯದ ನಟನೆಯನ್ನು ಮುಂದುವರಿಸುವ ಮೊದಲು ಕಾಲೇಜಿಗೆ ಹೋಗಿ ಓದನ್ನು ಪೂರ್ಣ ಮಾಡಬೇಕೆಂದು ಅವರ ಪೋಷಕರು ಒತ್ತಾಯಿಸಿದರು.

ಯಶ್ 16 ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಅವರು ಕೆಲಸ ಮಾಡುತ್ತಿದ್ದ ಪ್ರಾಜೆಕ್ಟ್‌ ಸ್ಥಗಿತಗೊಂಡಿತು. ನಂತರ ಅವರು ನಾಟಕ ತಂಡವನ್ನು ಸೇರಿಕೊಂಡರು ಮತ್ತು ನಟನೆಯ ಪಾಠವನ್ನೂ ಪಡೆದರು. ಆರಂಭದಲ್ಲಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಇದಕ್ಕಾಗಿ 50 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು.

ಇದನ್ನೂ ಓದಿ: Yash: ರಾವಣನ ಪಾತ್ರದಲ್ಲಿ ನಟಿಸಲು ʻNOʼ ಎಂದಿದ್ದೇಕೆ ಯಶ್?

ಅವರು ಬೆಂಗಳೂರಿನ K.L.E ನಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್ ಮುಗಿಸಿದರು. ರಂಗಭೂಮಿಯಲ್ಲಿ ಕೆಲಸ ಮುಂದುವರೆಸುವಾಗ ಕಾಲೇಜು ಓದು ಮುಗಿಸಿದರು. ಅದೇ ವರ್ಷ ಉತ್ತರಾಯಣ ಸಿರಿಯಲ್‌ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು. 2005 ರಲ್ಲಿ ಬಂದ ಸಿರಿಯಲ್‌ ಗೋಕುಲದಲ್ಲಿ ರಾಧಿಕಾ ಪಂಡಿತ್ ಅವರೊಂದಿಗೆ ಕೆಲಸ ಮಾಡಿದರು.  

ಕಿರುತೆರೆಯಲ್ಲಿ ಹೆಸರು ಪಡೆದ ನಂತರ, ಯಶ್ 2007 ರಲ್ಲಿ ಜಂಬದ ಹುಡುಗಿ ಚಿತ್ರದಲ್ಲಿ ಪೋಷಕ ಕಲಾವಿದನಾಗಿ ಬಿಗ್‌ಸ್ಕ್ರೀನ್‌ಗೆ ಎಂಟ್ರಿ ಕೊಟ್ಟರು. 2008 ರಲ್ಲಿ, ಅವರು ರಾಕಿ ಚಿತ್ರದಿಂದ ಸಾಕಷ್ಟು ಮನ್ನಣೆ ಪಡೆದರು. ಆ ಬಳಿಕ ಅನೇಕ ಚಿತ್ರಗಳಲ್ಲಿ ಯಶ್‌ ಚಾನ್ಸ್‌ ಪಡೆದರು. ಮೊಗ್ಗಿನ ಮನಸ್ಸು, ರಾಜಾಹುಲಿ, ಮಾಸ್ಟರ್‌ಪೀಸ್‌, ಗೂಗ್ಲಿ ಸೇರಿದಂತೆ ಹಲವಾರು ಹಿಟ್‌ ಸಿನಿಮಾಗಳನ್ನು ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಂದ ರಾಕಿಂಗ್‌ ಸ್ಟಾರ್‌ ಎಂಬ ಬಿರುದನ್ನು ಪಡೆದರು. ಕೆಜಿಎಫ್‌ ಬಳಿ ಯಶ್‌ ನೇಮ್‌ ಆಂಡ್‌ ಫೇಮ್‌ ಮತ್ತಷ್ಟು ಹೆಚ್ಚಾಯ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News