ನಿರ್ಮಾಪಕಿ ಏಕ್ತಾ ಕಪೂರ್ (Ekta Kapoor) ತಮ್ಮ ಡಿಜಿಟಲ್ ಪ್ರೊಡಕ್ಷನ್ ಹೌಸ್ ಎಎಲ್ ಟಿ ಬಾಲಾಜಿ ಮೂಲಕ ಹೊಸ ಕಾರ್ಯಕ್ರಮವನ್ನು (Reality show) ನಿರ್ಮಿಸಲು ಸಿದ್ಧರಾಗಿದ್ದಾರೆ.


COMMERCIAL BREAK
SCROLL TO CONTINUE READING

ಡಿಜಿಟಲ್ (Digital) ವೀಕ್ಷಕರ ಮನರಂಜನೆಗಾಗಿ ರಿಯಾಲಿಟಿ ಶೋ ಮಾಡಲು ನಿರ್ಧರಿಸಿದ್ದಾರೆ. ಇದು MX ಪ್ಲೇಯರ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಕಾರ್ಯಕ್ರಮದ ಶೀರ್ಷಿಕೆ ಮತ್ತು ಪರಿಕಲ್ಪನೆಯನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು.


ಮಂಗಳವಾರ, ALTBalaji ತಮ್ಮ Instagram ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. "ಏಕ್ತಾ ಕಪೂರ್ ಅತಿದೊಡ್ಡ ಮತ್ತು ಅತ್ಯಂತ ಬೋಲ್ಡ್ ರಿಯಾಲಿಟಿ ಶೋ ಅನ್ನು ಮಾಡಲಿದ್ದಾರೆ" ಎಂದು ಪೋಸ್ಟ್ ಮಾಡಲಾಗಿದೆ. 


 


OTT ಯ ಪ್ರಮುಖ ಭಾಗವಾಗಿದೆ ಮತ್ತು MX ಪ್ಲೇಯರ್‌ನೊಂದಿಗಿನ ಅವರ ಸಹಯೋಗವನ್ನು ಈ ಕಾರ್ಯಕ್ರಮದ ಮೂಲಕ ಭದ್ರಗೊಲಿಸಲಾಗುತ್ತಿದೆ.


ಇದನ್ನೂ ಓದಿ: Power Star Puneet Rajkumar: ಅಪ್ಪು ಅಭಿನಯದ 'ಜೇಮ್ಸ್‌' ಎದುರು ಯಾರೂ ನಿಲ್ಲೋಕೆ ಚಾನ್ಸೇ ಇಲ್ಲ..!


ನವೆಂಬರ್ 2021 ರಲ್ಲಿ, ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕಂಗನಾ ರಣಾವತ್, ಕರಣ್ ಜೋಹರ್, ಅದ್ನಾನ್ ಸಾಮಿ ಮತ್ತು ಗಾಯಕ ದಿವಂಗತ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗೆ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ಏಕ್ತಾ ಕಪೂರ್ ಅವರಿಗೆ ನೀಡಲಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.