Power Star Puneet Rajkumar: ಅಪ್ಪು ಅಭಿನಯದ 'ಜೇಮ್ಸ್‌' ಎದುರು ಯಾರೂ ನಿಲ್ಲೋಕೆ ಚಾನ್ಸೇ ಇಲ್ಲ..!

ಜೇಮ್ಸ್‌ ರಿಲೀಸ್‌ ಆಗುವ ದಿನ ಅಪ್ಪು ಚಿತ್ರವನ್ನು ಮಾತ್ರ ಪ್ರದರ್ಶನ ಮಾಡಲು ಸಿದ್ಧತೆ ನಡೆದಿದೆ. ಈ ಬಗ್ಗೆ ಜೇಮ್ಸ್‌ ಚಿತ್ರದ ವಿತರಕ ಧೀರಜ್‌ ಮಾಹಿತಿ ನೀಡಿದ್ದಾರೆ. ಹಾಗೇ ಅಪ್ಪು ಸಿನಿಮಾ ರಿಲೀಸ್‌ ಆಗುವ ದಿನ ಪರಭಾಷೆ ಚಿತ್ರಗಳಿಗೆ ಕೊಕ್‌ ನೀಡುವ ಸಾಧ್ಯತೆ ಇದೆ.

Edited by - Yashaswini V | Last Updated : Feb 1, 2022, 01:03 PM IST
  • ಅಪ್ಪು.. ಕನ್ನಡಿಗರ ಪಾಲಿಗೆ ಪ್ರೀತಿಯ ನಟ
  • ಅಪ್ಪು ನಮ್ಮನ್ನೆಲ್ಲಾ ಅಗಲಿ 3 ತಿಂಗಳೇ ಉರುಳಿದೆ
  • ಹೀಗಾಗಿ ಅಪ್ಪು ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗಿದೆ
Power Star Puneet Rajkumar: ಅಪ್ಪು ಅಭಿನಯದ 'ಜೇಮ್ಸ್‌' ಎದುರು ಯಾರೂ ನಿಲ್ಲೋಕೆ ಚಾನ್ಸೇ ಇಲ್ಲ..! title=
James release date

ಬೆಂಗಳೂರು: ಚಂದನವನದ ಪವರ್ ಸ್ಟಾರ್, ಕನ್ನಡಿಗರ ಪ್ರೀತಿಯ 'ಅಪ್ಪು' ನಮ್ಮನ್ನಗಲಿ 3 ತಿಂಗಳುಗಳೇ ಕಳೆದಿವೆ. ಅಪ್ಪು ದೈಹಿಕವಾಗಿ ಇಂದು ನಮ್ಮೊಂದಿಗೆ ಇಲ್ಲದೇ ಇರಬಹುದು, ಆದರೆ ಅವರ ನೆನಪು ಸದಾ ಅಚ್ಚ ಹಸಿರಾಗಿರುತ್ತದೆ. ಕೋಟ್ಯಾಂತರ ಸಿನಿ ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಕೊನೆಯ ಚಿತ್ರ "ಜೇಮ್ಸ್‌" ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರದ ರಿಲೀಸ್‌ ಡೇಟ್‌ ರಿವೀಲ್ ಕೂಡ ಆಗಿದೆ. ಇಡೀ ದೇಶವೇ ಜೇಮ್ಸ್‌ ಚಿತ್ರಕ್ಕಾಗಿ ಕಾಯುತ್ತಿದ್ದು, ಪುನೀತ್‌ ರಾಜ್‌ ಕುಮಾರ್‌ ಹುಟ್ಟುಹಬ್ಬದ ದಿನವೇ ಸಿನಿಮಾ ತೆರೆಗೆ ಬರಲಿದೆ. ಈ ಬಗ್ಗೆ ಚಿತ್ರದ ವಿತರಕರು ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.

ಫ್ಯಾನ್ಸ್‌ಗೆ ಗುಡ್‌ ನ್ಯೂಸ್..! 
ಅಪ್ಪು.. ಕನ್ನಡಿಗರ ಪಾಲಿಗೆ ಪ್ರೀತಿಯ ನಟ. ಆದ್ರೆ 'ಅಪ್ಪು' (APPU) ಇಂದು ನಮ್ಮೊಂದಿಗಿಲ್ಲ. ಅಪ್ಪು ನಮ್ಮನ್ನೆಲ್ಲಾ ಅಗಲಿ 3 ತಿಂಗಳೇ ಉರುಳಿದೆ. ಹೀಗಾಗಿ ಅಪ್ಪು ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗಿದೆ. ಹೀಗೆ ಕಂಬನಿ ಮಿಡಿಯುತ್ತಿರುವ ಅಪ್ಪು ಫ್ಯಾನ್ಸ್‌ ಗೆ ಜೇಮ್ಸ್‌ ಚಿತ್ರತಂಡ ಪೋಸ್ಟರ್‌ ಮೂಲಕ ಗಣರಾಜ್ಯೋತ್ಸವದ ದಿನದಂದು ಭರ್ಜರಿ ಸಿಹಿ ಸುದ್ದಿ ನೀಡಿತ್ತು. ಇದೀಗ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ.

ಇದನ್ನೂ ಓದಿ- ಟಾಲಿವುಡ್​ ನಲ್ಲೂ ಕಿಚ್ಚನ ಹವಾ... ಫೆಬ್ರವರಿ 4ರಂದು ರಿಲೀಸ್​ ಆಗುತ್ತಿದೆ ಸುದೀಪ್ ಸಿನಿಮಾ

ಪರಭಾಷೆ ಚಿತ್ರ ರಿಲೀಸ್‌ ಆಗಲ್ಲ:
ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬಂತೆ ಪವರ್ ಸ್ಟಾರ್ ಪುನೀತ್‌ ರಾಜ್‌ ಕುಮಾರ್‌ (Power Star Puneet Rajkumar) ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು ಹಾಗೂ ಸಮಾಜ ಸೇವೆಗೆ ಕನ್ನಡಿಗರು ಮಾತ್ರವಲ್ಲ ಇಡೀ ದೇಶವೇ ತಲೆಬಾಗಿದೆ. ಬಡವರ ಕಷ್ಟಕ್ಕೆ ನೆರಳಾಗಿ, ಸಮಸ್ಯೆ ಸುಳಿಗೆ ಸಿಲುಕಿದ್ದವರಿಗೆ ಬೆನ್ನೆಲುಬಾಗಿ ನಿಂತಿದ್ದ ಅಪ್ಪು ಅಕಾಲಿಕ ಮರಣ ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಇಂತಹ ಮಹಾನ್‌ ನಾಯಕನ ಅದ್ಭುತ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಅದುವೇ ಜೇಮ್ಸ್‌..  ಮಾರ್ಚ್‌ 17ರಂದು ಅಪ್ಪು ಹುಟ್ಟು ಹಬ್ಬದ ದಿನ ಜೇಮ್ಸ್ ಭರ್ಜರಿಯಾಗಿ ರಿಲೀಸ್‌ ಆಗಲಿದೆ. ಹೀಗಾಗಿ ಅಪ್ಪು ಚಿತ್ರಕ್ಕೆ ಭರ್ಜರಿ ವೇದಿಕೆ ಒದಗಿಸಲು ಸಿದ್ಧತೆ ಆರಂಭವಾಗಿದೆ.

ಚಿತ್ರರಂಗದ ಒಗ್ಗಟ್ಟು:
ಜೇಮ್ಸ್‌ ರಿಲೀಸ್‌ ಆಗುವ ದಿನ ಅಪ್ಪು ಚಿತ್ರವನ್ನು ಮಾತ್ರ ಪ್ರದರ್ಶನ ಮಾಡಲು ಸಿದ್ಧತೆ ನಡೆದಿದೆ. ಈ ಬಗ್ಗೆ ಜೇಮ್ಸ್‌ (James) ಚಿತ್ರದ ವಿತರಕ ಧೀರಜ್‌ ಮಾಹಿತಿ ನೀಡಿದ್ದಾರೆ. ಹಾಗೇ ಅಪ್ಪು ಸಿನಿಮಾ ರಿಲೀಸ್‌ ಆಗುವ ದಿನ ಪರಭಾಷೆ ಚಿತ್ರಗಳಿಗೆ ಕೊಕ್‌ ನೀಡುವ ಸಾಧ್ಯತೆ ಇದೆ. ಈ ಮೂಲಕ ಕೋಟಿ ಕೋಟಿ ಕನ್ನಡಿಗರ ಪ್ರೀತಿಯ 'ಅಪ್ಪು'ಗೆ ಗೌರವ ಸಲ್ಲಿಸಲು ಇಡೀ ಚಿತ್ರರಂಗವೇ ಒಂದಾಗುತ್ತಿದೆ.

ಇದನ್ನೂ ಓದಿ- RIP Puneeth Rajkumar: ಕನ್ನಡಕ್ಕೊಬ್ಬನೇ ಪ್ರೀತಿಯ ಅಪ್ಪು

ಒಟ್ನಲ್ಲಿ ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್‌ ಬಿಡುಗಡೆಯಾಗುವ ದಿನ ಕರುನಾಡಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗೋದು ಪಕ್ಕಾ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಚಿತ್ರರಂಗ ಕೂಡ ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದು, ಈ ಮೂಲಕ ಅಪ್ಪುಗೆ ವಿಶಿಷ್ಟವಾಗಿ ನಮಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News