Isha Deol-Bharat Takhtani Divorce: ಹೇಮಾ ಮಾಲಿನಿ ಅವರ ಮಗಳು ಇಶಾ ಡಿಯೋಲ್ ಮದುವೆಯಾದ 12 ವರ್ಷಗಳ ನಂತರ ಭರತ್ ತಖ್ತಾನಿ ಅವರಿಂದ ವಿಚ್ಛೇದನ ಪಡೆಯುತ್ತಿದ್ದಾರೆ. ಈ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.


COMMERCIAL BREAK
SCROLL TO CONTINUE READING

ಇಶಾ ಮತ್ತು ಭರತ್ 2012 ರಲ್ಲಿ ವಿವಾಹವಾಗಿದ್ದರು.. ಅವರಿಗೆ ಸದ್ಯ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಈಗ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರ್ಪಡುತ್ತಿದ್ದಾರೆ ಎನ್ನಲಾಗಿದೆ.. ಆದರೆ ಈ ಮುದ್ದು ಜೋಡಿ ಯಾಕೆ ಬೇರೆಯಾಗುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತಿದೆ.. ಕೆಲ ವರದಿಯ ಪ್ರಕಾರ ಈ ಜೋಡಿಯ ಬೇರ್ಪಡಿಕೆಗೆ ಭರತ್ ಅವರ ವಿವಾಹೇತರ ಸಂಬಂಧವೇ ಕಾರಣ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ-ಸ್ಟಾರ್ ಹೀರೋ ಜೊತೆ ಲವ್ ಅಫೇರ್.. ನಂತರ ಬ್ರೇಕಪ್.. ಸಾಕಷ್ಟು ನಿಂದನೆಗಳನ್ನು ಎದುರಿಸಿ ಸೆನ್ಸೇಷನ್ ಆದ ನಟಿ ಈಕೆ!


ವರದಿಯ ಪ್ರಕಾರ ಇಶಾ ಡಿಯೋಲ್ ತಮ್ಮ ಪತಿ ಭರತ್ ಅವರೊಂದಿಗಿನ ಪೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದನ್ನು ನಿಲ್ಲಿಸಿದ್ದಾರೆ ಮತ್ತು ಇಶಾ ಆಗಾಗ್ಗೆ ತನ್ನ ತಾಯಿ ಹೇಮಾ ಮಾಲಿನಿಯೊಂದಿಗೆ ಮಾತ್ರ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ.. ಅಲ್ಲದೇ ಇಶಾ ಮದುವೆ ಮುರಿದು ಬೀಳಲು ಭರತ್‌ನ ವಿವಾಹೇತರ ಸಂಬಂಧವೇ ಕಾರಣ ಎಂದು ಸೋಷಿಯಲ್‌ ಮಿಡಿಯಾದ ಪೋಸ್ಟ್‌ನಲ್ಲಿ ಬರೆಯಲಾಗಿದೆ.. 


ಆದರೆ ಈ ಪೋಸ್ಟ್ ಈಗ ಸರಿಯಾಗಿದೆ ಎಂದು ಸಾಬೀತಾದ್ದು... ಇದೀಗ ಇಶಾ ಮತ್ತು ಭರತ್ ಅವರೇ ಹೇಳಿಕೆಯೊಂದರಲ್ಲಿ ಪರಸ್ಪರ ಬೇರ್ಪಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ಮೊದಲು ಕ್ಯಾಸ್ಕೇಡ್ ಇಂಟರ್ ಸ್ಕೂಲ್ ಸ್ಪರ್ಧೆಯಲ್ಲಿ ಭೇಟಿಯಾದರು. ಇಲ್ಲಿಯೇ ಇಬ್ಬರೂ ಸ್ನೇಹಿತರಾದರು ಮತ್ತು ನಂತರ ಪರಸ್ಪರ ಪ್ರೀತಿಸಿ, 2012 ರಲ್ಲಿ ವಿವಾಹವಾದರು.


ಇದನ್ನೂ ಓದಿ-ದಿಯಾ ದೀಕ್ಷಿತ್’ಗೆ ಡಿವೈನ್ ಸ್ಟಾರ್ ರಿಷಬ್ ಸಾಥ್: KTM ಟ್ರೈಲರ್ ರಿಲೀಸ್ ಮಾಡಿದ ದಕ್ಷಿಣದ ಬ್ಯೂಟಿ ಕ್ವೀನ್ಸ್


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.