ದಿಯಾ ದೀಕ್ಷಿತ್’ಗೆ ಡಿವೈನ್ ಸ್ಟಾರ್ ರಿಷಬ್ ಸಾಥ್: KTM ಟ್ರೈಲರ್ ರಿಲೀಸ್ ಮಾಡಿದ ದಕ್ಷಿಣದ ಬ್ಯೂಟಿ ಕ್ವೀನ್ಸ್

KTM Movie Teaser and Trailer: ಕೆಟಿಎಂ ಸಿನಿಮಾದ ಟೀಸರ್ ಅನ್ನು ಏಕಕಾಲದಲ್ಲಿ 70ಕ್ಕೂ ಹೆಚ್ಚು ಕನ್ನಡ ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಫಸ್ಟ್ ಲುಕ್ ಅನ್ನು ಸೌತ್ ಇಂಡಿಯಾ ಸ್ಟಾರ್ಸ್ ಬಿಡುಗಡೆ ಮಾಡಿದ್ದಾರೆ.

Written by - YASHODHA POOJARI | Edited by - Bhavishya Shetty | Last Updated : Feb 7, 2024, 12:39 PM IST
    • ಕನ್ನಡದ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಈಗ ಬಹುಭಾಷಾ ನಟ
    • ಕೆಟಿಎಂ ಸಿನಿಮಾದ ಟೀಸರ್-ಟ್ರೇಲರ್ ಅನಾವರಣ
    • ಫಸ್ಟ್ ಲುಕ್ ಅನ್ನು ಸೌತ್ ಇಂಡಿಯಾ ಸ್ಟಾರ್ಸ್ ಬಿಡುಗಡೆ ಮಾಡಿದ್ದಾರೆ
ದಿಯಾ ದೀಕ್ಷಿತ್’ಗೆ ಡಿವೈನ್ ಸ್ಟಾರ್ ರಿಷಬ್ ಸಾಥ್: KTM ಟ್ರೈಲರ್ ರಿಲೀಸ್ ಮಾಡಿದ ದಕ್ಷಿಣದ ಬ್ಯೂಟಿ ಕ್ವೀನ್ಸ್  title=
KTM Movie Teaser

KTM Movie Teaser and Trailer: ದಸರಾ ಸಿನಿಮಾ ಮೂಲಕ ನ್ಯಾಚುಲರ್ ಸ್ಟಾರ್ ನಾನಿ ಜೊತೆಗೂಡಿ ಧಮಾಕ ಎಬ್ಬಿಸಿದ್ದ ಕನ್ನಡದ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಈಗ ಬಹುಭಾಷಾ ನಟ. ಕನ್ನಡದ ಜೊತೆಗೆ ತೆಲುಗು, ಮಲಯಾಳಂಗೂ ಹೆಜ್ಜೆ ಇಟ್ಟಿರುವ ಈ ಚಾಕಲೇಟ್ ಹೀರೋ ನಟನೆಯ ಬಹುನಿರೀಕ್ಷಿತ ಸಿನಿಮಾ ಕೆಟಿಎಂ ಸದ್ಯ ಸದ್ದು ಮಾಡುತ್ತಿದೆ. ಟೈಟಲ್’ನಿಂದ ಗಮನಸೆಳೆಯುತ್ತಿರುವ ಈ ಸಿನಿಮಾ ಹಾಡುಗಳ ಮೂಲಕ ಮೋಡಿ ಮಾಡುತ್ತಿದ್ದು, ಇದೀಗ ಟ್ರೇಲರ್ ಅನಾವರಣಗೊಂಡಿದೆ.

ಇದನ್ನೂ ಓದಿ: Bharat Rice: ಭಾರತ್ ರೈಸ್ ಹೆಸರಿನಲ್ಲಿ 29 ರೂ./ಕೆಜಿ ಅಕ್ಕಿ ಪರಿಚಯಿಸಿದ ಕೇಂದ್ರ ಸರ್ಕಾರ!

ಕೆಟಿಎಂ ಸಿನಿಮಾದ ಟೀಸರ್ ಅನ್ನು ಏಕಕಾಲದಲ್ಲಿ 70ಕ್ಕೂ ಹೆಚ್ಚು ಕನ್ನಡ ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಫಸ್ಟ್ ಲುಕ್ ಅನ್ನು ಸೌತ್ ಇಂಡಿಯಾ ಸ್ಟಾರ್ಸ್ ಬಿಡುಗಡೆ ಮಾಡಿದ್ದಾರೆ. ರಿಷಬ್ ಶೆಟ್ಟಿ, ಡಿಂಪಲ್ ಕ್ವೀನ್ ರಚಿತಾ ರಾಮ್, ಮಹಾನಟಿ ಕೀರ್ತಿ ಸುರೇಶ್, ರಶ್ಮಿಕಾ ಮಂದಣ್ಣ,  ಮಲಯಾಳಂ ನಟ ಶೈನ್ ಟಾಮ್ ಚಾಕೋ, ತೆಲುಗಿನ ರಾಹುಲ್ ರವೀಂದ್ರನ್ ಸೋಷಿಯಲ್ ಮೀಡಿಯಾದಲ್ಲಿ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. 

ಒಂದು ಸುಂದರ ಪ್ರೇಮಕಥೆ. ಈ ಕಥೆಯಲ್ಲಿ ಒಬ್ಬ ನಾಯಕ. ಇಬ್ಬರು ನಾಯಕಿಯರು. ಪ್ರೀತಿಗಾಗಿ ಪರಿತಪ್ಪಿಸುವ ನಾಯಕ. ನಾಯಕ ಅಂದ್ರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ನಾಯಕಿಯರು. ನಾಯಕನ ಜೀವನದಲ್ಲಿ ನಡೆದ ಏರಿಳಿತಗಳು ಕೆಟಿಎಂ ಟ್ರೇಲರ್’ನ ಹೈಲೆಟ್ಸ್. ಥೇಟ್ ದಿಯಾ ಸಿನಿಮಾವನ್ನು ಮತ್ತೊಮ್ಮೆ ನೆನಪು ಮಾಡಿರುವ ಈ ಝಲಕ್ ನೋಡುಗರಿಗೆ ಕುತೂಹಲ ಹೆಚ್ಚಿಸಿದೆ. ಹಾಗಂತ ಈ ಚಿತ್ರಕ್ಕೂ ಆ ಚಿತ್ರಕ್ಕೂ ಯಾವುದೇ ಲಿಂಕ್ ಇಲ್ಲ. ದೀಕ್ಷಿತ್ ಶೆಟ್ಟಿ ಭಗ್ನಪ್ರೇಮಿಯಾಗಿ ಪ್ರೇಕ್ಷಕರನ್ನು ಆವರಿಸಿಕೊಂಡ್ರೆ, ಅವರಿಗೆ ಜೋಡಿಯಾಗಿ ಸಂಜನಾ ದಾಸ್ ಹಾಗೂ ಕಾಜಲ್ ಕುಂದರ್ ಸಾಥ್ ಕೊಟ್ಟಿದ್ದಾರೆ. ಉಷಾ ಭಂಡಾರಿ, ಪ್ರಕಾಶ್ ತುಮಿನಾಡು, ರಘು ರಮಣಕೊಪ್ಪ, ಶಾನಿಲ್ ಗುರು, ಬಾಬು ಹಿರಣಯ್ಯ, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ: ಟಿ20 ಸರಣಿಗಾಗಿ ಭಾರತ ಜಿಂಬಾಬ್ವೆ ಪ್ರವಾಸ: ಪಂದ್ಯ ನಡೆಯುವ ಸ್ಥಳ, ಯಾವಾಗ, ವೇಳಾಪಟ್ಟಿ ಮಾಹಿತಿ

ಅಥರ್ವ ಸಿನಿಮಾ ನಿರ್ದೇಶಿಸಿದ್ದ ಅರುಣ್ ‘ಕೆಟಿಎಂ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಎರಡನೇ ಪ್ರಯತ್ನ. ಈ ಚಿತ್ರವನ್ನು ಮಹಾಸಿಂಹ ಮೂವೀಸ್ ಬ್ಯಾನರ್ ಅಡಿ ವಿನಯ್ ನಿರ್ಮಾಣ ಮಾಡಿದ್ದು, ರಕ್ಷಯ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನವೀನ್ ಕ್ಯಾಮೆರಾ ವರ್ಕ್, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಸಂಗೀತ ನಿರ್ದೇಶನ, ಅಭಿನಂದನ್ ದೇಶಪ್ರಿಯ ಸಂಭಾಷಣೆ ಈ ಚಿತ್ರಕ್ಕೆ ಇದೆ. ಭರದಿಂದ ಕೆಟಿಎಂ ಸಿನಿಮಾದ ಪ್ರಚಾರ ಕಾರ್ಯ ನಡೆಯುತ್ತಿದ್ದು, ಇದೇ ತಿಂಗಳ 16ಕ್ಕೆ ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News