ನವದೆಹಲಿ: 2012 ರಲ್ಲಿ 'ಜನ್ನತ್ 2' ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ನಟಿ ಇಶಾ ಗುಪ್ತಾ ಅವರು ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಎದುರಿಸಿದ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಸ್ತುತ ವೆಬ್-ಸರಣಿ 'ಆಶ್ರಮ 3' ನಲ್ಲಿ ಕಾಣಿಸಿಕೊಂಡಿರುವ 36 ವರ್ಷದ ನಟಿ ಇಷಾ ಗುಪ್ತಾ, ಉತ್ತಮ ಚರ್ಮದ ಬಣ್ಣಕ್ಕಾಗಿ ಅವರು ಬರೋಬ್ಬರಿ 9000 ರೂ ಮೌಲ್ಯದ ಇಂಜೆಕ್ಷನ್ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.


ಇದನ್ನೂ ಓದಿ : President Election 2022 : ಜು.18 ರಂದು ರಾಷ್ಟ್ರಪತಿ ಚುನಾವಣೆಗೆ ಮತದಾನ, ಜು. 21 ರಂದು ಫಲಿತಾಂಶ!


ಈಗ ಬಾಲಿವುಡ್ ನಲ್ಲಿ ಖ್ಯಾತ್ಯನಾಮ ನಟರೊಂದಿಗೆ ಕೆಲಸ ಮಾಡುತ್ತಿರುವ ನಟಿ ಇಷಾ ಗುಪ್ತಾ, ಈಗ ತಮ್ಮ ಮೈಬಣ್ಣದ ಬದಲಾವಣೆಗೆ ಪಟ್ಟಿರುವ ಶ್ರಮವನ್ನು ನೆನಪಿಸಿಕೊಂಡಿದ್ದಾರೆ.ಈ ವಿಚಾರವಾಗಿ ಪ್ರಭಾತ್ ಖಬರ್ ನೊಂದಿಗೆ ಮಾತನಾಡಿರುವ ಅವರು "ನನ್ನ ವೃತ್ತಿಜೀವನದ ಆರಂಭದಲ್ಲಿ, ನನ್ನ ಮೂಗು ಚೂಪು ಮಾಡಿಕೊಳ್ಳಲು ಸಲಹೆ ನೀಡಲಾಯಿತು, ಬಹಳ ಹಿಂದೆಯೇ, ಉತ್ತಮ ತ್ವಚೆಯನ್ನು ಪಡೆಯಲು ಚುಚ್ಚುಮದ್ದನ್ನು ಪಡೆಯಲು ಸಲಹೆ ನೀಡಲಾಗಿತ್ತು. ನಾನು ಸ್ವಲ್ಪ ಸಮಯದವರೆಗೆ ಇದಕ್ಕಾಗಿ ಅಲೆದಾಡಿದೆ, ಕೊನೆಗೆ ಅಂತಹ ಚುಚ್ಚುಮದ್ದನ್ನು ಪಡೆಯಲು ಹೋದಾಗ ಅದರ ಬೆಲೆ 9000 ರೂಪಾಯಿ ಎನ್ನುವುದನ್ನು ನಾನು ಕಂಡುಕೊಂಡೆ, ಈಗ ಅವರ ಹೆಸರನ್ನು ಹೇಳಲು ಇಚ್ಚಿಸುವುದಿಲ್ಲ' ಎಂದು ಅವರು ಹೇಳಿದರು.


ಇದನ್ನೂ ಓದಿ : President Election 2022 : ರಾಷ್ಟ್ರಪತಿ ಚುನಾವಣೆ ಹೇಗಿರುತ್ತೆ? MLA, MP ಗಳ ಮತದ ಮೌಲ್ಯ ಎಷ್ಟು; ಸಂಪೂರ್ಣ ಮಾಹಿತಿ ಇಲ್ಲಿದೆ


'ನಟಿಯರಿಗೆ ಸಾಮಾನ್ಯವಾಗಿ ಸುಂದರವಾಗಿ ಕಾಣುವ ಒತ್ತಡ ಹೆಚ್ಚಿರುತ್ತದೆ. ನನ್ನ ಮಗಳು ನಟಿಯಾಗಬೇಕೆಂದು ನಾನು ಎಂದಿಗೂ ಬಯಸುವುದಿಲ್ಲ, ಇಲ್ಲದಿದ್ದರೆ ಅವಳು ಚಿಕ್ಕ ವಯಸ್ಸಿನಿಂದಲೂ ಸುಂದರವಾಗಿ ಕಾಣುವ ಒತ್ತಡವನ್ನು ಎದುರಿಸಬೇಕಾಗುತ್ತದೆ.ಅವಳು ತನ್ನ ಜೀವನವನ್ನು ಸಾಮಾನ್ಯರಂತೆ ಬದುಕಲು ಸಾಧ್ಯವಾಗುವುದಿಲ್ಲ. ಹಾಗೆ ನೋಡಿದರೆ ಅವಳು ಅಥ್ಲೀಟ್ ಆಗಬೇಕೆಂದು ನಾನು ಬಯಸುತ್ತೇನೆ" ಎಂದು ಅವರು ಹೇಳಿದರು.


ನಟಿ ಇಶಾ 'ಚಕ್ರವ್ಯೂಹ', 'ರಾಜ್ 3ಡಿ', 'ರುಸ್ತಂ' ಮತ್ತು 'ಬಾದ್‌ಶಾಹೋ' ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2019 ರಲ್ಲಿ ಅವರು 'ಟೋಟಲ್ ಧಮಾಲ್' ಮತ್ತು 'ಒನ್ ಡೇ ಜಸ್ಟೀಸ್ ಡೆಲಿವರ್ಡ್'ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ