President Election 2022 : ರಾಷ್ಟ್ರಪತಿ ಚುನಾವಣೆ ಹೇಗಿರುತ್ತೆ? MLA, MP ಗಳ ಮತದ ಮೌಲ್ಯ ಎಷ್ಟು; ಸಂಪೂರ್ಣ ಮಾಹಿತಿ ಇಲ್ಲಿದೆ

ದೇಶದ ಹಾಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಮುಕ್ತಾಯವಾಗಲಿದೆ. ಕೊನೆಯ ಅಧ್ಯಕ್ಷೀಯ ಚುನಾವಣೆಯು 17 ಜುಲೈ 2017 ರಂದು ನಡೆದಿತ್ತು.

Written by - Channabasava A Kashinakunti | Last Updated : Jun 9, 2022, 01:16 PM IST
  • ಇಂದು ಚುನಾವಣಾ ಆಯೋಗವು ರಾಷ್ಟ್ರಪತಿ ಚುನಾವಣೆಯ ದಿನಾಂಕ ಪ್ರಕಟಿಸಲಿದೆ
  • ದೇಶದ ಹಾಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಮುಕ್ತಾಯ
  • ಕೊನೆಯ ಅಧ್ಯಕ್ಷೀಯ ಚುನಾವಣೆಯು 17 ಜುಲೈ 2017 ರಂದು ನಡೆದಿತ್ತು.
President Election 2022 : ರಾಷ್ಟ್ರಪತಿ ಚುನಾವಣೆ ಹೇಗಿರುತ್ತೆ? MLA, MP ಗಳ ಮತದ ಮೌಲ್ಯ ಎಷ್ಟು; ಸಂಪೂರ್ಣ ಮಾಹಿತಿ ಇಲ್ಲಿದೆ title=

Presidential Election 2022 : ಚುನಾವಣಾ ಆಯೋಗವು ಇಂದು ಅಂದರೆ ಗುರುವಾರ ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಪತಿ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಿದೆ. ದೇಶದ ಹಾಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಮುಕ್ತಾಯವಾಗಲಿದೆ. ಕೊನೆಯ ಅಧ್ಯಕ್ಷೀಯ ಚುನಾವಣೆಯು 17 ಜುಲೈ 2017 ರಂದು ನಡೆದಿತ್ತು.

2017 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು ಶೇ.50 ರಷ್ಟು ಮತಗಳು ಎನ್‌ಡಿಎ ಪರವಾಗಿ ಇದ್ದವು. ಒಟ್ಟು 4,880 ಮತದಾರರಲ್ಲಿ 4,109 ಶಾಸಕರು ಮತ್ತು 771 ಸಂಸದರು ಮತ ಚಲಾಯಿಸಿದ್ದಾರೆ. ಅಧ್ಯಕ್ಷರ ಚುನಾವಣೆಯಲ್ಲಿ ಸಾಮಾನ್ಯ ಜನರಿಗೆ ಭಾಗವಹಿಸಲು ಅವಕಾಶವಿಲ್ಲ. ಚುನಾಯಿತ ಜನಪ್ರತಿನಿಧಿಗಳು ಮತ ಚಲಾಯಿಸುತ್ತಾರೆ. 

ಇದನ್ನೂ ಓದಿ : President Election 2022 : ಇಂದು ಮಧ್ಯಾಹ್ನ 3 ಗಂಟೆಗೆ 'ರಾಷ್ಟ್ರಪತಿ ಚುನಾವಣೆ' ದಿನಾಂಕ ಘೋಷಣೆ!

ಹೀಗೆ ನಡೆಯುತ್ತದೆ  ಚುನಾವಣೆ

ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರ ಮತಗಳ ಮೌಲ್ಯದ ಲೆಕ್ಕಾಚಾರವೆ ಬೇರೆ. ಮೊದಲನೆಯದಾಗಿ, ಎಲ್ಲಾ ರಾಜ್ಯಗಳ ವಿಧಾನಸಭೆಗಳ ಶಾಸಕರ ಮತಗಳ ಮೌಲ್ಯವನ್ನು ಸೇರಿಸಲಾಗುತ್ತದೆ. ಈ ಸಾಮೂಹಿಕ ಮೌಲ್ಯವನ್ನು ರಾಜ್ಯಸಭೆ ಮತ್ತು ಲೋಕಸಭೆಯ ಒಟ್ಟು ಸದಸ್ಯರ ಒಟ್ಟು ಸಂಖ್ಯೆಯಿಂದ ಭಾಗಿಸಲಾಗುತ್ತದೆ. ಈ ರೀತಿಯಲ್ಲಿ ಪಡೆದ ಸಂಖ್ಯೆಯು ಸಂಸದರ ಮತದ ಮೌಲ್ಯವಾಗಿರುತ್ತದೆ.

ದೇಶದಲ್ಲಿ ಒಟ್ಟು 776 ಸಂಸದರಿದ್ದಾರೆ (ಲೋಕಸಭೆ ಮತ್ತು ರಾಜ್ಯಸಭೆ ಸೇರಿದಂತೆ)

ಪ್ರತಿ ಸಂಸದರ ಮತ ಮೌಲ್ಯ 708.

ದೇಶದಲ್ಲಿ ಒಟ್ಟು 4120 ಶಾಸಕರಿದ್ದಾರೆ.

ಪ್ರತಿ ರಾಜ್ಯದ ಶಾಸಕರ ಮತದ ಮೌಲ್ಯ ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಉತ್ತರ ಪ್ರದೇಶದ ಶಾಸಕರೊಬ್ಬರ ಮತದ ಮೌಲ್ಯ 208 ಆಗಿರುತ್ತದೆ.

ಯಾವುದೇ ಅಭ್ಯರ್ಥಿ ಅಧ್ಯಕ್ಷರಾಗಲು 549441 ಅಗತ್ಯವಿದೆ.

ಶಾಸಕರ ವಿಷಯದಲ್ಲಿ, ಶಾಸಕರು ಇರುವ ರಾಜ್ಯದ ಜನಸಂಖ್ಯೆಯ ಆದರದ ಮೇಲೆ ಪರಿಗಣಿಸಲಾಗುತ್ತದೆ. ಇದರೊಂದಿಗೆ ಆ ರಾಜ್ಯದ ವಿಧಾನಸಭೆಯ ಸದಸ್ಯರ ಸಂಖ್ಯೆಯನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮೌಲ್ಯವನ್ನು ಲೆಕ್ಕಾಚಾರ ಮಾಡಲು, ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯಿಂದ ಭಾಗಿಸಲಾಗುತ್ತದೆ. ಈ ರೀತಿಯಲ್ಲಿ ಬಂದ ಸಂಖ್ಯೆಯನ್ನು 1000 ರಿಂದ ಭಾಗಿಸಲಾಗುತ್ತದೆ. ಭಾಗಿಸಿದ ನಂತರ ಬಂದ ಅಂಕಿ ಅಂಶವೆ ಆ ರಾಜ್ಯದ ಶಾಸಕರೊಬ್ಬರ ಮತದ ಮೌಲ್ಯವಾಗುತ್ತದೆ.

ಇದನ್ನೂ ಓದಿ : Karti Chidambaram Case : ಕಾರ್ತಿ ಚಿದಂಬರಂ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಜಾಮೀನು ವಿರೋಧಿಸಿದ ED 

ಅಧ್ಯಕ್ಷೀಯ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆಯುವುದು ಗೆಲುವನ್ನು ನಿರ್ಧರಿಸುವುದಿಲ್ಲ. ಮತದಾರರು ಅಂದರೆ ಸಂಸದರು ಮತ್ತು ಶಾಸಕರ ಮತಗಳ ಒಟ್ಟು ತೂಕದ ಅರ್ಧಕ್ಕಿಂತ ಹೆಚ್ಚಿನದನ್ನು ಪಡೆಯುವವರು ಅಧ್ಯಕ್ಷರಾಗುತ್ತಾರೆ. ಅಧ್ಯಕ್ಷೀಯ ಚುನಾವಣೆಗೆ ಎಲೆಕ್ಟೋರಲ್ ಕಾಲೇಜಿನ ಸದಸ್ಯರ ಒಟ್ಟು ಮತಗಳ ಮೊತ್ತ 1098882 ಆಗಿದೆ. ಅಭ್ಯರ್ಥಿ ಗೆಲ್ಲಲು 549441 ಮತಗಳನ್ನು ಪಡೆಯಬೇಕು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News