IIFA 2024: 69 ನೇ ವಯಸ್ಸಿನಲ್ಲಿ 150 ನೃತ್ಯಗಾರರೊಂದಿಗೆ 22 ನಿಮಿಷ ನೃತ್ಯ ಮಾಡಲಿದ್ದಾರೆ ಈ ಸ್ಟಾರ್ ಹೀರೋಯಿನ್ !

IIFA ಸೆಪ್ಟೆಂಬರ್ 27 ರಿಂದ ಸೆಪ್ಟೆಂಬರ್ 29 ರವರೆಗೆ ಅಬುಧಾಬಿಯ ಯಾಸ್ ದ್ವೀಪದಲ್ಲಿ ನಡೆಯಲಿದೆ.
ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA 2024) ಸಂಜೆ ನಡೆಯಲಿದೆ. ಶಾರುಖ್ ಖಾನ್, ಕರಣ್ ಜೋಹರ್ ಮತ್ತು ವಿಕ್ಕಿ ಕೌಶಲ್ ಜಂಟಿಯಾಗಿ IIFA ಪ್ರಶಸ್ತಿ 2024 ಅನ್ನು ಹೋಸ್ಟ್ ಮಾಡಲಿದ್ದಾರೆ.
IIFA ಸೆಪ್ಟೆಂಬರ್ 27 ರಿಂದ ಸೆಪ್ಟೆಂಬರ್ 29 ರವರೆಗೆ ಅಬುಧಾಬಿಯ ಯಾಸ್ ದ್ವೀಪದಲ್ಲಿ ನಡೆಯಲಿದೆ. ಶಾರುಖ್, ಕೃತಿ ಸನೋನ್ ಮತ್ತು ಶಾಹಿದ್ ಕಪೂರ್, ಐಶ್ವರ್ಯಾ ರೈ ಬಚ್ಚನ್ ಈ ಪ್ರಶಸ್ತಿ ಸಮಾರಂಭಕ್ಕೆ ಈಗಾಗಲೇ ತೆರಳಿದ್ದಾರೆ. ಅದೇ ಸಮಯದಲ್ಲಿ ಹಿಂದಿ ಚಿತ್ರರಂಗದ ಎವರ್ ಗ್ರೀನ್ ನಟಿ ರೇಖಾ ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Devara Twitter Review: ದ್ವಿಪಾತ್ರದಲ್ಲಿ ಜೂ.ಎನ್‌ಟಿಆರ್ ಅಬ್ಬರ.. ಪಕ್ಕಾ ಪೈಸಾ ವಸೂಲ್ ಎಂದ ನೆಟ್ಟಿಜನ್ಸ್ !
69 ವರ್ಷದ ಸುಂದರ ಚೆಲುವೆ ರೇಖಾ ತಮ್ಮ ನೃತ್ಯ ಪ್ರದರ್ಶನದ ಮೂಲಕ ಗಮನಸೆಳೆಯಲಿದ್ದಾರೆ. ರೇಖಾ 22 ನಿಮಿಷಗಳ ಕಾಲ IIFA ವೇದಿಕೆಯಲ್ಲಿ 150 ನೃತ್ಯಗಾರರೊಂದಿಗೆ ಪ್ರದರ್ಶನ ನೀಡಲಿದ್ದಾರೆ. ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಕಾಸ್ಟೂಮ್ ಧರಿಸಲಿದ್ದಾರೆ.
ಇದೇ ವೇಳೆ ರೇಖಾ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, 'ಐಐಎಫ್‌ಎಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ, ಇದು ಭಾರತೀಯ ಚಿತ್ರರಂಗವನ್ನು ಸಂಭ್ರಮಿಸುವ ಹಬ್ಬ. ದೇಶದ ಕಲೆಯನ್ನು ಪ್ರದರ್ಶಿಸುವ ಉತ್ಸವ' ಎಂದು ಹೇಳಿದ್ದಾರೆ.
ಇದು ನನ್ನ ಮನೆಯಂತೆ, ಸಿನಿಮಾದ ಜೀವಂತ ರೂಪವನ್ನು ನೋಡಬಹುದು. ಮತ್ತೊಮ್ಮೆ ಈ ಐಕಾನಿಕ್ ಉತ್ಸವದ ಭಾಗವಾಗಲು ನನಗೆ ಹೆಮ್ಮೆಯಿದೆ. ಈ ಪರಂಪರೆಯನ್ನು ಮುಂದುವರಿಸಲು ಉತ್ಸುಕಳಾಗಿದ್ದೇನೆ ಎಂದಿದ್ದಾರೆ. ರೇಖಾ ಈಗಾಗಲೇ ಅಬುಧಾಬಿ ತಲುಪಿದ್ದಾರೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಸ್ಟಾರ್ ಧನುಶ್ರೀ ಆಸ್ಪತ್ರೆಗೆ ದಾಖಲು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.