Bollywood Affairs: ಬಾಲಿವುಡ್ ಇಂಡಸ್ಟ್ರಿಯಲ್ಲಿ ಎಷ್ಟೋ ನಟ-ನಟಿಯರು ತಮ್ಮ ಮದುವೆಯ ನಂತರ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬದಲಾಗಿದ್ದಾರೆ. ಆದರೆ ಈ ನಟಿ ಧರ್ಮ ಬದಲಿಸಬೇಕೆಂದಿದ್ದಕ್ಕೆ ಪ್ರೀತಿಯನ್ನೇ ತ್ಯಜಿಸಿದ್ದರು. 


COMMERCIAL BREAK
SCROLL TO CONTINUE READING

1940 ರ ದಶಕದ ಸೌಂದರ್ಯದ ರಾಣಿ. ಆಕೆ ಬೇರೆ ಯಾರೂ ಅಲ್ಲ ಮಧುಬಾಲಾ. ಸುರ ಸುಂದರ ನಟಿ ಮಧುಬಾಲಾ ಲವ್‌ ಸ್ಟೋರಿ ಕೇಳಿದ್ರೆ ಎಂಥವರೂ ಅಚ್ಚರಿ ಪಡುತ್ತಾರೆ. ಮಧುಬಾಲಾ ಮೊದಲ ಚಿತ್ರ ಬಸಂತ್‌. ಈ ಸಿನಿಮಾದಲ್ಲಿನ ನಟನೆಯಿಂದ ಮಧುಬಾಲಾ ಜನರ ಮನಸೆಳೆದರು. 


ವರದಿಗಳ ಪ್ರಕಾರ, ಆ ಕಾಲದ ಸ್ಟಾರ್‌ ನಟರು ಮಧುಬಾಲಾ ಹಿಂದೆ ಬಿದ್ದಿದ್ದರು. ಮಧುಬಾಲಾ ಯಾರನ್ನೇ ಪ್ರೀತಿಸಿದರು ಅದು ಬ್ರೇಕಪ್‌ ನಲ್ಲೇ ಕೊನೆಗೊಳ್ಳುತ್ತಿತ್ತಂತೆ ಎನ್ನಲಾಗಿದೆ. ಕಮಲ್ ಅಮ್ರೋಹಿ, ದಿಲೀಪ್ ಕುಮಾರ್, ಪ್ರದೀಪ್ ಕುಮಾರ್, ಭರತ್ ಭೂಷಣ್ ಮತ್ತು ಕಿಶೋರ್ ಕುಮಾರ್ ಅವರಂತಹ ನಟರ ಜೊತೆ ಮಧುಬಾಲಾ  ಲವ್ ಆಫೇರ್ ಹೊಂದಿದ್ದರಂತೆ ಎಂದು ಕೆಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ತಲುಪಿ ಕಪ್ ಗೆಲ್ಲುತ್ತಾರೆ ಎನ್ನುತ್ತಿರುವಾಗಲೇ ಜೈಲು ಪಾಲಾದ ಹನುಮಂತು !ಇದೇ ನೋಡಿ ಇವರ ಮೇಲಿನ ಆರೋಪ  


ಕೇದಾರ್ ಶರ್ಮಾ ಮತ್ತು ಮೋಹನ್ ಸಿನ್ಹಾ ಅವರಂತಹ ನಿರ್ದೇಶಕರು ಸಹ ಮಧುಬಾಲಾ ಮೋಹದಲ್ಲಿ ಬಿದ್ದಿದ್ದರು ಎನ್ನಲಾಗುತ್ತದೆ. ಮೀನಾ ಕುಮಾರಿಯನ್ನು ಮದುವೆಯಾಗಿದ್ದ ಮಹಲ್ ಚಿತ್ರದ ನಿರ್ದೇಶಕ ಕಮಲ್ ಅಮ್ರೋಹಿ ಮಧುಬಾಲಾ ಜೊತೆ ಪ್ರೀತಿಸುತ್ತಿದ್ದರು. ಆದರೆ ಮಧುಬಾಲಳನ್ನು 2ನೇ ಹೆಂಡತಿಯಾಗಿ ಸ್ವೀಕರಿಸಲಿಲ್ಲ. 


ಮಧುಬಾಲಾ ದಿಲೀಪ್‌ ಕುಮಾರ್‌ ಲವ್ ಸ್ಟೋರಿ ಸಖತ್ ಸುದ್ದಿ ಆಗಿತ್ತು. ಆದರೆ ಮಧುಬಾಲಾ ಕಪೂರ್ ಕುಟುಂಬಕ್ಕೆ ಹತ್ತಿರವಾಗಿದ್ದ ಪ್ರೇಮನಾಥ್ ಅವರನ್ನು ಪ್ರೀತಿಸುತ್ತಿದ್ದರು ಎನ್ನಲಾಗುತ್ತದೆ. ಪ್ರೇಮನಾಥ್ ಮತ್ತು ಮಧುಬಾಲಾ ಇಬ್ಬರೂ ತಮ್ಮ ಸಂಬಂಧವನ್ನು ಮದುವೆಗೆ ಕೊಂಡೊಯ್ದರು. ಆದರೆ ಪ್ರೇಮನಾಥ್ ಧರ್ಮವನ್ನು ಬದಲಾಯಿಸುವಂತೆ ಮಧುಬಾಲಗೆ ಹೇಳಿದರಂತೆ. ಇದಕ್ಕೆ ಒಪ್ಪದ ಮಧುಬಾಲಾ ಬ್ರೇಕಪ್‌ ಮಾಡಿಕೊಂಡರಂತೆ. 


ಇದನ್ನೂ ಓದಿ: ರೋಮ್ಯಾನ್ಸ್, ಲಿಪ್ ಲಾಕ್ ಮಾಡಲು ರೆಡಿ, ರಿಲೇಷನ್ ಶಿಪ್ ನಲ್ಲಿರುವುದಕ್ಕೂ ಓಕೆ, ಆದರೆ ಮದುವೆ ಮಾತ್ರ ಬೇಡ ಎಂದಿದ್ದೇಕೆ ಈ ಸೆ*ಕ್ಸಿ, ಸುಂದರಿ?


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.