Mithun Chakraborty Health: ಶನಿವಾರ ಬೆಳಿಗ್ಗೆ, ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಎದೆ ನೋವು ಕಾಣಿಸಿಕೊಂಡ ನಂತರ ಕೋಲ್ಕತ್ತಾದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಆಸ್ಪತ್ರೆಯ ಕಡೆಯಿಂದ ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಅದರಲ್ಲಿ 'ದಿ ಕಾಶ್ಮೀರ್ ಫೈಲ್ಸ್' ನಟ ಮಿಥುನ್ ಚಕ್ರವರ್ತಿ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ವೈದ್ಯಕೀಯ ಭಾಷೆಯಲ್ಲಿ ಇದನ್ನು ಸೆರೆಬ್ರಲ್ ವೆಸ್ಕುಲಾರ್‌ ಆಕ್ಸಿಡೆಂಟ್ ಎಂದು ಕರೆಯಲಾಗುತ್ತದೆ.‌ ಮಿಥುನ್ ಚಕ್ರವರ್ತಿ ಅವರಿಗೆ ಈಗ ಸಂಪೂರ್ಣ ಪ್ರಜ್ಞೆ ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ. ವರದಿಗಳ ಪ್ರಕಾರ, ಪಾರ್ಶ್ವವಾಯು ತುಂಬಾ ಚಿಕ್ಕದಾಗಿದೆ, ಇದರಿಂದಾಗಿ ನಟನಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಲಾಯಿತು ಎಂದು ಹೇಳಲಾಗಿದೆ. ಆಸ್ಪತ್ರೆಯ ಹೆಲ್ತ್ ಬುಲೆಟಿನ್‌ನಲ್ಲಿ, ನಟ‌  ಮಿಥುನ್ ಚಕ್ರವರ್ತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ, ರೋಗಲಕ್ಷಣಗಳನ್ನು ಪರಿಗಣಿಸಿ ಅವರಿಗೆ ಹಲವಾರು ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ಪಡ್ಡೆ ಹುಡುಗರನ್ನು "ಚುಟು ಚುಟು" ಅನಿಸುವ ಹುಡುಗಿಯ ಫೋಟೋಸ್ ಇಲ್ಲಿದೆ ನೋಡಿ 


ಈ ಸಮಯದಲ್ಲಿ, MRI ಅನ್ನು ಸಹ ಮಾಡಲಾಯಿತು. ಅದರಲ್ಲಿ ಅವರು ಬ್ರೇನ್‌ ಸ್ಟ್ರೋಕ್ ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ. ಮಿಥುನ್ ಚಕ್ರವರ್ತಿ ಈಗ ಆರೋಗ್ಯವಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಮಿಥುನ್ ಚಕ್ರವರ್ತಿ ಅವರನ್ನು ಕೋಲ್ಕತ್ತಾದ ಅಪೋಲೋ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಶನಿವಾರ ಬೆಳಗ್ಗೆ 9.40 ಕ್ಕೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.


ಮೆದುಳಿನ ಎಂಆರ್‌ಐ ಸೇರಿದಂತೆ ಹಲವು ಪ್ರಮುಖ ಪರೀಕ್ಷೆಗಳು ಮತ್ತು ರೇಡಿಯಾಲಜಿ ಪರೀಕ್ಷೆಗಳನ್ನು ಮಾಡಲಾಗಿದ್ದು, ಅವರು ಮೆದುಳಿನಲ್ಲಿ ರಕ್ತದ ಕೊರತೆಯಿಂದ ಬ್ರೇನ್‌ ಸ್ಟ್ರೋಕ್ ಗೆ ಒಳಗಾಗಿದ್ದಾರೆ. ಸದ್ಯ ಅವರಿಗೆ ಸಂಪೂರ್ಣ ಪ್ರಜ್ಞೆ ಬಂದಿದ್ದು ಚೆನ್ನಾಗಿ ಮಾತನಾಡುತ್ತಿದ್ದಾರೆ. ಮೃದುವಾದ ಆಹಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ಚಕ್ರವರ್ತಿ ಅವರನ್ನು ನರ-ವೈದ್ಯರು, ಹೃದ್ರೋಗ ತಜ್ಞರು ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ಸೇರಿದಂತೆ ವೈದ್ಯರ ತಂಡವು ಮತ್ತಷ್ಟು ಪರೀಕ್ಷಿಸುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ. 


ಇದನ್ನೂ ಓದಿ: NTR ಜತೆ ಅಲ್ಲು ಅರ್ಜುನ್ ಮಗಳ ಸಿನಿಮಾ, 10 ನಿಮಿಷದ ನಟನೆಗೆ ಇಷ್ಟು ಲಕ್ಷ ಸಂಭಾವನೆ!? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.