NTR ಜತೆ ಅಲ್ಲು ಅರ್ಜುನ್ ಮಗಳ ಸಿನಿಮಾ, 10 ನಿಮಿಷದ ನಟನೆಗೆ ಇಷ್ಟು ಲಕ್ಷ ಸಂಭಾವನೆ!?

Allu Arjun daughter New Movie: ಇದೀಗ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ 6 ವರ್ಷದ ಮಗಳು ಅರ್ಹ ಕೂಡ ನಟಿಸಲಿದ್ದಾರೆ ಎಂದು ಹೇಳಲಾಗ್ತಿದೆ. 

Written by - Chetana Devarmani | Last Updated : Feb 10, 2024, 12:08 PM IST
  • ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಪುತ್ರಿ
  • ಅರ್ಹ ಪಡೆಯುವ ಸಂಭಾವನೆ ಎಷ್ಟು?
  • NTR ಜತೆ ಅಲ್ಲು ಅರ್ಜುನ್ ಮಗಳ ಸಿನಿಮಾ
NTR ಜತೆ ಅಲ್ಲು ಅರ್ಜುನ್ ಮಗಳ ಸಿನಿಮಾ, 10 ನಿಮಿಷದ ನಟನೆಗೆ ಇಷ್ಟು ಲಕ್ಷ ಸಂಭಾವನೆ!? title=

Allu Arha Remuneration : ನಿರ್ದೇಶಕ ರಾಜಮೌಳಿಯವರ 'RRR' ಚಿತ್ರದ ಮೂಲಕ ಜೂನಿಯರ್ ಎನ್‌ಟಿಆರ್‌ ಸಾಕಷ್ಟು ಸುದ್ದಿ ಮಾಡಿದರು. ವಿಶ್ವಾದ್ಯಂತ ಖ್ಯಾತಿ ಪಡೆದರು. ಸದ್ಯ ಎನ್‌ಟಿಆರ್‌ ತಮ್ಮ 30 ನೇ ಚಿತ್ರ 'ದೇವರ' ಬಗ್ಗೆ ಚರ್ಚೆಯಲ್ಲಿದ್ದಾರೆ. ಜಾನ್ವಿ ಕಪೂರ್ ಈ ಚಿತ್ರದ ಮೂಲಕ ದಕ್ಷಿಣಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ 6 ವರ್ಷದ ಮಗಳು ಅರ್ಹ ಕೂಡ ನಟಿಸಲಿದ್ದಾರೆ ಎಂದು ಹೇಳಲಾಗ್ತಿದೆ. 

ವರದಿಗಳ ಪ್ರಕಾರ, ಅವರು ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಲ್ಲು ಅರ್ಜುನ್ ಪುತ್ರಿ ನಟಿಸಲಿದ್ದಾರೆ. ಜೂನಿಯರ್ ಎನ್ ಟಿಆರ್ ಅಭಿಮಾನಿಗಳು 'ದೇವರ' ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಚಿತ್ರದ ಪ್ರತಿ ಅಪ್ಡೇಟ್ ಮೇಲೆ ಜನರ ಕಣ್ಣು ನೆಟ್ಟಿದೆ. ಹೀಗಿರುವಾಗ ಅಲ್ಲು ಅರ್ಜುನ್ ಪುತ್ರಿ ಅರ್ಹ ಚಿತ್ರಕ್ಕೆ ಸೇರ್ಪಡೆಯಾಗುತ್ತಿರುವ ಸುದ್ದಿ ಪ್ರೇಕ್ಷಕರಲ್ಲಿ ಹರ್ಷ ಮೂಡಿಸಿದೆ. 

'ದೇವರ' ಚಿತ್ರ ಜೂನಿಯರ್ ಎನ್‌ಟಿಆರ್ ಅವರ 30 ನೇ ಚಿತ್ರವಾಗಿದೆ. ಇದನ್ನು ಮೊದಲು 'ಎನ್‌ಟಿಆರ್ 30' ಎಂದು ಹೆಸರಿಸಲಾಗಿತ್ತು. ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಜಾನ್ವಿಯ ದಕ್ಷಿಣದ ಚೊಚ್ಚಲ ಚಿತ್ರವಾಗಿದೆ. ಆದ್ದರಿಂದ ಇದು 5 ಏಪ್ರಿಲ್ 2024 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಕೆಂಬಣ್ಣದ ಕಲರ್ ಫುಲ್ ಡ್ರೆಸ್ ನಲ್ಲಿ ಕಂಗೊಳಿಸುತ್ತಿರುವ ದಿಶಾ ಪಠಾನಿ 

ಈಗ 'ದೇವರ' ಚಿತ್ರದ ಬಗ್ಗೆ ಹರಿದಾಡುತ್ತಿರುವ ದೊಡ್ಡ ಸುದ್ದಿ ಏನೆಂದರೆ, ಚಿತ್ರದಲ್ಲಿ ಅಲ್ಲು ಅರ್ಜುನ್ ಪುತ್ರಿ ಅರ್ಹ ಕೂಡ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಅರ್ಹ ಜೂನಿಯರ್ ಎನ್ ಟಿಆರ್ ಜೊತೆ ಕೆಲಸ ಮಾಡುತ್ತಿರುವುದು ಇದೇ ಮೊದಲು. ಅಲ್ಲು ಅರ್ಜುನ್‌ ಮತ್ತು ಎನ್‌ಟಿಆರ್ ಯಾವತ್ತೂ ಒಟ್ಟಿಗೆ ಕೆಲಸ ಮಾಡಿಲ್ಲ. ಆದರೆ ಅಲ್ಲು ಪುತ್ರಿ ಎನ್‌ ಟಿಆರ್‌ ಜೊತೆ 'ದೇವರ' ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. 

ಅಲ್ಲು ಅರ್ಜುನ್ 6 ಮಾರ್ಚ್ 2011 ರಂದು ಸ್ನೇಹಾ ರೆಡ್ಡಿಯನ್ನು ವಿವಾಹವಾದರು. ಅಲ್ಲು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಅಲ್ಲು ಅಯಾನ್ 3 ಏಪ್ರಿಲ್ 2014 ರಂದು ಮತ್ತು ಮಗಳು ಅರ್ಹ 21 ನವೆಂಬರ್ 2016 ರಂದು ಜನಿಸಿದರು. 

ಅಲ್ಲು ಅವರ 6 ವರ್ಷದ ಮಗಳು ಅರ್ಹ ಜನಪ್ರಿಯ ಸ್ಟಾರ್ ಕಿಡ್ ಆಗಿದ್ದಾರೆ. ಅವರ ಫೋಟೋಗಳು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಅರ್ಹ ಇತ್ತೀಚೆಗೆ ಸಮಂತಾ ರುತ್ ಪ್ರಭು ಅವರ 'ಶಾಕುಂತಲಂ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈಗ ಅವರು 'ದೇವರ' ದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ.

6 ವರ್ಷದ ಅರ್ಹ 'ದೇವರ' ಚಿತ್ರಕ್ಕೆ ಪಡೆಯುತ್ತಿದ್ದಾರೆ ಎನ್ನಲಾದ ಸಂಭಾವನೆ ಕೂಡ ಸುದ್ದಿಯಾಗುತ್ತಿದೆ. ವರದಿಗಳ ಪ್ರಕಾರ, ಅವರು ಚಿತ್ರದಲ್ಲಿ 10 ನಿಮಿಷಗಳ ಪಾತ್ರವನ್ನು ಹೊಂದಿರುತ್ತಾರೆ. ಇದಕ್ಕಾಗಿ ಅವರಿಗೆ 20 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.  

ಇದನ್ನೂ ಓದಿ: ರಾಮ್ ಚರಣ್ ಸಿನಿಮಾದಿಂದ ವಿಶೇಷ ಮನ್ನಣೆ..ಸ್ಟಾರ್ ಹೀರೋ ಜೊತೆ ಮದುವೆ..500 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ನಟ ಈಕೆ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News