ಲಂಡನ್‌ನಲ್ಲಿ ಮಲ್ಯ ಮಗನ ವಿವಾಹ.. ಅದ್ಧೂರಿಯಾಗಿ ಗೆಳತಿಯ ಕೈ ಹಿಡಿದ ಸಿದ್ಧಾರ್ಥ್! ಪೋಟೋಸ್ ವೈರಲ್!!
famous businessman Vijay Mallya Son Marriage: ಖ್ಯಾತ ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಲಂಡನ್ ನಲ್ಲಿ ವಿವಾಹವಾಗಿದ್ದಾರೆ. ಅವರ ಮದುವೆಯಲ್ಲಿ ಆಪ್ತರು ಮಾತ್ರ ಭಾಗವಹಿಸಿದ್ದರು.
Vijay Mallya: ವಿಜಯ್ ಮಲ್ಯ ಭಾರತದ ದೊಡ್ಡ ಉದ್ಯಮಿಗಳಲ್ಲಿ ಒಬ್ಬರು. ಏರ್ ಲೈನ್ ಕಂಪನಿ, ಬಿಯರ್ ಕಂಪನಿ, ಐಪಿಎಲ್ ಟೀಂವೊಂದನ್ನು ರಾಜಾರೋಷವಾಗಿ ಜೀವನ ನಡೆಸುತ್ತಿದ್ದ ಈತ ಬ್ಯಾಂಕ್ ಗಳಲ್ಲಿ ಅಪಾರ ಸಾಲ ಮಾಡಿಕೊಂಡಿದ್ದ. ಹೀಗಾಗಿ ಹೆಚ್ಚುತ್ತಿರುವ ಸಾಲಗಳಿಂದಾಗಿ ಲಂಡನ್‌ನಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದರು. ವಿಜಯ್ ಮಲ್ಯ ಅವರಿಗೆ ಸಿದ್ಧಾರ್ಥ್ ಮಲ್ಯ ಎಂಬ ಮಗನಿದ್ದಾನೆ.
ಮಲ್ಯ ಪುತ್ರ ಸಿದ್ದಾರ್ಥ ಹೆಸರು ಅನೇಕ ನಟಿಯರೊಂದಿಗೆ ತಳುಕು ಹಾಕಿಕೊಂಡಿತ್ತು.. ಅದರಲ್ಲೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಸಂಬಂಧ ಸಖತ್ ಸೌಂಡ್ ಮಾಡಿತ್ತು..
ಇದನ್ನೂ ಓದಿ-ಸಲ್ಮಾನ್ ಖಾನ್ ಈ ಯೋಚನೆಯೇ ಆತ ಇಂದಿಗೂ ಮದುವೆಯಾಗದಿರಲು ಕಾರಣ !ಸತ್ಯ ಬಿಚ್ಚಿಟ್ಟ ತಂದೆ ಸಲೀಂ
ಇನ್ನು ಕೆಲವು ವರ್ಷಗಳಿಂದ ಸಿದ್ಧಾರ್ಥ್ ಮತ್ತು ಜಾಸ್ಮಿನ್ ಪ್ರೀತಿಸುತ್ತಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು.. ಅಮೆರಿಕದ ಪ್ರಸಿದ್ಧ ಹಬ್ಬಗಳಲ್ಲೊಂದಾದ ಹ್ಯಾಲೋವೀನ್ ಸಮಯದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದರು..
ಕಳೆದ ಶನಿವಾರ ಲಂಡನ್‌ನಲ್ಲಿ ಸಿದ್ಧಾರ್ಥ್ ಜಾಸ್ಮಿನ್ ಅವರ ಕೈ ಹಿಡಿದರು.. ಆದರೆ ಅವರ ಮದುವೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಿದ್ಧಾರ್ಥ್-ಜಾಸ್ಮಿನ್ ಜೋಡಿಯ ಮದುವೆಯಲ್ಲಿ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಈ ಜೋಡಿಯ ಸುಂದರ ಮದುವೆಯ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಸಿದ್ಧಾರ್ಥ್-ಜಾಸ್ಮಿನ್ ದಂಪತಿಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಇದನ್ನೂ ಓದಿ-ಬನಾರಸಿ ಸೀರೆಯಲ್ಲಿ ಮಿಂಚಿದ ನವ ವಧು..!ಸೋನಾಕ್ಷಿ ಸಿನ್ಹ ಉಟ್ಟ ಸೀರೆಯ ಬೆಲೆ ಎಷ್ಟು ಗೊತ್ತಾ..?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.