ಚಿತ್ರರಂಗಕ್ಕೆ ಬಿಗ್ಶಾಕ್.. ʼಈʼ ಖ್ಯಾತ ನಟಿಯೊಂದಿಗೆ ಎರಡನೇ ಮದುವೆಗೆ ರೆಡಿಯಾದ ನಟ ಧನುಷ್!
Actor Dhanush second marriage: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ವಿಚ್ಛೇದನ ನೀಡಲು ಸಿದ್ಧವಾಗಿರುವ ಹೊತ್ತಲ್ಲೇ ಧನುಷ್ ಸದ್ಯದಲ್ಲೇ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Actor Dhanush: ಕಾಲಿವುಡ್ ನಲ್ಲಿ ಧನುಷ್ ಸ್ಟಾರ್ ಹೀರೋ. 2004 ರಲ್ಲಿ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾ ಅವರನ್ನು ವಿವಾಹವಾದರು. ದಂಪತಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಧನುಷ್ ಅವರನ್ನು ಮದುವೆಯಾದ ನಂತರ, ಐಶ್ವರ್ಯಾ ಅವರ ಸಹೋದರ ಸೆಲ್ವರಾಘವನ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು ಮತ್ತು 2012 ರಲ್ಲಿ 3 ಚಿತ್ರಗಳೊಂದಿಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.
ಅವರ ನಿರ್ದೇಶನದ ಚೊಚ್ಚಲ 3 ಚಿತ್ರದ ವೈ ದಿಸ್ ಕೊಲವೆರಿ ಹಾಡು ದೊಡ್ಡ ಹಿಟ್ ಆಯಿತು. ಹಾಡುಗಳು ಹಿಟ್ ಆದಷ್ಟು ಸಿನಿಮಾ ಹಿಟ್ ಆಗಲಿಲ್ಲ. ಇದರಿಂದ ಐಶ್ವರ್ಯಾ ಅವರ ಮೊದಲ ಚಿತ್ರ ಫ್ಲಾಪ್ ಆಗಿತ್ತು. ಐಶ್ವರ್ಯಾ ರಜನಿಕಾಂತ್ ನಂತರ ಗೌತಮ್ ಕಾರ್ತಿಕ್ ಅಭಿನಯದ ವೈ ರಾಜ ವೈ ಚಿತ್ರವನ್ನು ನಿರ್ದೇಶಿಸಿದರು. ಈ ಸಿನಿಮಾದಲ್ಲಿ ಧನುಷ್ ಕ್ಲೈಮ್ಯಾಕ್ಸ್ ನಲ್ಲಿ ಕೋಕಿ ಕುಮಾರ್ ಆಗಿ ಕಾಣಿಸಿಕೊಂಡು ಮಾಸ್ ಆಗಿ ನಟಿಸಿದ್ದರು. ಆದರೆ ಈ ಸಿನಿಮಾ ಕೂಡ ಅಷ್ಟಾಗಿ ಸದ್ದು ಮಾಡಲಿಲ್ಲ..
ಇದನ್ನೂ ಓದಿ-ನನಗೆ ಕಾಜೋಲ್ ಜೊತೆ ಆ ಕೆಲಸ ಮಾಡುವ ಆಸೆ..! ಬಯಕೆ ಬಿಚ್ಚಿಟ್ಟ ದುಲ್ಕರ್, ಫ್ಯಾನ್ಸ್ ಶಾಕ್...
ಇದರೊಂದಿಗೆ ಐಶ್ವರ್ಯಾ ಸಿನಿಮಾದಿಂದ ವಿರಾಮ ತೆಗೆದುಕೊಂಡು ತಮ್ಮ ವೈಯಕ್ತಿಕ ಬದುಕಿನತ್ತ ಗಮನ ಹರಿಸಿದ್ದಾರೆ. ಇದಲ್ಲದೆ, ಅವರು ಫಿಟ್ನೆಸ್ನಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಕಾಲಕಾಲಕ್ಕೆ Instagram ನಲ್ಲಿ ವರ್ಕ್ಔಟ್ ಮಾಡುವ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಮತ್ತೊಂದೆಡೆ, ಧನುಷ್ ಹಿಟ್ ಮತ್ತು ಫ್ಲಾಪ್ಗಳನ್ನು ಲೆಕ್ಕಿಸದೆ ಸತತವಾಗಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಹೀಗೆ ಸಲೀಸಾಗಿ ಸಾಗುತ್ತಿದ್ದ ಧನುಷ್ ಮತ್ತು ಐಶ್ವರ್ಯ ಜೀವನದಲ್ಲಿ ದಿಢೀರ್ ಆಗಿ ವಿಚ್ಛೇದನದ ಕೋಲಾಹಲ ಎದ್ದಿದೆ.
ಈ ಸ್ಟಾರ್ ಜೋಡಿ 2022 ರಲ್ಲಿ ವಿಚ್ಛೇದನ ಮತ್ತು ಬೇರ್ಪಡುವುದಾಗಿ ಘೋಷಿಸಿತು. ಧನುಷ್ ಐಶ್ವರ್ಯ ತೆಗೆದುಕೊಂಡ ಈ ನಿರ್ಧಾರ ರಜನಿ ಜೊತೆಗೆ ಅನೇಕರನ್ನು ಬೆಚ್ಚಿ ಬೀಳಿಸಿದೆ. ಎರಡೂ ಕಡೆಯ ಸಂಬಂಧಿಕರೊಂದಿಗೆ ಮಾತುಕತೆ ನಡೆಸಿ ವಿಚ್ಛೇದನದ ನಿರ್ಧಾರವನ್ನು ಮುಂದೂಡುತ್ತಿದ್ದ ಧನುಷ್ ಮತ್ತು ಐಶ್ವರ್ಯ ಎರಡು ವರ್ಷಗಳ ನಂತರ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ... ಇನ್ನು ಇವರಿಬ್ಬರ ಸಂಪರ್ಕ ಸಾಧ್ಯತೆ ಇಲ್ಲ ಅನ್ನೋದು ಕೋರ್ಟ್ ಮೆಟ್ಟಿಲು ಹತ್ತುವ ಮೂಲಕ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಮಗನ ಮನಸ್ಸು ಬದಲಾಯಿಸಲು ಧನುಷ್ ತಂದೆ ಕಸ್ತೂರಿ ರಾಜ ಮಾಡಿದ ಪ್ರಯತ್ನವೂ ವಿಫಲವಾಗಿದೆ. ಇದರೊಂದಿಗೆ ಅವರು ತಮ್ಮ ಮಗನಿಗೆ ಎರಡನೇ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಲಿವುಡ್ ವಲಯಗಳಲ್ಲಿ ಗುಸು ಗುಸು ಶುರುವಾಗಿದೆ.. ಸಿನಿಮಾದಲ್ಲಿ ಕೆಲಸ ಮಾಡುವ ಹುಡುಗಿಯರು ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವ ಅವರು ಈಗ ಬೇರೆ ಯಾವುದಾದರೂ ಕ್ಷೇತ್ರಲದಲ್ಲಿ ಕೆಲಸ ಮಾಡುತ್ತಿರುವ ಹುಡುಗಿಯನ್ನ ನೋಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದರಲ್ಲಿ ಎಷ್ಟರಮಟ್ಟಿಗೆ ಸತ್ಯ ಎಂಬುದು ತಿಳಿದುಬಂದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ