`ರಂಗಸ್ಥಳ` ಸಿನಿಮಾದ ಮೂಲಕ ಖ್ಯಾತ ಮಲಯಾಳಂ ನಟ ಮತ್ತೆ ಸ್ಯಾಂಡಲ್ ವುಡ್ ಗೆ ಖಳನಾಯಕನಾಗಿ
Rangasthala : ಖ್ಯಾತ ಮಲಯಾಳಂ ನಟ ಮನೋಜ್ ಕೆ ಜಯನ್ ಇದೀಗ ರಂಗಸ್ಥಳ ಚಿತ್ರದೊಂದಿಗೆ ಖಳನಾಯಕನಾಗಿ ಸ್ಯಾಂಡಲ್ ವುಡ್ ಗೆ ಮತ್ತೆ ಪಾದಾರ್ಪಣೆ ಮಾಡಿದ್ದಾರೆ.
Famous Malayalam actor returns to Sandalwood as a villain : ಬಹುತೇಕ ಹೊಸಬರಿಂದಲೇ ಕೂಡಿ ನಿರ್ಮಾಣವಾಗುತ್ತಿರುವ ರಂಗಸ್ಥಳ ಚಿತ್ರದೊಂದಿಗೆ ಮಲಯಾಳಂನ ಖ್ಯಾತ ನಟ ಮನೋಜ್ ಕೆ ಜಯನ್ ಖಳನಾಯಕನಾಗಿ ಸ್ಯಾಂಡಲ್ವುಡ್ ಗೆ ಮತ್ತೆ ಬಂದಿದ್ದಾರೆ.
2005ರಲ್ಲಿ ಕನ್ನಡದ ಉಗ್ರ ನರಸಿಂಹ ಚಿತ್ರದಲ್ಲಿ ನಟಿಸಿದ ಇವರು ಮಲಯಾಳಂ, ತಮಿಳು, ತೆಲುಗು ಸೇರಿದಂತೆ ಸುಮಾರು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ರೇವಣ್ಣ ನಿರ್ಮಿಸುತ್ತಿರುವ ಅಘೋರ ಮೋಶನ್ ಪಿಕ್ಚರ್ಸ್ ಅಡಿಯಲ್ಲಿ ಈ ಚಿತ್ರಕ್ಕೆ ಈಶ್ವರ್ ನಿತಿನ್ ಆಕ್ಷನ್ ಕಟ್ ಹೇಳಲಿದ್ದಾರೆ .
ಇದನ್ನು ಓದಿ : ಬಿಸಿಗಾಳಿ ಹಿನ್ನೆಲೆ ತೆಲಂಗಾಣದಲ್ಲಿ ಚುನಾವಣಾ ಆಯೋಗದಿಂದ ಮತದಾನದ ಸಮಯ ವಿಸ್ತರಿಣೆ
ರಂಗಸ್ಥಳ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು, ಹೆಚ್ಚಾಗಿ ಹೊಸಬರಿಗೆ ಅವಕಾಶ ಕೊಡಲಾಗಿದೆ ಮತ್ತು ಈ ಸಂಸ್ಥೆಯಿಂದ ಹೆಚ್ಚಿನ ಹೊಸಬರಿಗೆ ಅವಕಾಶ ಕೊಡುವ ಉದ್ದೇವನ್ನಿಟ್ಟುಕೊಂಡು ಮುಂದುವರೆದಿದೆ. ಅಲ್ಲದೆ ಚಿತ್ರದ ನಿರ್ಮಾಪಕ ರೇವಣ್ಣ ನಾನು ಒಬ್ಬ ರಾಜ್ಯಮಟ್ಟದ ವಾಲಿಬಾಲ್ ಆಟಗಾರ ಮತ್ತು ನನಗೆ ವಾಲಿಬಾಲ್ ಗೆ ಸಂಬಂಧಪಟ್ಟ ಚಿತ್ರವನ್ನು ನಿರ್ಮಿಸುವ ಆಸೆ ಇದೆ ಎಂದು ಹೇಳಿದ್ದಾರೆ.
ರಂಗಸ್ಥಳ ಕ್ಷೇತ್ರದಲ್ಲಿ ನಾಯಕ ನಟನಾಗಿ ಗಿರ್ಕಿ ಚಿತ್ರದಲ್ಲಿ ನಟಿಸಿದ ವಿಲೋಕ್ ರಾಜ್ ಇದೀಗ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಶಿಲ್ಪ ಕಾಮತ್ ನಾಯಕಿಯಾಗಿದ್ದು ಇದೊಂದು ಗ್ರಾಮೀಣ ಭಾಗದ ಸೊಗಡನ್ನು ತೋರಿಸುವ ಕಥೆಯಾಗಿದೆ. ಈ ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟ ಮನೋಜ್ ಕೆ ಜಯನ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಪುತ್ತೂರು, ಸುಳ್ಯ ಭಾಗದ ಭಾಷೆ, ಆಚಾರ ವಿಚಾರ, ಕಲೆ, ಆ ಭಾಗದ ಸೊಗಡನ್ನ ತೋರಿಸುವ ಒಂದು ಕಥೆಯಾಗಿದ್ದು, ಸಿನಿಮಾದಲ್ಲಿ ರಂಗಸ್ಥಳ ಎಂದರೆ ಒಂದು ವೇದಿಕೆ ರಂಗ ಕಲೆಗಳ ಪ್ರದರ್ಶನ ನಡೆಯುವ ಒಂದು ಸ್ಥಳ.
ಇದನ್ನು ಓದಿ : ಭಾರತದಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ 134 ವಾಕ್ ಸ್ವಾತಂತ್ರ್ಯ ಉಲ್ಲಂಘನೆಯ ದಾಖಲೆ
ಈ ಸಿನಿಮಾದಲ್ಲಿ ಬರುವ ಪ್ರತಿಯೊಂದು ಪಾತ್ರಧಾರಿಗೂ ಸ್ವತಹ ಅವರದ್ದೆ ಆದ ಒಂದು ಚಿಂತನೆ ಹಾಗೂ ಮನಸ್ಥಿತಿಯನ್ನು ಹೊಂದಿಕೊಂಡಿದ್ದು ಅವರು ಯಾವ ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ ರಂಗಸ್ಥಳದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವ ಕುರಿತು ಈ ಚಿತ್ರ ತೋರಿಸಿ ಕೊಡುತ್ತದೆ ಎಂದು ನಿರ್ದೇಶಕ ಈಶ್ವರ್ ನಿತಿನ್ ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.