ಆತ್ಮಹತ್ಯೆಗೆ ಶರಣಾದ ಬ್ರಹ್ಮಗಂಟು ಸಿರೀಯಲ್ ನಟಿ!
Shobitha Shivanna Passed away: ಖ್ಯಾತ ಸಿರೀಯಲ್ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.. ನಿನ್ನೆ ತಡರಾತ್ರಿ ಹೈದರಾಬಾದ್‌ನಲ್ಲಿ ಘಟನೆ ನಡೆದಿದ್ದು, ಆದರೆ ಇವರ ಸಾವಿಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.
Shobitha Shivanna: ಮೂಲತಃ ಹಾಸನದವರಾದ ನಟಿ ಶೋಭಿತಾ ಶಿವಣ್ಣ ಎರಡು ವರ್ಷಗಳ ಹಿಂದೆ ಮದುವೆಯಾಗಿ ಹೈದರಾಬಾದ್‌ನಲ್ಲಿ ವಾಸವಾಗಿದ್ದರು.. ಅದರ ಬಳಿಕ ತಾರಾ ಲೊಕದಿಂದ ದೂರವಾಗಿದ್ದರು.. ಇದೀಗ ಶೋಭಿತಾ ಅವರು ಆತ್ಮಹತ್ಯ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಅವರ ಕುಟುಂಬಸ್ಥರಿಗೆ ಹಾಗೂ ಕಿರುತೆರೆ ಪ್ರೇಕ್ಷಕರಿಗೆ ಶಾಕ್ ನೀಡಿದೆ..
ಮರಣೋತ್ತರ ಪರೀಕ್ಷೆ ನಡೆದ ನಂತರ ನಟಿಯ ಮೃತದೇಹವನ್ನು ಬೆಂಗಳೂರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.. ಆತ್ಮಹತ್ಯೆ ಮಾಡಿಕೊಂಡ ಈ ಚೆಲುವೆ ಸಾವಿಗೂ ಮುನ್ನ ಪೋಟೋವೊಂದನ್ನು ಶೇರ್ ಕೂಡಾ ಮಾಡಿದ್ದಾರೆ.. ಅದರ ಬಳಿಕವೇ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.. ಆದರೆ ಇವರ ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂಬುದು ತಿಳಿದುಬಂದಿಲ್ಲ..
ನಟಿ ಶೋಭಿತಾ ಶಿವಣ್ಣ ಫಸ್ಟ್ ಡೇ ಫಸ್ಟ್ ಶೋ ಎಂಬ ಸಿನಿಮಾದಲ್ಲಿ ನಟಿಸಿದ್ದರು.. ಇದಲ್ಲದೇ ಬ್ರಹ್ಮಗಂಟು ಸೇರಿದಂತೆ ಹಲವಾರು ಜನಪ್ರಿಯ ಧಾರವಾಹಿಗಳಲ್ಲಿ ಮಿಂಚಿದ್ದರು.. ಕಿರುತೆರೆ ಲೋಕದಲ್ಲಿ ಟಾಪ್ ನಟಿಯಾಗಿದ್ದ ಇವರು ಇಷ್ಟು ಬೇಗ ಬಾರದ ಲೋಕಕ್ಕೆ ತೆರಳಿದ್ದು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.