Kriti sanon marriage: ಈ ವರ್ಷ ಮದುವೆ ಸುಗ್ಗಿ ಜೋರಾಗಿದೆ. ಸೆಲಿಬ್ರಿಟಿಗಳು ಈ ವರ್ಷದ ಆರಂಭದಿಂದಲೇ ಒಬ್ಬರಾದ ಮೇಲೆ ಒಬ್ಬರು ಹಸೆಮಣೆ ಏರುತ್ತಿದ್ದಾರೆ. ಇದೀಗ ಮತ್ತೊಬ್ಬ ಸ್ಟಾರ್‌ ನಟಿ ಕೂಡ ಮದುವೆಯಾಗಬಹುದೆಂಬ ವದಂತಿ ಬಾಲಿವುಡ್‌ ಅಂಗಳದಲ್ಲಿ ಶುರುವಾಗಿದೆ. 


COMMERCIAL BREAK
SCROLL TO CONTINUE READING

ಕೃತಿ ಸನನ್ ಮತ್ತು ಕಬೀರ್ ಬಹಿಯಾ ಡೇಟಿಂಗ್ ರೂಮರ್ಸ್ ಈ ವರ್ಷದ ಆರಂಭದಿಂದಲೂ ಸಾಕಷ್ಟು ಸುದ್ದಿಯಲಿದೆ. ಕೃತಿ ಸನನ್ ಮತ್ತು ಕಬೀರ್ ಬಹಿಯಾ ಇಬ್ಬರೂ ದುಬೈನಲ್ಲಿರುವ ಫೋಟೋಸ್ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಇದೀಗ ಕೃತಿ ಮಿಲಿಯನೇರ್ ಉದ್ಯಮಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು, ಅವರನ್ನೇ ಮದುವೆಯೂ ಆಗಬಹುದು ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ: ದೀಪಿಕಾ ಪಡುಕೋಣೆಗೆ ಗಂಡು ಮಗು ಜನನ.. ವೈರಲ್‌ ಆಗ್ತಿದೆ ತಾಯಿ ಮಗುವಿನ ಫೋಟೋ !?


ಕೃತಿ ಸನನ್  ಹುಟ್ಟುಹಬ್ಬದ ಕೆಲವು ಫೋಟೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕೃತಿ ಯುಕೆ ಮೂಲದ ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ಸ್ ಮಧ್ಯೆ ಈ ಫೋಟೋಗಳು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿವೆ. ಕೃತಿ 34ನೇ ಹುಟ್ಟುಹಬ್ಬವನ್ನು ಉದ್ಯಮಿ ಕಬೀರ್ ಬಹಿಯಾ ಜೊತೆ ಸೆಲಿಬ್ರೇಟ್‌ ಮಾಡಿದ್ದನ್ನು ಈ ಫೋಟೋಗಳಲ್ಲಿ ಕಾಣಬಹುದು. ಈ ಫೋಟೋ ವೈರಲ್‌ ಆದ ಬಳಿಕ ಅವರ ಲವ್ ಮ್ಯಾಟರ್ ವೈರಲ್ ಆಗ್ತಿದೆ. 


ಕಬೀರ್ ಬಹಿಯಾ ಅವರ ತಂದೆ ಕುಲ್ಜಿಂದರ್ ಬಹಿಯಾ ಸೌತಾಲ್ ಟ್ರಾವೆಲ್‌ನ ಸಂಸ್ಥಾಪಕರು. ಕಬೀರ್ ಯುಕೆಯಲ್ಲಿ ಬಹು ಮಿಲಿಯನೇರ್ ಉದ್ಯಮಿ ಆಗಿದ್ದಾರೆ. ಲಂಡನ್‌ನ ಶ್ರೀಮಂತ ಕುಟುಂಬಗಳಲ್ಲಿ ಬಹಿಯಾ ಫ್ಯಾಮಿಲಿ ಕೂಡ ಒಂದಾಗಿದೆ. 


ಈ ಕುಟುಂಬದ ಒಟ್ಟು ಸಂಪತ್ತು ಸುಮಾರು 3500 ಕೋಟಿ ಎಂದು ಹೇಳಲಾಗಿದೆ. ಕಬೀರ್ ಲಂಡನ್‌ನಲ್ಲಿಯೇ ವಾಸಿಸುತ್ತಿದ್ದಾರೆ. ಕೃತಿ 34 ವರ್ಷ ವಯಸ್ಸಿನವರಾಗಿದ್ದು, ಕಬೀರ್ ವಯಸ್ಸು 24 ವರ್ಷದವರೆಂದು ಕೆಲವು ವರದಿಗಳು ಹೇ:ಉತ್ತಿವೆ. ಕೃತಿಗಿಂತ ಕಬೀರ್ 10 ವರ್ಷ ಚಿಕ್ಕವರೆಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ನನ್ನ ಬಾಡಿ.. ನಾನು ಹೀಗೆಯೇ ಶೋ ಆಫ್‌ ಮಾಡ್ತೀನಿ: ನಟಿ ಅನಸೂಯ ಸೆನ್ಸೇಷನಲ್‌ ಕಾಮೆಂಟ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.