trisha: ತ್ರಿಶಾ ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ತೆಲುಗಿನಲ್ಲಿ ಟಾಪ್ ಹೀರೋಯಿನ್. ಯಂಗ್ ಹೀರೋಯಿನ್ ಗಳು ಎಂಟ್ರಿ ಕೊಡುತ್ತಿದ್ದಂತೆ ತ್ರಿಷಾ ಕ್ರೇಜ್ ಕಡಿಮೆಯಾಯಿತು. ಆದರೆ ಇತ್ತೀಚಿಗೆ ತ್ರಿಶಾ ಮತ್ತೆ ಸರಣಿ ಚಿತ್ರಗಳಲ್ಲಿ ನಟಿಸಿ ಫುಲ್ ಬ್ಯುಸಿಯಾಗಿದ್ದಾರೆ. ಪೊನ್ನಿಯನ್‌ ಸೆಲ್ವಂ ಚಿತ್ರದ ಎರಡು ಭಾಗಗಳಲ್ಲಿ ರಂಜಿಸಿರುವ ತ್ರಿಶಾ, ತಮಿಳಿನ ಸ್ಟಾರ್ ವಿಜಯ್ ಮತ್ತು ಲೋಕೇಶ್ ಕನಕರಾಜ್ ಕಾಂಬಿನೇಷನ್ ನಲ್ಲಿ ತಯಾರಾದ ಲಿಯೋ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.


COMMERCIAL BREAK
SCROLL TO CONTINUE READING

 ಲಿಯೋ ಚಿತ್ರದ ಯಶಸ್ಸಿನಿಂದ ತ್ರಿಷಾ ಬೇಡಿಕೆ ಹೆಚ್ಚಿದೆ. ಸದ್ಯ ಈ ಚೆಲುವೆ ಬೆರಳೆಣಿಕೆಯ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಸ್ಟಾರ್ ಹೀರೋಗಳಾಗಿ ಮಿಂಚುತ್ತಿರುವ ಚಿರಂಜೀವಿ, ವಿಜಯ್, ಅಜಿತ್, ಕಮಲ್, ಮೋಹನ್ ಲಾಲ್ ಅವರ ಸಿನಿಮಾಗಳಲ್ಲಿ ತ್ರಿಶಾ ಬ್ಯುಸಿಯಾಗಿದ್ದಾರೆ. ಅವರ ಸಹ ನಾಯಕಿಯರೆಲ್ಲಾ ಮದುವೆಯಾಗಿ ಸೆಟಲ್ ಆಗಿದ್ದಾರೆ ಆದರೆ ತ್ರಿಷಾ ಇನ್ನೂ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕಿಂತ ಮಿಗಿಲಾಗಿ ತ್ರಿಷಾ ಕ್ರೇಜ್ ಹಿಂದೆಂದಿಗಿಂತಲೂ ಹೆಚ್ಚಾಗಿದೆ. 


ಇದನ್ನೂ ಓದಿ-ಈ ವಾರ ತೆರೆಗೆ "ಯಲಾಕುನ್ನಿ" ; ವಜ್ರಮುನಿ ಲುಕ್ ನಲ್ಲಿ ಕೋಮಲ್ ಕಮಾಲ್


 ತ್ರಿಷಾ ಅವರ ವೈಯಕ್ತಿಕ ಜೀವನಕ್ಕೆ ಬಂದರೆ.. ಅವರು ಉದ್ಯಮಿಯನ್ನು ಮದುವೆಯಾಗ ಹೊರಟಿದ್ದರು.. ನಿಶ್ಚಿತಾರ್ಥದವರೆಗೂ ಸಾಗಿದ ಇವರ ಮದುವೆ ಅರ್ಧಕ್ಕೆ ನಿಂತಿತ್ತು. ಅಂದಿನಿಂದ ತ್ರಿಷಾ ಒಂಟಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ತ್ರಿಶಾ ಇತ್ತೀಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೋಗಳನ್ನು ಹಾಕಿದ್ದಾರೆ. ಈ ಫೋಟೋಗಳಿಗೆ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.


ತ್ರಿಶಾ ನಾಯಕ ವಿಜಯ್ ಜೊತೆ ವಿಹಾರಕ್ಕೆ ಹೋಗಿದ್ದಾರೆ ಎಂದು ಕೆಲ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ತಮಿಳಿನ ಸ್ಟಾರ್ ಹೀರೋ ವಿಜಯ್ ಮತ್ತು ನಾಯಕಿ ತ್ರಿಷಾ ಅವರ ಬಗ್ಗೆ ವದಂತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗೊತ್ತೇ ಇದೆ. ಇವರಿಬ್ಬರು ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ನಾಯಕ ವಿಜಯ್ ಪತ್ನಿಗೆ ವಿಚ್ಛೇದನ ನೀಡಲು ರೆಡಿಯಾಗುತ್ತಿದ್ದಾರೆ. ವಿಜಯ್ ತನ್ನ ಪತ್ನಿಗೆ ವಿಚ್ಛೇದನ ನೀಡಿ ತ್ರಿಷಾಳನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ... ಸದ್ಯ ತ್ರಿಶಾ ಮೊರಾಕೊದಲ್ಲಿ ರಜೆಯಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ವೈರಲ್ ಆಗಿವೆ.


ಇದನ್ನೂ ಓದಿ-Divya Uruduga: ಮದುವೆ ಫೋಟೋ ಶೇರ್‌ ಮಾಡಿದ ದಿವ್ಯಾ ಉರುಡುಗ... ಅರವಿಂದ್ ಕೆಪಿ ಅಲ್ಲ, ಈ ಖ್ಯಾತ ನಟನ ಜೊತೆ ನಡೆದೇ ಹೋಯ್ತು ವಿವಾಹ!


https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T