Hebah Patel : ಹೆಬ್ಬಾ ಪಟೇಲ್‌ ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತ ಹುಡುಗಿ. ತನ್ನ ಗ್ಲಾಮರ್‌, ಬೋಲ್ಡ್‌ ಲುಕ್‌ ಮತ್ತು ಉತ್ತಮ ನಟನೆಯಿಂದಾಗಿ ಸಾಕಷ್ಟು ಪ್ಯಾನ್ಸ್‌ ಪಾಲೋಯಿಂಗ್‌ ಹೊಂದಿರುವ ನಟಿ. ಕನ್ನಡದಲ್ಲಿ ಒಂದೇ ಒಂದು ಸಿನಿಮಾ ಮಾಡಿದ್ರೂ ಸಹ ಕನ್ನಡಿಗರಿಗೆ ಈಕೆ ಚಿರಪರಿಚಿತೆ. ಇದೀಗ ಹೆಬ್ಬಾ ನ್ಯೂ ಲುಕ್‌ ನೋಡಿ ಪ್ಯಾನ್ಸ್‌ ಶಾಕ್‌ಗೆ ಒಳಗಾಗಿದ್ದಾರೆ.


COMMERCIAL BREAK
SCROLL TO CONTINUE READING

ಸ್ಯಾಂಡಲ್‌ವುಡ್‌ ನಟ ಶರಣ್‌ ಅಭಿನಯದ ಅಧ್ಯಕ್ಷ ಸಿನಿಮಾ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟು ಇದೀಗ ತಮಿಳು, ತೆಲುಗು ಚಿತ್ರರಂಗದಲ್ಲಿ ಸಖತ್‌ ಬ್ಯುಸಿಯಾಗಿರುವ ಹೆಬ್ಬಾ ಪಟೇಲ್‌ ನ್ಯೂ ಲುಕ್‌ ನೋಡಿ ಅವರ ಅಭಿಮಾನಿಗಳಿಗೆ ಶಾಕ್‌ ಉಂಟಾಗಿದೆ. ಸಖತ್‌ ಬೋಲ್ಡ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಚೆಲುವೆ ಹೆಚ್ಚಾಗಿ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಮುಂಬೈ ಬ್ಯೂಟಿ ಭೀಷ್ಮ, ರೆಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರ ಹೆಚ್ಚು ಅವಕಾಶಗಳು ಬಂದಿರಲಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರು ಹೆಬ್ಬಾ ಇತ್ತೀಚೆಗೆ ಹಂಚಿಕೊಂಡ ಫೋಟೋಗಳು ವೈರಲ್ ಆಗುತ್ತಿವೆ.


Nandini Gupta : 19ರ ಹರೆಯದಲ್ಲೇ ʼಮಿಸ್‌ ಇಂಡಿಯಾʼ ಪಟ್ಟ ಪಡೆದ ನಂದಿನಿ..! ಈಕೆ ಯಾರ್‌ ಗೊತ್ತಾ..?


ಹೌದು.. ಹೆಬ್ಬಾ ಪಟೇಲ್ ಹೆಸರಿನ ಕೊನೆಯಲ್ಲಿರುವ ʼಪಟೇಲ್ʼ ಎಂಬ ಹೆಸರನ್ನು ನೋಡಿ ಎಲ್ಲರೂ ಈಕೆ ಗುಜರಾತಿ ಅಂತ ಭಾವಿಸಿದ್ದರು. ಆದರೆ ಆಕೆ ಮುಸ್ಲಿಂ ಅಂತ ತಿಳಿದು ಎಲ್ಲರೂ ಅಚ್ಚರಿಗೊಂಡಿದ್ದಾರೆ. ರಂಜಾನ್ ತಿಂಗಳಲ್ಲಿ, ಸಾಂಪ್ರದಾಯಿಕ ಬುರ್ಕಾದಲ್ಲಿ ಹೆಬ್ಬಾ ನೋಡಿ ಆಕೆಯ ಪ್ಯಾನ್ಸ್‌ ಶಾಕ್‌ ಆಗಿದ್ದಾರೆ. ಇತ್ತೀಚಿಗೆ ಹೆಬ್ಬಾ ಮುಸಲ್ಮಾನರ ಪವಿತ್ರ ಸ್ಥಳವಾದ ಮೆಕ್ಕಾ ಮದೀನಾದಲ್ಲಿ ಉಮ್ರಾ ಯಾತ್ರೆ ಹೋಗಿದ್ದರು. ಆ ವೇಳೆ ತೆಗೆದ ಫೋಟೋಗಳನ್ನು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ಇದೀಗ ಆ ಪೋಟೋಗಳು ನೆಟ್ಟಿಗರ ಗಮನ ಸೆಳೆದಿವೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.